ಒಮ್ಮೊಮ್ಮೆ ಎನಿಸುವುದು

ಒಮ್ಮೊಮ್ಮೆ ಎನಿಸಿವುದು ಜೀವವಾರಿದಮೇಲೆ ಸುಖಸ್ವಪ್ನಗಳ ಬಿಂಬ ಮೂಡುವುದು ಎಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೊ! ಅಂತಾದರೆನಿತುಸುಖ, ಬಾಳದು ಸ್ವಪ್ನವನು ಮರೆಯಬಹುದಾಗ! ಜೀವದೊಳಗಿಲ್ಲದುದ ಸಾವಿನಲಿ ಪಡೆಯುತಲಿ ನೋವಿಲ್ಲದೊಲವಿನಿಂದ ಸವಿಯಬಹುದಾಗ!...

ಹುಣ್ಣಿಮೆಯ ಚಂದ್ರಮನು

ಹುಣ್ಣಿಮೆಯ ಚಂದ್ರಮನು ಮೋಡಗಳ ಬಲೆಯಿಂದ ಮೆಲ್ಲಮೆಲ್ಲನೆ ಜಾರಿ ಮುಂದೆ ಓಡುತಲಿರಲು ಉಷೆಯಕಡೆ ಕಾಲದಲ್ಲೋಲ ಸಾಗರದಿಂದ ಒಂದಾದಮೇಲೊಂದು ಅಲೆಬಂದು ಅಳಿದಿರಲು ಮೌನದಲಿ-ನಾನಿನ್ನು ಎಚ್ಚತ್ತು ಮಲಗಿರುವೆ! ಹಿಂದೊಂದು ದಿನ ಇಂಥ ರಾತ್ರಿಯಲೆ ನಾನೆನ್ನ ಒಲವಿನಕ್ಕನನೊಯ್ದು ಮಸಣದಲ್ಲುರಿಯುಡಿಗೆ ಆಹುತಿಯನಿತ್ತಿದ್ದೆ-ಮೃತ್ಯುವಿಗೆ...

ತಾರೆ-ಗರಿಕೆ

ತಾರೆ ಬೆಳಗುತಲಿತ್ತು ಆಗಸದಿ ನಗುನಗುತ ಹುಲ್ಲು ಗರಿಕೆಯದೊಂದು ನೆಲದಿ ನಿಂತು ಮೇಲೆ ನೋಡುತಲವಳ ಬೆಳಕು ಬಿನ್ನಾಣಗಳ ಕಂಡು ಬೆರಗಾಗುತಲಿ ಕರೆಯಿತಿಂತು! "ಬಾರೆನ್ನ ಮನದನ್ನೆ-ತಾರಕೆಯೆ ಬಾರೆನ್ನ ಮನದ ಚಿಂತೆಯನಳಿಸಿ ಶಾಂತಿ ನೀಡು." ಗರಿಕೆ ವಿರಹದಿ ಸೊರಗಿ...

ರೈತರ ಹಾಡು

ದುಡಿಯುತಿಹರೂ ನಾವೆ ಮಡಿಯುತಿಹರೂ ನಾವೆ ಜಗಕೆ ಅನ್ನವ ನೀಡುತಿಹರು ನಾವೆ! ತುತ್ತೊಂದು ಅನ್ನವನು ಬೇಡುತಿಹೆವು! ನಿಮಗಾಗಿ ಜೀವನವ ಸವೆಸುತಿಹೆವು! ಮೈಯ ದಂಡಿಪರಾವು ರಕ್ತ ಹರಿಸುವರಾವು ದಿನವು ಜನ್ಮವ ತೇಯುತಿಹರು ನಾವು! ಧನಿಕರಿಗೆ ಹೊನ್ನ ಬಣ...

ಉರುಳಿರುವ ತಾರೆಗಳು

ಉರುಳಿರುವ ತಾರೆಗಳಿಗಳುತ ನಿಲ್ಲುವರುಂಟೆ? ಮೂಡಿರಲು ಮೂಡಲಲಿ ಉದಯದರಳಿನ ಕಂಪು ಕಳೆದ ಕಾಲದ ತಂಟೆ ಇಂದೇಕೆ? - ಹೊಸ ತಂಪು ಹೃದಯದೊಳಗರಳಿರಲು, ಕಂಪು ಸವಿವುದಬಿಟ್ಟು ಅಳಿದ ಕನಸುಗಳನ್ನು-ಸತ್ವವಿಲ್ಲದ ಹೊಟ್ಟು ಅದು ಎಂಬುದನೆ ನೀ ನಂಬದೆಯೆ ಮೊಗೆಮೊಗೆದು...

ಹೊಸ ಹರಯದಲಿ ಹೂವು

ಹೊಸ ಹರಯದಲಿ ಹೂವು ಅರಳುತ್ತ ಮೊಗೆಮೊಗೆದು ಮಾಧುರ್ಯವನು ಬೀರಿ ಹಿಗ್ಗಿನಲಿ ಕುಣಿಯುತಿರೆ ದೂರದಿಂ ಹಾರುತ್ತ ದುಂಬಿ ಅದರೆಡೆ ನಡೆದು ತನ್ನಿಚ್ಛೆ ಝೇಂಕರಿಸಿ ಹೂಂಕರಿಸಿ ಹೂವಿನೆಡೆ ದಿಟ್ಟಿಸುತ ಸುತ್ತೆಲ್ಲ ಸುತ್ತಿ ಸುಳಿದಾಡುವೊಲು, ಸಾವ ಛಾಯೆಯು ಬಂದು...

ಕೊಡಗಿನ ಕರೆ

ಅಮ್ಮನನು ಅಪ್ಪಿರುವ ಎಳೆಯ ಕಂದನ ತೆರದಿ ಮೈಸೂರ ಕಂಕುಳಲಿ ಕೊಡಗ ನಾಡು ಗಿರಿಶಿಖರ ಮಲೆಮೌನ, ಕಾಡುಕಳುಪುವ ಕಂಪು ತೊರೆಯನೀರಿನ ಗೀತ ಸೊಗದ ಬೀಡು! ಕಾವೇರಿ ಬರುತಿಹಳು ಕೊಡಗಿನಲಿ ಜನಿಸುತ್ತ ಅಂಕು ಡೊಂಕಿನ ಕೊಂಕು ಬಿಂಕದಿಂದ,...

ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು? ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು ಕಳೆದ ಕಾಲದಲಳಿದ ಕನಸುಗಳು ಹೊರಬಂದು ದುಗುಡ ಹರಡುತಲಿಹವು.  ದಡದ ಮೇಲಿನ ಮರಳು ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು ಹೃದಯ ಹಸಿದಿದೆಯಿಂದು ಒಲವಿಗಾಗರಸುತಲಿ,...

ಒಮ್ಮೆ ಹಾಡಿದ ಹಾಡು

ಒಮ್ಮೆ ಹಾಡಿದ ಹಾಡು- ಮತ್ತೊಮ್ಮೆ-ಹಾಡಲೆಂತೋ ಅರಿಯೆ. ಒಮ್ಮೆ ಕಂಡಾಕನಸು ಮತ್ತೊಮ್ಮೆ-ಕಾಣಲೆಂತೋ ಅರಿಯೇ! ಎಲ್ಲ ನಿನ್ನದೆ ಛಾಯೆ ಹೃದಯದೊಲವೆ! ಜೀವವೊಂದೇ ಅಹುದು, ಬದುಕುಗಳು-ಸಾಸಿರವ ಮಿಕ್ಕುವುವು! ಭಾವವೊಂದೇ ಅಹುದು, ರೂಪಗಳು-ಎಣಿಕೆಗೇ ಸಿಕ್ಕದವು! ಎಲ್ಲ ನಿನ್ನದೆ ಮಾಯೆ ಹೃದಯದೊಲವೆ!...

ಭಾವ ಜೀವ

ಭೋರ್ಗರೆದು ಬರಸೆಳೆದು ಬಿರುಸಿನಲಿ ಚಿಮ್ಮೆಸೆದು ಗಿರಗಿರನೆ ಸುರುಳಿಯಲಿ ಸೊರಗಿಸುವ ಸುಳಿಗಳಲಿ ಸಿಕ್ಕಿದಂತೊಮ್ಮೊಮ್ಮೆ ಹೃದಯ ಬಲು ತಪಿಸುವುದು! ನಭಕೇರಿ ಕೆಳಗುರುಳಿ ಭಾವಗಳ ಕಡಲಿನಲಿ ಮಿಂದು ಮೈ ಬೆಂಡಾಗಿ ಬಸವಳಿದು ಬೀಳುವುದು! ಮರು ನಿಮಿಷ ಮೆಲ್ಲೆಲರು ಮೃದು...
cheap jordans|wholesale air max|wholesale jordans|wholesale jewelry|wholesale jerseys