ಜಯ ಹಿಂದ ಗೀತ

ಇನ್ನು ಹೆರವರ ನೊಗಕೆ ಮಣಿವರಾವಲ್ಲ! ಜಗದಿ ತಲೆಯೆತ್ತಿ ಹೆಬ್ಬಾಳಲೆದ್ದಿಹೆವು, ಕಳಕೊಂಡ ಬಿಡುಗಡೆಯ ಮರಳಿ ಗೆದ್ದಪೆವು ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ! ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ! ದೇವರೆಮ್ಮಯ ತಂದೆ, ಭಾರತಂ ತಾಯೆ, ತಾಯ ಮೈಸೆರೆ ಬಿಡಿಸೆ, ಬಿಡಿಸದಡೆ...

ಬಿಡುಗಡೆಗೆ

ಬಿಡುಗಡೆಯೆ! ದೇವರಿನಣಂ ಕಿರಿಯ ದೇವತೆಯೆ? ಭಾರತಕ್ಕೆ ಬಾರ, ನರನೆರಡನೆಯ ತಾಯೆ! ಋದ್ಧಿ ಬುದ್ಧಿಗಳಕ್ಕನೆಂದು ಸಂಭಾವಿತೆಯೆ, ನೀನೆಲ್ಲಿ ಶಾಂತಿಯಲ್ಲಿದೆ ನಿನ್ನ ಛಾಯೆ! ಯೂರೋಪದಾವ ಗುಣಕೊಲಿದಲ್ಲಿ ನೀ ನಿಂತು ಮಿಕ್ಕಿಳೆಯನವರ ತುಳಿಗಾಲ್ಗೆ ಬಾಗಿಸಿದೆ? ಆಶ್ಯದಾವವಗುಣಕೆ ಮುಳಿದಕಟ ನೀನಿಂತು...

ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ ಹೃದಯಸ್ವರಂ, ಹೃದಯದಲಿ ಕಲುಕುತಿದೆ ವಿರಹಜ್ವರಂ; ಎತ್ತ ನಡೆದವನೆಂದು ಮತ್ತೆನಗೆ ಬಹನೆಂದು ಮನಸಿನೋಪಂ, ಬಾಗಿಲೊಳೆ ನಿಲುಕುತಿದೆ ನಯನ ದೀಪಂ. ಮರಳುವೊಸಗೆಯ ಬೀರಿ ಗುಡುಗು ಮೊಳಗೆ, ಮನೆಯ ದಾರಿಯ ತೋರಿ ಮಿಂಚು ತೊಳಗೆ, ಬಂದರೆಲ್ಲಿದರೆಲ್ಲ,...

ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ ಕಾಣೆನೊ ಕಾಣುವೆನೊ ನಿನ್ನ ನರಿಯದೊಡನಭಿನ್ನಮೆನ್ನ ಮನದ ತಿತಿಕ್ಷೆ ಇಂದಲ್ಲಡೆ ಮುಂದೆ ನೆರೆಯ ದಿರದಿಲ್ಲಿಯೆ ಬಲ್ಲೆನೆರೆಯ- ಸಲದೆ ತಾಯ ಬಸಿರ ಮರೆಯ ಮಗುವ ದಿದೃಕ್ಷೆ? ನಿನ್ನೊಳೊಗೆದ ನನ್ನೊಳಿಂತು ನಿನ್ನ ಕಾಂಬ...

ಇನ್ನು ನೀನೆನ್ನವನು

ಇನ್ನು ನೀನೆನ್ನವನು ನಾನಿನ್ನು ನಿನ್ನವನು ಇಂದಿನಿಂದೆ, ಇಂದಿನಿಂದ ಮುಂದೆ. ನಿನ್ನ ನೆನವುದೆ ಚನ್ನ, ನಿನ್ನ ಕನವುದೆ ನನ್ನ ದಿನದ ಬಾಳು, ನನ್ನ ಮನದ ಕೂಳು. ಮಳೆಯೆ ಬೇಸಗೆಯಾಸೆ ಯಂತೆ ನನ್ನ ಪಿಪಾಸೆ ಯೆದೆಯ ನೀನೆ...

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ- ಬಾಳ್ವೆ ಸಂಗರರಂಗವೆಂಬುದಂ ಮರೆದು, ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ. ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ ಬಿಳಿಯ ಪಳವಿಗೆಯಳವೆ? ಬಾಳನೆತ್ತುದರಿಂ ಪಡೆವಳಂ...

ಎಲ್ಲಿ?

ತನ್ನೊಲಶೇಷ ಜೀವಿಗಳನೋವುತ ನೋಯಿಸದಿರ್ಪರಾವಗಂ, ಧರ್ಮಸಮಸ್ತದೊಳ್‌ ಸದೃಶನೀಶ್ವರನೆಂದರಿದಿರ್ಪರಾವಗಂ, ತಾಯಿಳೆಗಾಗಿ ಬಾಳ್ತಳೆದು ಬಾಳ್ಗಳೆದುಂ ಬದುಕಿರ್ಪರಾವಗಂ- ಬೆಳ್ಳಿಯ ಬೆಟ್ಟಮಿಂಗಡಲವೆಲ್ಲಿವರೆಲ್ಲಿಹರಲ್ಲಿಯಲ್ಲಡೆ? ೪ *****