ಪ್ರಿಜಂ

ಕವಿಯ ಕಣ್ಣೊಂದು ಪ್ರಿಜಂ ಜಗಕೆಲ್ಲ ಹಾಕಿದಂತೆ ಮೆಸ್ಮರಿಜಂ ಹಿಡಿದಂತೆ ವಿಚಿತ್ರ ರಾವುಗನ್ನಡಿ ಕಪ್ಪು ಬಿಳುಪುಗಳ ಚಿತ್ರಗಳಿಗೆ ಮೂಡುವವೋ ಕೊಂಬುಬಾಲ ಕೋರೆ ಹಲ್ಲುಗಳು ಬಣ್ಣ ಬಣ್ಣ ಮುಖವಾಡಗಳು ವೇಷಭೂಷಣಗಳು ಸರಳ ರೇಖೆಯೊಳಗಿಂದ ಹಾಯುವ ಬಿಳಿಕಿರಣಗಳು ವಕ್ರೀಭವಿಸಿ...