Home / ಕವನ / ಕವಿತೆ / ಕಾಣ್ಕೆ

ಕಾಣ್ಕೆ

ಸಾಕ್ಷಿಕ ಭೂಮಿಕೆಯೊಳಿಹ ನಿಲಿಂಪ
ಛಳಿಜ್ವರವಲ್ಲವು ಸಾತ್ತ್ವಿಕ ಕಂಪ
ಚೈತ್ಯ ಶಿಖೆಯೊಳಿದೆ ಶ್ರೀನಕ್ಷತ್ರ
ನಿರೀಕ್ಷಿಸುತ್ತಿದೆ ಸಾಹಸ ಕ್ಷೇತ್ರ
ಕರೆಯಬೇಡವೇ ಜೀವೋದ್ಗೀತಾ
ಅಪೂರ್ವ ಭಾವದ ನವನವನೀತಾ
ಹಣ್ಣಲ್ಲವು ಈ ಸ್ವಯಂಭು ಕಣ್ಣು
ಪರ್ವ ಪರ್ವ ನಿಪ್ಪೊಸತೀ ಗಣ್ಣು.
ಕಳಿತ ಪದಾರ್ಥವು ಕೊಳೆಯುವದುಂಟು
ಬೃಹದ್ವಸ್ತುವದು ಬೆಳೆಯುವದುಂಟು.
ಓ ಅಶ್ವತ್ಥಾ! ಎತ್ತಿಂದೆತ್ತಾ?
ನಡುವಿನಲ್ಲಿ ಇದೆ ನೀರಿನ ಮುತ್ತಾ!
ಮುತ್ತು ಮೂರ್ತಿಸಲು ಆಯಿತು ಮಗುವು
ಸ್ತಿಮಿತ ಅಸ್ಮಿತೆಯ ಸಸ್ಮಿತ ಜಗವು
ಆಚೆ ಈಚೆಗೂ ಚಾಚಿದೆ ಕೈಯ್ಯಾ,
ಕೆಳಗೂ ಮೇಲೂ ನೀಡಿದೆ ಮೈಯ್ಯಾ,
ಹಿಂದೂ ಮುಂದೂ ತೂಗುತ ನಿಂತೆ
ಒಳಗೂ ಹೊರಗೂ ತುಂಬಿರುವಂತೆ
ನಿಷ್ಫಲವಲ್ಲವು ನನ್ನೀ ಠಾವು
ಅರಿವು ಎಂಬುದಿದು ಅತ್ತಿಯ ಹೊವು.
ಅಶೀರ್ವಾದವು ನೀಡಿದೆ ಮೇಲೆ:-
ತಾಯಿಯ ತೊಡೆಯಲೆ ಕಲೆಗಳ ಶಾಲೆ
ನಿಃಶಬ್ದದ ಒಳ ತೊಟ್ಟಿಲೊಳಿತ್ತು
ನುಡಿಯದ ಸೊಲ್ಲನೆ ನುಡಿಸುವ ಗತ್ತು
ಊದಿ ತುಂಬುತಿರು ಅಂತಃಪ್ರಾಣ
ಅನಿರ್ದೇಶ್ಯದಲೆ ಮನೆಯನು ಕಟ್ಟು
ಬೀಡಾಡಿಯ ಚಂಚಲತೆಯ ಬಿಟ್ಟು
ಅರಸಗೆ ಬೇರೆಯ ಅರಮನೆ ಬೇಕೆ?
ಬೆಳಕಿನ ಕುದುರೆಗೆ ಬಣ್ಣಗಳೇಕೆ?
ಅಲ್ಲ ಅಲ್ಲವಿದು ಮೌನದ ಭಂಗ.
ನಾದ ತರಂಗಿಣಿ ನುಡಿಸು ಮೃದಂಗ
ಅಂಗೈಯೊಳಗೇ ಅಡಗಿದೆ ಬೆಟ್ಟಾ
ವಧುವಿನ ಸ್ಪರ್ಶಕೆ ವರ ತೆರದಿಟ್ಟಾ
ಪಾರ್ವನದಾರೋ ಪಾರ್ವತಿ ಯಾರೋ
ಕಾಣ್ಕೆಯ ನೀಡಲು ಮೇರುವನೇರೋ
ಬೆಡಗು ಎನ್ನದಿರು ಈ ಬಗೆಯಾಟ
ನೋಟವೆ ನೈಗೊಂಡಿರೆಯಾ ಮಾಟ?
ಮಾತಲ್ಲವು ಆಕಾಶದ ತೂತು
ಬೆರಗುಗೊಳಿಸುತಿದೆ ಬೆಳಕೇ ಹೂತು.
*****
Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...