ಭಾಷ್ಯ ಬರೆಯುವುದೆಂತು

ಭೂರಮೆಯ ಭೌಮದನಿಕೇತನಕೆ ಭಾಷ್ಯ ಬರೆಯುವುದೆಂತು ಬರಿ ಮಾತು || ಮೌನ ತವಸಿಯ ತಪದಾ ನೆಲೆಯಲಿ ಮಾತಿಗೆಲ್ಲಿಯ ಕಾಲ ಸಂದಲಹುದು || ಎತ್ತರೆತ್ತರ ಶೃಂಗಾರನಂಗವು ಮೌನ ಹಿಮದ ಪಾದಾದಿಯಲು ಮತ್ತೆ ಮೌನ || ಕಂದರಂದ್ಹರದಾಳದಳದಲೂ ನಿಃಶಬ್ದ...