ನಲುವತ್ತೈದರ ಪ್ರಾಯದಲ್ಲಿ ರಾಜಕಾರಣಿಗೆ ತ್ರಿವಳಿ ಮಕ್ಕಳಾದದ್ದು ದೈವಫಲ ‘ವಿರೋಧ ಪಕ್ಷದವರೇ ಕಾರಣ’ ಎಂದು ನುಡಿಸಿದ್ದು ಮಾತ್ರ ಆತನ ಅಭ್ಯಾಸಬಲ *****...
ಕೌತುಕದ ಕನ್ಯೆ ನೀನೇತಕೀ ಪರಿಯನ್ನ ನಿಡು ನೋಟ ನಿಲಿಸಿ ನೋಡುತಿಹೆ? ನೋಟದ ಗೂಡ ಎನ್ನಂತರಂಗವ ಪೊಕ್ಕು ಮನದ ಕಿವಿಯೊಳೇನ ಹೇಳುತಿಹೆ? ಈಸು ದಿನಗಳವರೆಗೆ ಮೀಸಲಾಗಿಹ ನನ್ನ ಮನದ ಮಂದಾರವ ಮೂಸುತಿಹೆ ಅರೆ ಅರಳಿದ ಆತ್ಮದರವಿಂದ-ಮಕರಂದ ನನಗೂ ಅರಿಯದೆ ಹೀರುತಿ...
ಅದಿಗೊ ದೆಸೆಕೂಡುವೆಡೆ ತಿರೆಗೂರುತಿದೆ ಮುಗಿಲು ಹೆಬ್ಬಿದಿರ ಮೆಳೆಯ ಚೆಲುವನು ತೋರಿ, ಬಿಳಲೂರಿ ಹಬ್ಬಿರುವ ಮಹಾವಟವೃಕ್ಷದೊಲು ಹಸರಿಸುತ ಇದೆಕೊ ಎನುತಿದೆ ನನಗೆ ಮೈಬಿಡದ ಮಿಂಚಿನೊಳು ಕಾರೊಡಲ ಬಣ್ಣದೊಳು ತನ್ನ ಪನ್ನತಿಕೆಯನು ಮೆರೆವ ಗುಡುಗಿನೊಳು ಗಿರಿಮ...
(ಇನ್ನೊಂದು ಸಂವಾದ) ಲೋಕದೊಳಗೆಲ್ಲರೂ ಸೌಖ್ಯದಿಂದಿರುತಿಹರು ಮೂಕ ಜೀವವೆ ನಿನಗು ಸಕಲವೂ ಕುಶಲವೇ? ಏಕೆ ಸಖನೇ ಈ ತದೇಕಚಿತ್ತವು ಏಕೆ? ಏಕಾಕಿಯಾಗಿರುವೆಯಾ ? *** ಶೋಕ-ಯೋಗಕ್ಷೇಮ ಕೇಳುವವರಾರವರು ಏಕಾಂತದೊಳಗೆ ಇರುವವರೆ ಇಲ್ಲದ ಮೇಲೆ? ಏಕಾಕಿಯಾಗಿರುವೆಯ...
ಪೂರ‍್ಣಿಮೆ, ಪ್ರತ್ಯುತ್ತರ ಬರೆಯಲಾರದಂತಹ ಪತ್ರವನ್ನು ಬರೆದು ಬಿಟ್ಟರುವಿ. ನನ್ನ ಗುಟ್ಟನ್ನು ಬಯಲು ಮಾಡಿರುವಿ. ನೀನು ಏನು ಬರೆದಿರುವಿಯೋ, ಅದು ನನ್ನ ನಿಜಪರಿಸ್ಥಿತಿಯ ಪೂರ್ಣ ಚಿತ್ರವಾಗಿದೆ. ನಿನಗೂ ಇದೇ ವಿಚಾರದ ಮಂಥನವಾಗುತ್ತಿರಬಹುದು. ಆದರೂ ನಿ...
ಅವ್ವಾ, ಮಳೆಗಾಲದ ಈ ಗಾಳಿ ಕಣ್ಣಿಗೆ ಕಾಣದ ಸೊಕ್ಕಿನ ಗೂಳಿ ಮನೆಗಳ ಇರಿಯುವದು ಗಿಡಮರ ಮುರಿಯುವದು ನಾನೇ ದೇವರ ಕಿವಿಯಲಿ ಹೇಳಿ ಸೂರ್‍ಯನ ತೇರಿಗೆ ಕಟ್ಟಿಸುವೆ ಗಾಳಿಯ ಸೊಕ್ಕನು ಮೆಟ್ಟಿಸುವೆ *****...
ಮದಿರೆಯೆಂಬುದದು ತರುವದು ನರನಿಗೆ ಮಾನದ ಹಾನಿಯನೂ | ಮದಿರೆ ಸೇವನೆ ಮಾಡಲು ಕೆಡುವುದು ಮಾನವನಾರೊಗ್ಯಾ || ಮದಿರೆ ಶೆಳೆತಕೆ ಬೀಳ್ದನ ಬಾಳುವೆ ನಾಶವಪೊಂದುವುದೂ | ಮದಿರೆ ಮಹತಿಯ ನರಿಯುತೆ ದೂರಿರೆ ದೊರೆವವು ಸುಖಶಾಂತಿ || ೧ || ಮದಿರೆ ಪಾನದಿಂ ಮದಿಸು...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು...
೧ ಲೋಕದಲ್ಲಿ ಧರ್ಮ ವಲ್ಲಿ ಸೊರಗಿ ಹೋಗಿ, ಕಾಣದಾಗಿ, ಕಡೆಗಧರ್ಮ ಲತೆಯು ಕೊನರಿ, ನೀತಿಯಳಿದು ರೀತಿಯಿಳಿದು, ಸ್ವಾರ್ಥ ಪರತೆ ಪಾಶವಿಕತೆ ರುದ್ರ ನೃತ್ಯ ನಲಿವಗತ್ಯ ಬರೆ, ಮಹಾಂತ ಸಾಧು-ಸಂತ ರೂಪದಿಂದ ದೇವನಿಂದ ಒಲ್ಮೆ-ನಲ್ಮೆ ಕೋಡಿವರಿದು ಧರ್ಮಪಥವ ನೀತಿ...
೧ ನಿಸರ್ಗವನದಲಿ, ಕಂಗೊಳಿವ ಕಾನನದಿ ಕುಳಿತು ಕೂಗುವ ನೀ! ಪುಟ್ಟಹಕ್ಕಿ! ಪ್ರೇಮಮಯ ಪತಿತಪಾವನವ ನೀ! ಹಾಡು ಓ! ಪುಟ್ಟ ಹಕ್ಕಿ! ಓ! ನಿನ್ನ ಉತ್ತೇಜ ಉತ್ಸಾಹವನು ಹಾಡಿ! ಓ! ನಿನ್ನ ಗಾನಚಿಲುಮೆಯನು ತೋಡಿ! ಪತಿತಪಾವನವ ನೀ! ಹಾಡು ಓ! ಪುಟ್ಟ ಹಕ್ಕಿ! ೨ ಸ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...







