
ಮೂಲ ಪ್ರಕೃತಿಯನಾಂತು ನೋಡಿದೊಡರಿಯುವುದು ಶಾಲ್ಯ ಧಾನ್ಯಗಳೆಮಗಲ್ಲ, ಹಕ್ಕಿಗಳಾಹಾರವದು ಸುಲಿದಂತುಣಲಪ್ಪ ಹಣ್ಣುಗಳೆಮ್ಮ ಪಾಲಿನದು ಹುಲ್ಲೆಯನುಣುವ ಹುಲಿಯೆಂದು ಹುಲ್ಲುಣದು ಮಲಬದ್ಧತೆಯ ಪೇಟೆ ಬೆಳೆದಿಹುದೀ ಕಾರಣದಿ – ವಿಜ್ಞಾನೇಶ್ವರಾ *****...
ಸತ್ಯವನು ಎತ್ತಿ ತೋರುವ ಬೆಳಕನೊಡೆದಲ್ಲಿ ಸ್ತುತ್ಯದ ಹಸುರಿಹುದದರ ಮಧ್ಯದಲಿ ಎತ್ತಿ ಹೇಳುವುದೆಮ್ಮ ಬದುಕಿನ ಸತ್ಯವಿಹುದಿಲ್ಲಿ ಅತ್ತ ಕೆಂಪೇರಿ ಗರ ಬರ ಬಾರದಿರಲಿ ಇತ್ತ ನೀಲಿಮದ ನೆರೆಯೇರದಿರಲಿ – ವಿಜ್ಞಾನೇಶ್ವರಾ *****...
ಮನೆ ಮನೆಯೊಳೆಮಗೆಷ್ಟೊಂದು ಅಡುಗೆ ಯನುಕೂಲವಿರುತ್ತಿರಲೇನು ಮಲವೆದ್ದು ಘಂ ಮೈನುವ ಬೀದಿ ಬದಿಯನ್ನದಾತುರವೋ? ಮನೆ ಮಡದಿ ಮಕ್ಕಳೊಲವಿನಲಿ ಉಂಬನ್ನ ತನು ಮನವಾಗೆ ಮನೆಯೆ ಮಂದಿರವಕ್ಕು – ವಿಜ್ಞಾನೇಶ್ವರಾ *****...
ಸುರಿದಳೆದು ಕೊಡಬಹುದು ದೊಡ್ಡವರೊಂದಷ್ಟು ತೆರಿಗೆಯದು ಸರಕಾರಕಲ್ಲದೆ ಪ್ರಕೃತಿಗ ದರೊಳಗೆ ಪಾಲಿಲ್ಲವದರಿಂದ ದಿನದಿನವು ಸೊರಗುತಿಹುದದಕಷ್ಟಿಷ್ಟು ಕೊಡುವ ವರು ಏನಿಲ್ಲದವರೆಲ್ಲರಿಗನ್ನದಾತರಾದವರು – ವಿಜ್ಞಾನೇಶ್ವರಾ *****...
ಹಸಿವಿನೊಳಂದು ಗತಿಗೆಟ್ಟು ಮರಗೆಣಸು ಬೇ ಯಿಸುತುಣುತಿದ್ದೆವೆಂದು ವಿಷಾದದೊಳೆನುವರುಂಟು ವಿಷಾದವಿಂದಧಿಕ ಜನ ಮತಿಗೆಟ್ಟು ತಿನ್ವರಲಾ ಮರಗೆ ಣಸನೇಕತರ ಕಲಬೆರಕೆಗೊಳ್ಳುತಿರಲೆಮ್ಮನ್ನದೊಳು ಶಿಶು ಡಬ್ಬದೊಳದುವೆ ಇರುತಿರಲೆಲ್ಲರಾ ಬುದ್ದಿ ಕಲಬೆರಕೆ –...
ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ – ವಿಜ್ಞಾನೇಶ್ವರಾ *****...
ಎಂದಾದರೆಲ್ಲಾದರುಂ ತಿನಲೆಮಗಪ್ಪುದಷ್ಟೇ ಅಂದೀ ಮನುಜ ಕುಲವುದಿಸಿದಂದೆಷ್ಟೋ ಅಷ್ಟೇ ಉಂಬುದಷ್ಟಾದೊಡಂ ಹತ್ತಾರುಪಟ್ಟಧಿಕ ಕಷ್ಟ ವಿಂದದನು ಗಳಿಸಲಾ ದೂರದ ಪೇಟೆ ಯಂಗಡಿ ಸೇರಿಸಲೆಲ್ಲ ಶಕುತಿಯು ನಷ್ಟ – ವಿಜ್ಞಾನೇಶ್ವರಾ *****...
ಇರುನೆಲದೊಳನ್ನ ದೊರೆಯುತಿರಲೇಕಿಂತು ನರನಲೆಯುವನೋ ಉದ್ಯೋಗವೆಂದೆನುತ ಊರೂರಲೆದು ಬಂದಿರ್‍ಪ ನೂರೊಂದಮೇಧ್ಯವ ನಾರೋಗಿಸಿದ ರಕುತದೊತ್ತಡದ ಶಕುತಿಯಿಂದೆಮದು ತಿರುತಿರುಗಿ ಬೇಕೆನಿಪ ಶಕುತಿ ಸುರೆಗಿಹುದು – ವಿಜ್ಞಾನೇಶ್ವರಾ *****...
ಅಧಿಕ ಇಳುವರಿಗೆಂದೇನೇನೋ ಮಾಡುತಲಿರಲು ಅಧಿಕವಾಗಿಹುದಲಾ ಎಮ್ಮೊಳಗೆ ರೋಗರುಜಿನಗಳು ಬದನೆ ಬೆಂಡೆಯೊಳಿದ್ದ ರೋಗವನಲ್ಲಿಂದಲೋಡಿಸ ಲದುವೆ ಬಂದಡರಿಹುದೆಮ್ಮ ತನುವಿನೊಳು ಕಾದುವಾ ವಿಷವದರ ಹಿಂದು ಹಿಂದಿನೊಳು – ವಿಜ್ಞಾನೇಶ್ವರಾ *****...
ರುಚಿಯದೆಲ್ಲಿಹುದು? ಬಿಸಿ ಕಾಫಿಯೊಳೇ? ಕಚಗುಳಿಯಯಿಸ್‌ಕ್ರೀಮಿನೊಳೇ? ದುಡಿದುಣುವ ಹಚ್ಚ ಹಸಿವಿನೊಳೇ? ದುಡಿಮೆ ಕಷ್ಟವೆಂದೊಡಾ ರುಚಿಯನುಚ್ಛ ನೀಚೋಷ್ಣತೆಗೇರಿಸಲಿಳಿಸಲು ಹಚ್ಚ ಹಸಿರಿಂಗೆಷ್ಟು ಕಷ್ಟವಿಹುದೆಂದರಿತಿಹಿರಾ ? – ವಿಜ್ಞಾನೇಶ್ವರಾ ***...








