ಸುಮ್ಮನೆ ಹೀಗೇ..

ಅಂದಿನಂತೆಯೇ ಇಂದೂ ಕ್ಷಣಗಳ ಯುಗವಾಗಿಸಿ ಮುಖಾಮುಖಿ ಕುಳಿತಿದ್ದೇವೆ ಏತಕ್ಕೋ ಕಾಡಿದ್ದೇವೆ! ಅಥವಾ ಸುಮ್ಮನೆ ಹೀಗೇ... ಭಾವುಕತೆ ಮೀರಿದ್ದೇವೆ ಸ್ಥಿತಪ್ರಜ್ಞರಾಗಿದ್ದೇವೆ ಮಾತಿಗೆ ಅರ್ಥವಿಲ್ಲ ಮೌನ ವ್ಯರ್ಥವಲ್ಲ! ತಿಳಿದಿದ್ದೇವೆ. ಬಹುದೂರ ಸಾಗಿದ್ದೇವೆ ಏನೆಲ್ಲಾ ನೀಗಿದ್ದೇವೆ ಹಮ್ಮುಗಳನಿಳಿಸಿ ಬಾಗಿದ್ದೇವೆ...