ಮಂಜು ಬೀಳುವದೆಂದು ಬೆದರಿ ನಿಂತಿಹ ಕನ್ಯೆ! ಅಂಜದಿರು, ಮೈಚಳಿಯ ಬಿಟ್ಟು ನಿಲ್ಲು. ಸುರಿದು ಮುಗಿಲೊಳಗಿಂದ ಹಿಮವು ಬಿದ್ದಿರಲೇನು? ನಿಂತ ನೀರಾದರೇನಾಣೆಕಲ್ಲು? ನಿನ್ನ ಕೊಳದಲ್ಲಿರುವ ಕೆಂಪು ಮೀನಗಳೆಲ್ಲ ಮಿನುಗದಲೆ ಮುಗಿದಿಹವು ಮಂಜಿನಲ್ಲಿ. ದಿನದಿನಕೆ...
ಆಸರಕಿ ಅಳದಿಟ್ಟು, ಬ್ಯಾಸರಕಿ ಬಳದಿಟ್ಟು ಚಿಂತಿ ಕಾಲಾಗ ತುಳದಿಟ್ಟು | ಈ ದೇಹ ಶೀಲ ಮಾಡಿಟ್ಟ ಜನದಾಗ || ಕನ್ನೇಯ ಬಡಿಬ್ಯಾಡ, ಕೈಬಳಿ ಒಡೆದಾವು ಸಣ್ಣಂಚಿನ್ವಾಲೆ ಮುರಿದಾವು | ನನ ಮಗನ ನನ್ನಾಣಿ ಮಡದಿ ಬಡಿಬ್ಯಾಡ || ಛೀ! ಏಳ ಛೀಮಾರಿ, ನಾಚಿಕಿಲ್ಲದ ನ...
ಹೊಲದ ಹಸಿರಿನ ಮೇಲೆ ಹೊಂಬಿಸಿಲು ಬಿದ್ದಿತ್ತು. ಅಲ್ಲಲ್ಲಿ ತಿಳಿನೀರಿನ ಕನ್ನಡಿ ಹೊಳೆಯುತ್ತಿತ್ತು. ಒಂದೇ ಒಂದು ಬೆಳ್ಳಗಿನ ಗೂಳಿ ಮೇಯುತ್ತಿತ್ತು. ಇಬ್ಬರು ಕವಿಗಳು ಹೊಲದಂಚಿನ ಬಾಳೆಯ ತೋಟದಲ್ಲಿ ನಿಂತು ಈ ಚೆಲುವನ್ನು ಸವಿಯುತ್ತಿದ್ದರು. ಒಬ್ಬನಿಗೆ ...
ಇಂದು ಹುಣ್ಣಿಮೆಯಿರುಳು ಚೆಂಗುಲಾಬಿಯ ಅರಳು ಅಳುವ ಮಗುವಿನ ಮೊಗದಿ ಬಂತು ನಲಿವು; ಬನ ಬಾನು ಮುಗಿಲಿನಲಿ ಚೆಲ್ಲುವರಿದಿದೆ ಹಿಗ್ಗು ಚಂದ್ರ ರೋಹಿಣಿ ಚಿಕ್ಕೆ ನಕ್ಕ ನಗುವು. ಬಾನವರ ಊರಿನಲಿ ಇಂದು ಎಂತಹ ಹಬ್ಬ ಮನೆಮನೆಯ ಹೊಸತಿಲಲಿ ದೀಪಾವಳಿ; ಅವರ ಸುವಿಶ...
ಎಲ್ಲೊ ನ್ಯಾಯ-ಕಟ್ಟಳೆ ನಡೆದು ವರ್ಷಗಟ್ಟಲೆ ಅನ್ಯಾಯಕೆ ನಿಂತಿತು ಮತ್ತೆ ಮುಂದೆ ಹೋಗಬೇಕು ಅದೇ ನ್ಯಾಯ ಸಾಗಬೇಕು ಯಮಧರ್ಮನ ವರೆಗೆಯೂ ಝುಗ್ಗು, ಭುಗ್ಗು-ಬಗ್ಗು ಕುಗ್ಗು ಅಲ್ಲಿ ಇಲ್ಲಿ ಸುಳಿವ ಹಿಗ್ಗು ಸದಾಕಾಲ ಡೊಗ್ಗು ಡೊಗ್ಗು ಎನುತಿದೆ ಆ ಪಲ್ಲವಿ ಝು...
ಒಮ್ಮೆ ಗುರುಗಳು ತಮ್ಮ ಇಬ್ಬರು ಆಪ್ತ ಶಿಷ್ಯರನ್ನು ಕರೆದು ಒಂದು ಪರೀಕ್ಷೆಗೆ ಒಳಪಡಿಸಿದರು. “ಶಿಷ್ಯಂದಿರೆ! ನೀವು ಝೆನ್‌ನನ್ನು ಬಹಳದಿನದಿಂದಲೂ ಕಲಿಯುತ್ತಿದ್ದೀರಿ. ನಿಮಗೆ ಈ ಪರೀಕ್ಷೆ ಎದುರಾಗಿದೆ. ಝೆನ್‌ನಲ್ಲಿ ನಿಮ್ಮ ಹೃದಯ ಎಷ್ಟು ಒಂದಾಗ...
ಯಾವ ಹಾಡನು ನಾ ಹಾಡಲಿ? ನನ್ನ ಮುದ್ದು ಮುದ್ದಿನ ರನ್ನ ಮೋಹನ ||ಪಲ್ಲ॥ ನಿನ್ನ ಸುಂದರ ವದನಾರವಿಂದ ನನ್ನ ಜೀವನ ಭ್ರಮರಕೆ ಮಕರಂದ ||೧|| ನಿನ್ನ ಹೊಳೆಯುವ ಕಳೆಯುಳ್ಳ ಕಣ್ಣು ನನ್ನ ತನುವೆಂಬ ತರುತಳ್ತ ತನಿವಣ್ಣು ||೨|| ನಿನ್ನ ಸಂಪಿಗೆ ಹೂವಿನ ಮೂಗು ನ...
ಏನು ಲೋಕವೋ! ಏನು ಜನ್ಮವೋ! ಏನು ಕಾಲವೋ! ಬೇಡವೋ! ಜೀವಮಾನದ ಕಡೆಯ ಹಂತವ ಹತ್ತಿ ಹಿಂದಕೆ ನೋಡಿ ನಡುಗುವೆ; ಯಾವ ಕಾಲಕೋ ಮರಳಿ ಬರುವುದು ಆದಿಕಾಲದ ಭೋಗಸಂಪದ? ಇಲ್ಲವೆಂದಿಗೂ, ಇನ್ನದೆಂದಿಗೂ, ಇಲ್ಲವೋ! ಇರುಳುಹಗಲೊಳು, ಹರುಷವೆನ್ನೊಳು, ತೊರೆದೆಹೋಯಿತೋ,...
ಒಂದಾನೊಂದು ಕೊಳದ ತೀರದಲ್ಲಿ ಒಂದು ಭಾರಿಯ ಸೀಗೆಯಮೆಳೆಯಿತ್ತು. ಅದರಲ್ಲಿ ಜೇನುಗಳು ಒ೦ದು ಗೂಡು ಕಟ್ಟಿ ಕೊಂಡು ಸುಖವಾಗಿದ್ದುವು. ಆಗಾಗ ಗೂಡಿನಿಂದ ಜೇನುತುಪ್ಪವು ಸೋರುವುದು. ಒಂದು ಇಲಿಯು ಬಂದು ಅದನ್ನು ನೆಕ್ಕಿಕೊಂಡು ಹೋಗುವುದು. ಇಲಿಗೆ ಜೇನುತುಪ್...
ಪೋಪೋಪೆಡೆ ಹಿಟ್ಲರ ಪಡೆ ಹಾಕಿದರೂ ಮಟ್ಟ ಧೃತಿಗೆಡದಲೆ ಹೊಗೆಯುಗುಳುವ ಚರ್ಚಿಲ್ಲನ ಚುಟ್ಟ; ಜಡಿದರು ಮಳೆ, ಪೊತ್ತರು ಇಳೆ ಉರಿಬಿಸಿಲಿನ ಕಾಟ ವಿರಮಿಸುತಲಿ ಮಲಗುವ ಸೋ- ಮಾರಿಯ ಸಿಗರೇಟ; ಜ್ಞಾಪಿಸುವೊಲು ನಿಂತಿವೆ ಭ- ದ್ರಾವತಿಯೊಳು, ರಮಣಿ ಗಗನವನೇ ತಿನಿ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...






