ಎಲ್ಲೊ ನ್ಯಾಯ-ಕಟ್ಟಳೆ
ನಡೆದು ವರ್ಷಗಟ್ಟಲೆ
ಅನ್ಯಾಯಕೆ ನಿಂತಿತು
ಮತ್ತೆ ಮುಂದೆ ಹೋಗಬೇಕು
ಅದೇ ನ್ಯಾಯ ಸಾಗಬೇಕು
ಯಮಧರ್ಮನ ವರೆಗೆಯೂ
ಝುಗ್ಗು, ಭುಗ್ಗು-ಬಗ್ಗು ಕುಗ್ಗು
ಅಲ್ಲಿ ಇಲ್ಲಿ ಸುಳಿವ ಹಿಗ್ಗು
ಸದಾಕಾಲ ಡೊಗ್ಗು ಡೊಗ್ಗು
ಎನುತಿದೆ ಆ ಪಲ್ಲವಿ
ಝುಗ್ಗು, ಭುಗ್ಗು; ಝುಗ್ಗು ಭುಗ್ಗು
ಹಿಂದೆ, ಇಂದೆ, ಮುಂದೆ
ಗತಿಯೊಂದೇ, ಬಂದೇ
ಹೊಗುವ ಮುಂದೆ ಮುಂದೆ
ಮರಳು ಮತ್ತೆ ಹಿಂದೆ,
ನಮ್ಮ ಸ್ಥಿತಿಯು ಕೆಟ್ಟಿದೆ
ಗತಿ ದುರ್ಗತಿಗಿಳಿದಿದೆ.
*****

















