Home / ಕಥೆ / ಕಿರು ಕಥೆ / ಧ್ಯಾನಾನುಭವ

ಧ್ಯಾನಾನುಭವ

ಒಮ್ಮೆ ಗುರುಗಳು ತನ್ನ ಪಟ್ಟ ಶಿಷ್ಯನನ್ನು ಕರೆದು ಹೀಗೆ ಹೇಳಿದರು. ಇಂದು ನೀನು ನಿನ್ನ ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಮಾಡು. ನಿನ್ನ ಧ್ಯಾನದ ಅನುಭವವನ್ನು ನಂತರ ನನಗೆ ಬಂದು ಹೇಳು”-ಎಂದು ಹೇಳಿದರು.

ಶಿಷ್ಯ ಗುರುವಿನ ಅಣತಿಯ ಮೇರೆಗೆ ನಿಬಿಡವಾದ ವನಕ್ಕೆ ಹೋಗಿ ಒಂದು ವೃಕ್ಷದ ಕೆಳಗೆ ಧ್ಯಾನಕ್ಕೆ ಕುಳಿತುಕೊಂಡ. ಕಣ್ಣು ಮುಚ್ಚಿ, ಭುಜ, ಕತ್ತು, ಬೆನ್ನು ಒಂದು ನಿಲಿವಿನಲ್ಲಿಟ್ಟು, ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಆರಂಭಿಸಿದ.

ಶ್ಯಾಸವನ್ನು ರೇಚಕದಿಂದ ಪೂರಕ, ಪೂರಕದಿಂದ ಕುಂಭಕದಲ್ಲಿ ಶ್ವಾಸವನ್ನು ವೀಕ್ಷಿಸುತ್ತಾ ಕಾಲದ ಅನಂತತೆಯಲ್ಲಿ ಲೀನವಾದ. ಅವನ ಉಸಿರು ಮಂದ ಪವನದೊಂದಿಗೆ ಒಂದಾಯಿತು. ಹಾಡುವ ಕೋಗಿಲೆಯ ನಾದದಲ್ಲಿ ತೇಲಾಡಿತು. ಎಲೆಯ ಮರ್ಮರದಲ್ಲಿ ಒಂದಾಯಿತು. ವೃಕ್ಷದ ಬೇರಲ್ಲಿ ಬೇರೂರಿತು. ಹೂಗಂಧವಾಯಿತು. ಹಣ್ಣಿನ ಪಕ್ವತೆ ಪಡೆಯಿತು. ವನವೆಲ್ಲಾ ಸುತ್ತಾಡಿತು. ಉಸಿರಿಗೆ ದೇಹದ ಅಸ್ತಿತ್ವ, ದೂರವಾಯಿತು. ಮನದ ಹಿಡಿತದಿಂದ ಉಸಿರು ವಿಶ್ವಗಾಮಿಯಾಯಿತು. ಸೀಮೆಗಳ ದಾಟಿತು. ವಿಶ್ವದ ಎಲ್ಲಾ ಚೇತನಕ್ಕೆ ಹೊಂದಿಕೊಂಡಿತು. ಬೆಸೆದುಕೊಂಡಿತು. ಆಗಸದ ನೀಲಿಯಲ್ಲಿ ಬೆರೆತಿತು. ಕಿರಣದಲ್ಲಿ ಮುಳುಗಿತು. ಬೆಳದಿಂಗಳಲ್ಲಿ ಆಡಿತು. ನಕ್ಷತ್ರದೊಡನೆ ನರ್ತಿಸಿತು. ಸಾಗರದ ಅನಂತತೆಯಲ್ಲಿ ತೇಲಾಡಿತು. ನದಿಯೊಡನೆ ಹರಿಯಿತು.

ಜಲಪಾತದಲ್ಲಿ ಲಾಸ್ಯವಾಡಿತು. ಮಳೆಯಲ್ಲಿ ಮಿಂದಿತು. ಮಿಂಚಲ್ಲಿ ಬೆಳಗಿತು. ನಾನು ಎಂಬುದಿಲ್ಲದೆ ಉಸಿರು ತಾನೇತಾನಾಗಿ ಮೆಲ್ಲ ಮೆಲ್ಲನೆ ವಿಶ್ವವ್ಯಾಪಿಯಾಯಿತು. ಪ್ರಾಣ ವಿಶ್ವಪ್ರಾಂಗಣವಾಯಿತು. ‘ನಾ’ನಿಲ್ಲದ ಆವಿಶ್ವ ಐಕ್ಯದಲ್ಲಿ ಉಸಿರದೆಷ್ಟು ಜೀವಂತ. ಉಸಿರು ಅದೆಷ್ಟು ಹಸಿರು ವಸಂತ. ಉಸಿರು ಅದೆಷ್ಟು ಅನಂತ ಭವ್ಯತೆಯ ಭಗವಂತ! ವಿಶ್ವಚೇತನದಲ್ಲಿ ಅನುಭಾವಿ ಶಿಷ್ಯ ಮಾರನೆ ದಿನ ಗುರುವಿನಲ್ಲಿ ಬಂದ.

“ಪ್ರಿಯ ಶಿಷ್ಯ! ನಿನ್ನ ಧ್ಯಾನದ ಅನುಭವವೇನು?”ಎಂದು ಗುರುಗಳು ಕೇಳಿದರು.

“ಧ್ಯಾನದಲ್ಲಿ ನಾನಿರಲಿಲ್ಲ. ನಾನೇನು ಹೇಳಬಲ್ಲೆ? ಉಸಿರು ಮಾತ್ರ ಇದ್ದಾಗ ನಾ ಮೌನ ಚೇತನವಾಗಿದ್ದೆ.” ಎಂದ ಶಿಷ್ಯ.

“ಅಹುದು ಶಿಷ್ಯ! ನಿನ್ನ ಮೌನ ಸ್ಪಂದನ ನಿನ್ನ ಅನುಭವ ಸಾರುತ್ತಿದೆ” ಎಂದರು ಗುರುಗಳು.
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...