Home / ಕಥೆ / ಕಿರು ಕಥೆ / ಇಬ್ಬರು ಕವಿಗಳು

ಇಬ್ಬರು ಕವಿಗಳು

ಹೊಲದ ಹಸಿರಿನ ಮೇಲೆ ಹೊಂಬಿಸಿಲು ಬಿದ್ದಿತ್ತು. ಅಲ್ಲಲ್ಲಿ ತಿಳಿನೀರಿನ ಕನ್ನಡಿ ಹೊಳೆಯುತ್ತಿತ್ತು. ಒಂದೇ ಒಂದು ಬೆಳ್ಳಗಿನ ಗೂಳಿ ಮೇಯುತ್ತಿತ್ತು. ಇಬ್ಬರು ಕವಿಗಳು ಹೊಲದಂಚಿನ ಬಾಳೆಯ ತೋಟದಲ್ಲಿ ನಿಂತು ಈ ಚೆಲುವನ್ನು ಸವಿಯುತ್ತಿದ್ದರು. ಒಬ್ಬನಿಗೆ ಕಾವ್ಯಸಮಾಧಿ ಹತ್ತಿ ಗುಂಗುಡಹತ್ತಿದನು. ಬಳಿಗೆ ಇನ್ನೊಬ್ಬನಿದ್ದಾನೆಂಬುದನ್ನೂ ಮರೆತನು. ಇನ್ನೊಬ್ಬನಿಗೂ ಒಂದು ಬಗೆಯ ಲಹರಿಬಂತು. ಹೊ ಹೋ ಹೋೕ ಎಂದು ಕೂಗಿ ಬಿಟ್ಟ. ಅವನು ಸಮಾಧಿಯಿಳಿದು ಇವನನ್ನು ಕೇಳಿದ: ಏನಪ್ಪಾ ನನ್ನ ಸಮಾಧಿಯನ್ನೆಲ್ಲ ಕೆಡಿಸಿಬಿಟ್ಟೆ. ಈ ಚೆಲುವಿನ ದಿವ್ಯಸ್ಪರ್ಶಹೊಂದಿ ನನ್ನ ಜೀವಾತ್ಮನು ಪರಮಾತ್ಮನ ಕಡೆಗೆ ಹರಿದು ಚಿತ್ ಸುಖಸಾಗರದಲ್ಲಿ ಈಜಾಡುತ್ತಿದ್ದನು. ಕೆಡಿಸಿಬಿಟ್ಟೆಯಲ್ಲ.

ಇವನು ಹೇಳಿದ: ಓಹೋ, ಹಾಗೆಲ್ಲ ಆಗಿಬಿಟ್ಟಿತ್ತೋ? ನನಗೂ ಒಂದು ಬಗೆಯ ಸಮಾಧಿ ಹತ್ತಿತ್ತು. ಅಲ್ಲಿ ಒಂದು ಸೊಕ್ಕಿನ ಗೂಳಿ ಒಕ್ಕಲಿಗರ ಗಂಜಿಯ ಬೊಡ್ಡೆಗಳನ್ನೆಲ್ಲ ತೂರಿಕೊಂಡು ಹೋಗುವುದನ್ನು ಕಂಡೆ; ಕೂಗಿ ಬಿಟ್ಟೆ.

ಇವನ ಹೊ ಹೋ ಹೋೕ ಕೇಳಿಯೋ ಏನೋ, ತೋಟದಲ್ಲಿದ್ದ ಒಬ್ಬ ಒಕ್ಕಲಿಗನು ಗದ್ದೆಯನ್ನೆಲ್ಲ ಸೂರೆಗೊಳ್ಳುತ್ತಿದ್ದ ಗೂಳಿಯನ್ನು ತೌರಿಕೊಂಡು ಹೋದುದು ವಾಗ್ವಾದಕ್ಕೆ ಆರಂಭಿಸಿದ್ದ ಆ ಕವಿಗಳಿಗೆ ಕಾಣಿಸಲಿಲ್ಲ.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...