Day: December 24, 2024

ಉಮರನ ಒಸಗೆ – ೪೯

ಕೇಳು ರಂಜಾನ್ ಹಬ್ಬದಂತ್ಯದೊಳದೊಂದು ದಿನ, ಶುಭ ಚಂದ್ರನಿನ್ನು ಮುದಿಸದಿರೆ, ಸಂಜೆಯಲಿ ನಾನೋರ್‍ವ ಕುಂಬಾರನಂಗಡಿಯ ಬಳಿ ನಿಂತು ಮಣ್ಣ ಮಾಟಗಳ ಸಾಲ್ಗಳ ನೋಡುತಿರ್‍ದೆಂ. *****

ಬಿನದ

೧ ಬಾ ಕೆಳೆಯ, ಬಾ ಕೆಳೆಯ ಹೋಗೋಣ ಬಾ- ಗುಡ್ಡವೆದ್ದಿಹ ಕಡೆಗೆ ಕಣಿವೆ ಬಿದ್ದಿಹ ಕಡೆಗೆ ತೊರೆಯುರುಳಿ ದನಿಹರಳ ಹೊಳೆಸುವೆಡೆಗೆ. ಇಲ್ಲದಿರೆ, ಜಲದ ಜಲ್ಪವ ಕೇಳೆ ಕೊಳದ […]