
ಹನಿಹನಿಸೋ ಮುತ್ತ ಮಳೆಗೆ ಇಳೆಯ ಕಣ್ಣೊಳೆನಿತೊ ಕಾತುರ ಬಾನ ಇನಿಯನೊಲವಿಗಾಗಿ ಧರೆಗೆ ನಿತ್ಯ ಸಡಗರ || ಬಿರಿದ ಕುಸುಮ ಅರಳು ಸುಮವು ಒಲಿದ ಹೃದಯದ ಪ್ರೀತಿಗೆ ಕೆರೆ-ತೊರೆ ಸರೋವರ ನದನದಿಗಳಲ್ಲೂ ಜೊನ್ನ ಕಿರಣದ ಅಂದುಗೆ || ಪ್ರೇಮ ಸಂದೇಶ ಹೊತ್ತ ಹಕ್ಕಿ ಸ...
ಯಾವ ಶುಭಗಳಿಗೆಯಲಿ ಪ್ರಕೃತಿ ತಾನುದೆಯಿಸಿತೊ ಆವ ಶುಭ ವೇಳೆಯಲಿ ಜೀವ ಕಣ್ ತೆರೆಯಿತೊ ಅಮೃತ ಸೆಲೆ ನೆಲೆಯಂತೋ ದಯವಲೀಲೆ ||ಪ|| ಶುಭೋದಯದ ಹಗಲಿರುಳಿನಲಿ ನವೋದಯದ ಬಾಳ ಬೆಳಕು ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ ||ಅ.ಪ|| ಈ ಮಣ್ಣು ಕಣ ಕಣದಿ ಹರಿವ ತೊರ...
ನಾವು ಮುಳುಗುವುದಿಲ್ಲ ಏಳುವವರು ನಾವಲ್ಲ ಮುಳುಗೇಳು ಬೀಳುಗಳ ಸಂಕರಗಳೆಮಗೆ ಸಲ್ಲ ಜಡದ ಸೋಂಕುಗಳಿರದ ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು ಸಮಯಾತಿ ಸಮಯಗಳು ಸಮ ವಿಷಮಾದಿ ನಿಯತಿಗಳು ನಿಮ್ಮ ಹಾದಿಯ ಹೂ-ಮುಳ್ಳ ಹಾಸು ಇತಿ-ಮಿತಿಯ ಮತಿಗೀತ ಸ್ತುತಿ-ನಿಂದೆ...
ಭೂರಮೆಯ ಭೌಮದನಿಕೇತನಕೆ ಭಾಷ್ಯ ಬರೆಯುವುದೆಂತು ಬರಿ ಮಾತು || ಮೌನ ತವಸಿಯ ತಪದಾ ನೆಲೆಯಲಿ ಮಾತಿಗೆಲ್ಲಿಯ ಕಾಲ ಸಂದಲಹುದು || ಎತ್ತರೆತ್ತರ ಶೃಂಗಾರನಂಗವು ಮೌನ ಹಿಮದ ಪಾದಾದಿಯಲು ಮತ್ತೆ ಮೌನ || ಕಂದರಂದ್ಹರದಾಳದಳದಲೂ ನಿಃಶಬ್ದ ನೀರವ ಉಷೆಗೆ ಸಂಧ್ಯಾ...
ನಾನು ಹಕ್ಕಿ ಆದರೂಽನು ಹಾರಲಾರೆ ಇನ್ನುಽ ನಾಽನು || ಪುಕ್ಕ ಬಿಗಿದ ಕ್ರೂರಗಣ್ಣು ಯಾವ ಯುಗದ ಮಾಯೆಯೋ ಅತಂತ್ರ ತಂತ್ರ ಪಾರತಂತ್ರ್‍ಯದಲ್ಲಿ ಸ್ವತಂತ್ರ ಬರೀ ಛಾಯೆಯೋ || ಮೇಘ ಮುಗಿಲ ಮೇಲ್ಮೆ ಬಲ್ಮೆ ಸಾಲಲಿ ಶಂಕೆಯಲೆಯಲೆ ಭೀತಿಯು ಅನಿಲನಿಲದ ಕೊರಳ ರವದಲ...








