ಅಧಿಕ ಇಳುವರಿಗೆಂದೇನೇನೋ ಮಾಡುತಲಿರಲು ಅಧಿಕವಾಗಿಹುದಲಾ ಎಮ್ಮೊಳಗೆ ರೋಗರುಜಿನಗಳು ಬದನೆ ಬೆಂಡೆಯೊಳಿದ್ದ ರೋಗವನಲ್ಲಿಂದಲೋಡಿಸ ಲದುವೆ ಬಂದಡರಿಹುದೆಮ್ಮ ತನುವಿನೊಳು ಕಾದುವಾ ವಿಷವದರ ಹಿಂದು ಹಿಂದಿನೊಳು – ವಿಜ್ಞಾನೇಶ್ವರಾ *****...
ಆ ಹೂವ ಈ ಹೂವ ಕೊಯ್ಯುವಳೇ ಆ ದಂಡಿ ಈ ದಂಡೀ ಕಟ್ಟುವಳೇ || ೧ || ಆ ಹೂವ ಈ ಹೂವ ಮುಡಿಯುವಳೇ ಆ ಕುಣಿತ ಈ ಕುಣಿತ ಕೊಣಿಯುವಳೇ || ೨ || ಮಲಕೂ ಮಲಕೂ ನಡಿಯುವಳೇ ಆ ಕುಣಿತ ಈ ಕುಣಿತ ಕೊಣಿಯುವಳೇ || ೩ || ಅತ್ತಾ ಇತ್ತಾ ನೋಡುವಳೇ ಬಾರೇ ಬಾರೇ ನನ್ನವಳೇ ...
ಮಾರನೆಯ ದಿನ ಪ್ರಾತಃಕಾಲದಲ್ಲಿ ಮೇರಿಯಸ್ಕನ ಮನೆಗೆ ಹೋಗಿ, ಅವನಲ್ಲಿ ಏಕಾಂತವಾಗಿ ಜೀನ್ ವಾಲ್ಜೀನನು ಮಾತ ನಾಡಬೇಕಾಗಿರುವುದೆಂದು ಕೇಳಿದನು. ಸಂತೋಷದಿಂದ ಅವನನ್ನು ಗೌರವಿಸಿ, ಮೇರಿಯಸ್ಸು, ‘ ತಂದೆ, ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಯಿತು...
ಬದುಕಿನಲಿ ನಿ ಒಂಟಿಯಾಗು ಸತಿ ಸುತರೆಲ್ಲ ನಿನ್ನ ಬಂಧಿ ಯಾಗದಿರಲಿ ನೀನು ಹೃದಯದಲಿ ಮಡಿವಂತನಾಗು ಹಗಲಿರುಳು ದೇವ ನುಡಿ ನುಡಿಯಲಿ ಯಾವ ಜನುಮದಿ ಎಂಥವರೊ ನಿನಗೆ ನಾಳಿನ ಬಾಳಿಗೊ ಇನ್ನಾರೊ ಯಾರೋ ಇಂದಿನ ಕ್ಷಣಗಳಲಿ ಸಾರ್‍ಥಕವಾಗಲು ನಿತ್ಯ ಶುದ್ಧಮನದ ತಿದ...
ಬಾಲ್ಯದಲಿ ತಾರ್ಕಿಕರ ತಾತ್ವಿಕರ ಸಭೆಗಳಿಗೆ ಆದರದೊಳಾಂ ಸಾರಿ ವಾದಗಳ ಕೇಳಿ, ಕಾದಾಟಕೆತ್ತ ಕೊನೆಯೆಂದು ಕಾಣದೆಯಿರಲು ಪೋದ ದಾರಿಯೊಳೆ ನಡೆಯುತ ಮರಳಿ ಬಂದೆಂ. *****...
ಒಬ್ಬನೆಂದರೊಬ್ಬನೇ ಒಬ್ಬನೊಳಗೆ ಇಬ್ಬನೇ ಇಬ್ಬನೇ ಮೂವನೇ ಒಬ್ಬನೊಳಗೆ ಎಷ್ಟನೇ ಒಂದು ಒಡಲ ನೋಡಿ ನಾವು ಒಬ್ಬನೆನುವೆವು ಒಂದು ಒಡಲಿಗೊಬ್ಬನೇ ಎಂದುಕೊಳುವೆವು ಒಬ್ಬನಲ್ಲ ಇಬ್ಬನಲ್ಲ ಒಳಗಿರುವವನಿಗೆ ಲೆಕ್ಕವಿಲ್ಲ ಬಂದು ಹೋಗಿ ಮಾಡುತಾರೆ ಒಕ್ಕಲಿಗರೆ ಎಲ್ಲ...
ಸೃಷ್ಟಿ ಸ್ವಯಂಪ್ರಭೆಯಗುಹೆಯ ದಾರಿಗನಾಗಿ ಚೇತನಂ ನಡೆಯುತಿರೆ, ವಿಸ್ಮಯಂಗೊಳಿಸಿತಿದ ನೂತನದ ನಸುಕೊಂದು ಒಂದೆಡೆಯೊಳ್ ; ಅದರಿಂದ ಸ್ಪಷ್ಟ ಮಂದದಕಾಯ್ತು ಅಹಮಸ್ಮಿ ಎಂಬರಿವು. ನಾನುಂಟು’ ಎನ್ನುತಿದು ಹಿಗ್ಗಿ ಕಣ್ಮನ ತೆರೆಯ- ಲೆನಿತು ಭಯಮಾಯ್ತದಕೆ...
ಇಂದಽ ಎಳ್ಳಾಮಾಸಿ ಬಂತಲ್ಲ ಜೀನಾ|| ಅದ್ದಽನ ಬೀಸಽ ಗಿದ್ದಽನ ಕುಟ್ಟ| ಕುಳ್ಳ್ಯಾಗ ಅಡುವ ಕೋಲೀಲೆ ಮುಗಚ|| ಎಲ್ಲಾರ ಛೆರಗಾ ಹೊಂಟಿತಲ್ಲೊ ಜೀನಾ| ನಮ್ಮ ದ್ಯಾವರ ಛೆರಗಾ ಹೊಂಡಬೇಕೊ ಜೀನಾ|| ಅವರೆಲ್ಲಾ ಹಿಂದಽ ನಾವೆಲ್ಲಾ ಹಿಂದಽ|| ಅಂಟಽದ ತೆಳೆಗ ಇಟ್ಟಾನೊ...
ಫ್ರಿಜ್‌ಗಳಲ್ಲಿ ಪ್ರಿಯಾನ್, ಅನಿಲವು ಬಳಕೆಯಾಗುತ್ತದೆ. ಈ ಅನಿಲವೂ ಸಹ ಪರಿಸರದ ಮೇಲೆ ದುಷ್ಟರಿಣಾಮವನ್ನು ಬೀರುತ್ತದೆ. ಭೂ ಮಂಡಲವನ್ನು ಸುತ್ತುವರೆದಿದ್ದು ಭೂಮಿಯ ಸಕಲಜೀವಿಗಳನ್ನೂ ಸೂರ್‍ಯನ ಅಪಾಯಕಾರಿ ಅಲ್ಟ್ರಾ ವಾಯೊಲೆಟ್ ಕಿರಣಗಳಿಂದ ರಕ್ಷಿಸುವ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







