Home / ಕವನ / ಕವಿತೆ / ನೇಸರನು

ನೇಸರನು

ಉಕ್ಷೆಯನು ವರಿಸಲು ಜಗದಲಿ ಬರುವನು ಮೂಡಣದಿಕ್ಕನ್ನೆಯ ಮಗನು |
ಹಸುಮಗುವಾಗುತೆ ಪೊಣ್ಗದಿರಿಂದಲಿ ಹೊಳೆಯುವನಾಗಸದಿ ||
ನಸುಗೆಂಪಾಗಿಸ ಮುಖದಿಂ ಬೆಳಗುತೆ ಚೇತನ ಬೀರುವ ವಿಶ್ವದೊಳು |
ರಸವನು ತುಂಬುತೆ ಯೆಲ್ಲೆಡೆಯೊಳ್ತಾ ಚೇತನ ಗೊಳಿಸುವನು || ೧ ||

ಜಗದೊಳುಬರೆ ತಾ ಮರೆವನು ಪ್ರಿಯತಮೆ ತೊಡಗುವನಾಚಣ ಕಾರ್ಯದಲಿ |
ಜಿಗಿಯುತೆ ತೇರೇಳ್ಗುದುರೆಗಳೆಳೆಯಲು ಖಂಜನು ಸಾರಥಿರಥಹೊಡೆವಾ ||
ಮೊಗದೊಳು ತಾನುಗ್ರತೆಯನು ಪಡೆಯುತೆ ನಭದೊಳುರಭಸದಿ ಕ್ರಮಿಸುವನು |
ಜಗವನು ಕ್ರಮದಿಂ ಸುತ್ತಲು ತಪ್ಪದೆ ಪಡುವಣ ಬೆಟ್ಟದಿ ವಿಶ್ರಮಿಪ || ೨ ||

ನಿದ್ರೆಯೆಲ್ಲಿಯದು ನೇಸರಗೆನುತಲಿ ಸಾಗುನಾಚಣ ಪಾತಳ ಲೋಕಕೆ |
ಎದ್ದುಸಾಗುವನು ಕಾರ್ಯವ ಮಾಡಲು ಆಸರಬೇಸರವರಿಯದಲೇ ||
ಶುದ್ಧ ಮನದೆ ತಾ ಕಾಯಕ ಮಾಡುತೆ ಕಾಯಕ ಮಹತಿಯ ಬೀರುವ ಜನಕೆ |
ಎದ್ದು ಮನುಜರೆ ಕಾರ್ಯವ ಮಾಡಿರಿ ಜಗದೊಳು ಬೆಳಗಿರಿ ನನ್ನಂತೆ || ೩ ||

ಹೆಂಡಿರು ಮಕ್ಕಳ ಮೋಹನ ಬಿಡುತಲಿ ಖಂಡಿತ ದುಡಿಯಿರಿ ಸಂತತವ |
ಕಂಡಕಂಡಕಡೆ ಮನವನು ಚಲಿಸದೆ ಕಾಯಕದೊಳ್ಮನ ವಿಕ್ಕುತಲಿ ||
ತುಂಡು ಹೊಂದಿದ ಬಂಧುಗಳೊಂದಡೆಕೂಡಿಸಿ ಮೆರೆಯಿರಿ ಜಗದೊಳಗೆ |
ಬಂಡುತನಕೆ ನೀವ್ಕೊಡದಿರಿ ತಾಣವ ನೀತಿಯ ಮಾರ್ಗದಿ ನಡೆಯುತ್ತೆ || ೪ ||

ಆಸರಬೇಸರಗಳ ದೂರೊತ್ತುತೆ ಮಾಡಿರಿ ನಿಮ್ಮಯ ಕಾಯಕ ಸಂತತದಿ |
ನೇಸರನಂತೆಯೆ ತೇಜವ ಬೀರಿರಿ ಸಂತತ ಜಗದೊಳು ಯೆಲ್ಲೆಡೆಗೆ ||
ಹೇಸಿರಿ ಕರ್ಮಕೆ ನೀತಿ ಧರ್ಮದಿ ವಿರಹಿತ ಸ್ವಾರ್ಥದಿ ತುಂಬಿರುವ |
ಭೂಷಣವೆನಿಪ ಕಾರ್ಯವ ಮಾಡುತೆ ಪಡೆಯಿರಿ ಶಾಶ್ವತ ಕೀರ್ತಿಯನು || ೫ ||

ಇಂತು ನೀತಿಯನು ನೇಸರ ಬೋಧಿಪ ತನ್ನಯ ನಿತ್ಯದ ಕೃತಿಯಿಂದೆ|
ಇಂತೆಯ ನಮ್ಮಯ ಗಾಂಧಿಪೇಳಿದನು ಶಾಶ್ವತ ನಮ್ಮಯ ಸುಖಕಾಗಿ ||
ಇಂತು ಬೋಧಿಸುತಲಾಗಸದೊಳ್ತಾನಿತ್ಯಹೊಳೆವನು ನಮಗಾಂಧಿ |
ಇಂತು ನಡೆದೊಡೆ ಶಾಂತಿ ಸೌಖ್ಯದಿಂ ಮೆರೆವುದು ಸಂತತ ಭೂಲೋಕ || ೬ ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...