ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಕನ್ನಡಪರ ಚಿಂತಕರು ಮತ್ತು ಸೃಜನಶೀಲ ಲೇಖಕರು. ಬಂಡಾಯ ಸಾಹಿತ್ಯ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡು ಆ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮ ನೆಲೆಯನ್ನು, ನಿಲುವನ್ನು ಗಟ್ಟಿಯಾಗಿ, ನಿರ್ದಿಷ್ಟವಾಗಿ ಗುರುತಿಸಿಕೊಂಡ ಸಜ್ಜನ ಸಾಹಿತಿ.
ಯಾವುದೇ ಸಂಸ್ಕೃತಿ ಮತ್ತು ಇತಿಹಾಸವು ಎರಡು ಜನವರ್ಗಗಳನ್ನು ಹೊಂದಿರುತ್ತದೆ. ಒಂದು, ಆಳುವ ವರ್ಗ. ಇನ್ನೊಂದು, ಆಳಿಸಿಕೊಳ್ಳುವ ವರ್ಗ. ಆಳುವ ವರ್ಗದಲ್ಲಿ ಪ್ರಭುಗಳು, ಶ್ರೀಮಂತರು, ಪುರೋಹಿತಶಾಹಿ ವಕ್ತಾರರು ಕಾಣಿಸಿಕೊಂಡರೆ, ಆಳಿಸಿಕೊಳ್ಳುವ ವರ್ಗದಲ್...