ಕಣ್ಮುಚ್ಚಿ ಕಣ್ದೆರೆಯುವಷ್ಟರೊಳು ಕಾಣದಾಗಿರುವ ಹೊಸ ಗೆಳೆಯನೇ ಕೇಳು ಕೇಳು ಕಣ್ಮುಚ್ಚಿಕೊಂಡರೂ ಕೂಗಿ ಕರೆಯುವೆ ನಿಲ್ಲು ಕಿವಿಗೊಟ್ಟು ಕೇಳು ಕೇಳು! ಕಾಲ ಪುರುಷನ ವೇಳೆಗನುಗುಣದಿ ತಪ್ಪದಲೆ ತಿರುಗುವದು ವಿಶ್ವವಿನ್ನು ಬಾಳುವದು ಬೀಳುವದು, ನಮ್ಮ ಕೈಯಲ್...
ಮೆಲುಗಾಳಿಯೊಳು ಗಿಡದೆಲೆ ಹೊರಳೆ ತಿಳಿಗೊಳದೊಳಗೆ ಕಿರುದೆರೆಯುರುಳೆ ನಡುಬಾನಿನೊಳು ಬಿಳಿಮುಗಿಲಾಡೆ ಸನಿಯದ ಹೊದರೊಳು ಹಕ್ಕಿಯು ಹಾಡೆ ಗುಡಿಗಂಟೆಯರವವಾಗಸದೊಳಗೆ ಮುಳುಗಿಹ ಭಾವವನೆತ್ತಲು ಮುಳುಗೆ ತೊಟ್ಟಿಲಾಡುತಿರೆ ಸಂಪಗೆ ನೆಳಲು ನೇರಿಳೆಗಾಗಿರೆ ಬಿಸಿಲ...
೧ ಇಂದು ಬಾಗಿಲವರೆಗು ಇದಿಗೋ ಬಂದ ಆ ದೊರೆ ಒಳಗೆ ಬರಲಿ- ಲ್ಲೆಂದು ಹೃದಯವೆ ನಿನ್ನ ಮನದೊಳು ಹೆದರಿ ಬೆದರುವೆಯಾ? ೨ ಒಳಗೆ ಬಂದರೆ ಈಗ ತುಂಬುತ ತುಳುಕುತಿಹ ಕಣ್ಣೀರಿನಿಂದಲಿ ತೊಳೆಯುವನು ಇವ ತನ್ನ ಪಾದವ- ನೆಂದು ತೆರಳಿದನೋ! ೩ ಪ್ರೀತಿಬಾಧ್ಯನೆ ಪೀತಿ ನ...
ಅಪ್ಪನು ಹೊಲದಲಿ ಹೂಡಿದರೆ ಅವ್ವನು ಅಡಿಗೆಯ ಮಾಡಿದರೆ ಅಂಗಳದಲ್ಲಿ ನಾ ಆಡಿದರೆ ಸೂರ್‍ಯನು ಮೂಡಿ ಹಕ್ಕಿಯು ಹಾಡಿ ಹಗಲಿರುಳಾಗುವವು ದಿನಗಳು ಹೇಗೋ ಹೋಗುವವು *****...
ಉಕ್ಷೆಯನು ವರಿಸಲು ಜಗದಲಿ ಬರುವನು ಮೂಡಣದಿಕ್ಕನ್ನೆಯ ಮಗನು | ಹಸುಮಗುವಾಗುತೆ ಪೊಣ್ಗದಿರಿಂದಲಿ ಹೊಳೆಯುವನಾಗಸದಿ || ನಸುಗೆಂಪಾಗಿಸ ಮುಖದಿಂ ಬೆಳಗುತೆ ಚೇತನ ಬೀರುವ ವಿಶ್ವದೊಳು | ರಸವನು ತುಂಬುತೆ ಯೆಲ್ಲೆಡೆಯೊಳ್ತಾ ಚೇತನ ಗೊಳಿಸುವನು || ೧ || ಜಗದ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂ...
ಔನ್ನತ್ಯ-ಸೌಂದರ್ಯ ಭಾವೈಕ್ಯದಾನಂದ ಮೂರ್ತಿಯೇ ಮೆರೆಯುತಿದೆ; ಕಣ್ಮುಂದೆ ಕಾಣುತಿದೆ ನಶ್ವರದ ಸುಖ-ಭೋಗ-ರಾಗಾದಿ ನಿಗ್ರಹದೆ ಮೈವೆತ್ತ ನಿಶ್ಚಲ ತ್ಯಾಗ-ಯೋಗಾಮಂದ ಸನ್ಮುದ್ರೆ ಮೊಗದಲ್ಲಿ ಕಳೆಗೂಡಿ ಕುಣಿಯುತಿದೆ ಪ್ರಾಕ್ತನದ ಬಾಹುಬಲಿ ವೈರಾಗ್ಯ ಸಂಸ್ಥಾನ-...
[ವಿಖ್ಯಾತ ನರ್ತನಗಾರರಾದ ಶ್ರೀ!! ಸೋಹನ್ ಲಾಲ್ ರವರ ನೃತ್ಯಭಂಗಿಯೊಂದರಿಂದ ರೂಪುಗೊಳಿಸಿದೆ. ವಿಷಯಸಂಗ್ರಹವು ಈ ರೀತಿ : ಮಹಾ ಶಿವರಾತ್ರಿಯ ಶುಭದಿನದಲ್ಲಿ ಭಕ್ತರು ಶಿವನ ಪೂಜೆಯ ಸಲುವಾಗಿ ಮಂದಿರದಲ್ಲಿ ಬಂದು ಸೇರುವರು. ವಿವಿಧ ನೈವೇದ್ಯ ಫಲ ಮತ್ತು ಮಧ...
ಪ್ರಿಯ ಕಿಟಿ, ಇವತ್ತು ನಿನಗೊಂದು ನಿರಾಸೆಯ ಸಂಗತಿಯ ಹೇಳುವುದಿದೆ. ನಮ್ಮ ಯಹೂದಿ ಮಿತ್ರರನ್ನೆಲ್ಲಾ ಗುಂಪು ಗುಂಪಾಗಿ ಎಳೆದೊಯ್ಯಲಾಗುತ್ತಿದೆ. ಒಂದು ಚೂರು ಕರುಣೆ ಇಲ್ಲದವರಂತೆ, ಗೆಸ್ಟಪೋ [ ನಾಝಿ ಸರಕಾರದಲ್ಲಿಯ ಸಿಕ್ರೇಟ್ ಪೋಲಿಸರು]ಗಳು ಇವರನ್ನಲ್ಲ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...







