ಇದುವೆ ನನ್ನಯ ಸೇವೆ

ಸಾಹಿತ್ಯ ಸಾಗರದ ದಡದಿ ನಿಲ್ಲುತಲಂದು ನೋಡಿದೆನು ಆಸೆಯಿಂ ಅಲೆಗಳೆಡೆಗೆ ಒಳಗೆ ಹುಡುಗಿಹ ಮುತ್ತುರತ್ನಗಳನೊಯ್ಯುವೆನೆ ಕನ್ನಡಮ್ಮನ ಅಡಿಗೆ ಮಾಲೆಯಾಗಿಡಲು! ದೂರದಿಂ ಕುಣಿಯುತ್ತ ಹತ್ತಿರಕೆ ಬಂದಿತಲೆ, ನೋಡುತಲೆ ಧೀಗೆಟ್ಟೆ ರೌದ್ರರೂಪ! ಸಾಗರದಿ ಮುಳುಗುತ್ತ ಮುತ್ತು ರತ್ನವನಾಯೆ ಧೈರ್ಯಸಾಲದೆ...

ಸೂರ್ಯಕಾಂತಿ

ಅಕೊ ಮೂಡ ಬಯಲಿನಲಿ ಬೆಳ್ನೆರೆಯ ಚೆಲ್ಲಿಹರು ಅದೋ ಮೂಡ ಬಾನಿನಲಿ ರವಿ ಕಾರುತಿಹನು! ಭುವಿಯೆಲ್ಲ ಬೆಳಕಿನಾ ಮುನ್ನೀರಂತಾದುದು; ಗಿರಿಯೆಲ್ಲ ನಗುವಂತೆ ತಲೆಯೆತ್ತಿ ನೋಡುವುದು. ಚಂದಿರನ ಓಡಿಸಿತು ಇಬ್ಬನಿಯ ಮಳೆಯು; ಬಿಳಿವಣ್ಣು ತಾರಕೆಯ ಹಕ್ಕಿಗಳು ಕುಟುಕಿದುವು....