Home / ನ್ಯಾನೋ ಕತೆ

Browsing Tag: ನ್ಯಾನೋ ಕತೆ

ಒಮ್ಮೆ ಗುರುವಿಗೆ ಆಪತ್ಕಾಲ ಬಂದಿತು. ಕಡು ಬಡತನ, ರೋಗ, ವೃದ್ಧಾಪ್ಯದಲ್ಲಿ ನರಳುತ್ತಿದ್ದರು ಗುರುಗಳು. ಮಳೆ ಗಾಳಿಗೆ ಬಿದ್ದು ಹೋದ ಜೋಪಡಿಯಲ್ಲಿ ಮಲಗಿದ್ದರು. ಹೊಟ್ಟೆಗೆ ಹಿಟ್ಟಿಲ್ಲದೆ, ರೋಗಕ್ಕೆ ವೈದ್ಯಕೀಯವಿಲ್ಲದೆ ಗುರು ಸಾಯುವ ಶೆಯ್ಯಯಲ್ಲಿದ್ದರು...

ಒಮ್ಮೆ ಗುರುಗಳು ತಮ್ಮ ಇಬ್ಬರು ಆಪ್ತ ಶಿಷ್ಯರನ್ನು ಕರೆದು ಒಂದು ಪರೀಕ್ಷೆಗೆ ಒಳಪಡಿಸಿದರು. “ಶಿಷ್ಯಂದಿರೆ! ನೀವು ಝೆನ್‌ನನ್ನು ಬಹಳದಿನದಿಂದಲೂ ಕಲಿಯುತ್ತಿದ್ದೀರಿ. ನಿಮಗೆ ಈ ಪರೀಕ್ಷೆ ಎದುರಾಗಿದೆ. ಝೆನ್‌ನಲ್ಲಿ ನಿಮ್ಮ ಹೃದಯ ಎಷ್ಟು ಒಂದಾಗ...

ಒಂದು ಪಟ್ಟಣದಲ್ಲಿ ಒಬ್ಬ ಅತ್ಯಂತ ಧನಿಕನಿದ್ದ. ಅವನಲ್ಲಿ ಇರದ ವಸ್ತುಗಳಿರಲಿಲ್ಲ. ಜಗತ್ತಿನ ಎಲ್ಲಾ ವಸ್ತುಗಳನ್ನು ಖರೀದಿಸಿ ಶೇಖರಿಸಿದ್ದ. ಆದರೂ ಅವನಿಗೆ ತೃಪ್ತಿ, ಸಂತಸವಿರಲಿಲ್ಲ. ನೆಮ್ಮದಿ ಶಾಂತಿ ದೊರೆತಿರಲಿಲ್ಲ. ಅವನ ಬಾಳನ್ನು ವ್ಯಾಪಾರಿ ಮನೋಭ...

ಗುರುವಿನ ಕಠೋರ ಮಾತುಗಳು ಶಿಷ್ಯನಿಗೆ ವೇದನೆಯಾಯಿತು. ತಾನು ಮಾಡಿದ ತಪ್ಪುಗಳನ್ನು ಅರಿತು ಆಂತರ್ಯವನ್ನು ಶೋಧಿಸ ತೊಡಗಿದ. ಒಡನಾಡುವ ಮಿತ್ರರೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲಾರದೆ ವಿಕಾಂತವನ್ನು ಬಯಸಿದ. ಕಾಡಿನ ಮೂಲೆಯಲ್ಲಿ ಗಿಡಮರಗಳ ಮಧ್ಯೆ...

ಒಬ್ಬ ತನ್ನ ಮಿತ್ರನನ್ನು ಬಹಳ ದಿನಗಳ ನಂತರ ಸಂಧಿಸಿದ. ಅವನಿಗೆ ಆಶ್ಚರ್ಯವೆನಿಸಿದ್ದು ಎಂದರೆ ಅವನ ಮೀಸೆ. ಕಿವಿಗಳವರೆಗೂ ದಟ್ಟವಾಗಿ ಬೆಳೆದ ಮೀಸೆಯ ಮೇಲೆ ಗೆಳೆಯನ ಅಭಿಮಾನ ನೋಡಿ ಇವನಿಗೆ ಸೋಜಿಗವೆನಿಸಿತು. “ಏನಪ್ಪ, ಇಷ್ಟು ದೊಡ್ಡ ಮೀಸೆ? ಯಾವ...

ಅವನೊಬ್ಬ ಜಟ್ಟಿ, ಕುಸ್ತಿಮಾಡಿ ಜೀವಿಸುತ್ತಿದ್ದ. ಅವನಿಗೆ ತನ್ನ ಪ್ರತಿಯೊಂದು ಅಂಗವೂ ಅತ್ಯಂತ ಪ್ರಿಯ. ಮಾಂಸಖಂಡಗಳನ್ನು ಬಲಿಷ್ಟಿಸಿಕೊಂಡು ಸಂತಸ ಪಡುತ್ತಿದ್ದ. ಅವನಿಗೆ ಉಕ್ಕಿನಂತಹ ಮೂಳೆಯಿದ್ದರೂ, ಅತಿನಾಜೂಕಾದ ಹಲ್ಲುಗಳಿದ್ದವು. ಕುಸ್ತಿ ಮಾಡುವಾಗ...

ಒಬ್ಬ ಸಂಸಾರಿ, ತಾಪತ್ರಯಗಳಲ್ಲಿ ಸಿಲುಕಿ, ನಾಲಿಗೆ ತುದಿಯಲ್ಲಿ “ಈಶ್ವರ! ಈಶ್ವರ! ಎನ್ನುತ್ತಿದ್ದ. ಇಪ್ಪತ್ತು ನಾಲ್ಕು ಘಂಟೆ ಅವನಿಗೆ ಸಂಸಾರದ ಗೋಳು. ಹೆಂಡತಿ ಮಕ್ಕಳ ಕಾಟ, ಭವದ ಬವಣೆ, ಬಾಯಲಿ ಮಾತ್ರ ಈಶ್ವರ ಭಕ್ತಿ, ಕರ್ಮಗಳನ್ನು ಮಾಡುತ್ತ ಫಲಾಪೇಕ...

ಒಬ್ಬ ವಯೋವೃದ್ಧ ತನ್ನ ಜೀವಮಾನದಲೆಲ್ಲಾ ಒಂದು ಕರಿಯ ಬೆಣಚು ಕಲ್ಲನ್ನು ತುಂಬಾ ಪ್ರೀತಿಸುತ್ತಿದ್ದ. ಅವನು ಅದನ್ನು ಸದಾ ಕಾಲವೂ ಕೈಯಲ್ಲಿಟ್ಟು ಕೊಂಡಿರುತ್ತಿದ್ದ. ಕೈಯಲ್ಲಿ ಕೆಲಸವಿದ್ದಾಗ ಅದನ್ನು ಬಾಯಿಯಲ್ಲಿ ಹಾಕಿಕೊಂಡು ದವಡೆಯಿಂದ ದವಡೆಗೆ ಬದಲಾಯಿ...

“ತಂದೆ ತಾಯಿ, ಮಕ್ಕಳ ಹುಟ್ಟು ಹಬ್ಬ ಆಚರಿಸುವುದು ಏಕೆ”? ಎಂದು ಶಿಷ್ಯ ಗುರುಗಳಲ್ಲಿ ಕೇಳಿದ. “ಅದು ಚೈತನ್ಯದ ಹಬ್ಬ. ಚೈತನ್ಯದ ಬೆಳವಣಿಗೆ, ವೃದ್ಧಿ ಇದರ ಸಂತೋಷವೇ ಹುಟ್ಟು ಹಬ್ಬ” ಎಂದರು ಗುರುಗಳು. “ಅದು ಸಾವಿನಲ್ಲಿ ಕೊನೆ ಮುಟ್ಟುವು...

ಒಬ್ಬ ಮುದುಕ ಕಾಟ ಕೊಡುತ್ತಿದ್ದ ನೊಣವನ್ನು ತನ್ನ ಎರಡು ಅಂಗೈಯಲ್ಲಿ ಹಿಡಿದು ಬಡಿದು ಹಾಕಿದ. ನಂತರ ಅವನಿಗೆ ವೇದನೆಯಾಗ ತೊಡಗಿತು. ಹಾರಾಡುತ್ತಿದ್ದ ನೊಣವನ್ನು ಸಾಯಿಸಿ ಬಿಟ್ಟೆನಲ್ಲಾ ಎಂದು ಮರುಕಗೊಂಡ. ತಪ್ಪಿತಸ್ತ ಮನೋಭಾವದಲ್ಲಿ ಬೆಂದುಹೋದ. ಸತ್ತಜ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...