ಪುಗ್ಗೆ ವಿಮಾನವ ಏರುವೆನು
ಅವ್ವಾ ಬಾನಿಗೆ ಹಾರುವೆನು
ಗಾಳಿಯ ಹಿಂಡನು ಓಡಿಸುವೆ
ಸೂರ್‍ಯಗೆ ಚಂದ್ರನ ಜೋಡಿಸುವೆ
ಅವರ ಮದುವೆಯನು ಮಾಡಿಸುವೆ
ಚುಕ್ಕೆಯ ಮಕ್ಕಳೆ ಆಡಿಸುವೆ
ಮಿಂಚಿನ ಕೋರೆಯ ದಾದೆಯ ಕಿತ್ತು
ಕರಿಮೋಡಗಳನು ಕಾರಿಸುವೆ
ನೋಡುತ ನಿಂದಿರು ಭೂಮಿಯ ಸುತ್ತೂ
ಪುಗ್ಗೆ ವಿಮಾನವ ಹಾರಿಸುವೆ.
ಗುಡುಗಿನ ರಾಕ್ಷಸ ಎದುರಿಗೆ ಬಂದರೆ
ಅವನ ಡೊಳ್ಳನೇ ಬಾರಿಸುವೆ
ದೇವರು ಬೇಡಾಗೀಡಾ ಅಂದರೆ
ಅವ್ವಾ ನಿನ್ನನು ತೋರಿಸುವೆ
*****

















