ಲಿಂಗಮ್ಮನ ವಚನಗಳು – ೧೦

ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ ಎಂಬ ಅಣ್ಣಗಳಿರಾ ನೀವು ಕೇಳಿರೊ, ಹೇಳಿಹೆನು. ಕಾಮವಿಲ್ಲದವಂಗೆ ಕಳವಳ ಉಂಟೆ? ಕ್ರೋಧವಿಲ್ಲದವಂಗೆ ರೋಷ ಉಂಟೆ? ಲೋಭವಿಲ್ಲದವಂಗೆ ಆಸೆಯುಂಟೆ? ಮೋಹವಿಲ್ಲದವಂಗೆ ಪಾಶ ಉಂಟೆ? ಮದವಿಲ್ಲದವಂಗೆ ತಾಮಸ ಉಂಟೆ?...