Home / ಕಥೆ / ಕಿರು ಕಥೆ / ನೊಣದಕಾಟ

ನೊಣದಕಾಟ

ಒಬ್ಬ ಮುದುಕ ಕಾಟ ಕೊಡುತ್ತಿದ್ದ ನೊಣವನ್ನು ತನ್ನ ಎರಡು ಅಂಗೈಯಲ್ಲಿ ಹಿಡಿದು ಬಡಿದು ಹಾಕಿದ. ನಂತರ ಅವನಿಗೆ ವೇದನೆಯಾಗ ತೊಡಗಿತು. ಹಾರಾಡುತ್ತಿದ್ದ ನೊಣವನ್ನು ಸಾಯಿಸಿ ಬಿಟ್ಟೆನಲ್ಲಾ ಎಂದು ಮರುಕಗೊಂಡ. ತಪ್ಪಿತಸ್ತ ಮನೋಭಾವದಲ್ಲಿ ಬೆಂದುಹೋದ. ಸತ್ತಜೀವಕ್ಕೆ ಜೀವಕೊಡುವ ಸಾಮರ್ಥ್ಯ ತನಗಿಲ್ಲ. ತಾನು ಏನು ಮಾಡಿ ನೊಣಕ್ಕೆ ಸದ್ಗತಿ ಕೊಡಬಹುದೆಂದು ಯೋಚಿಸಿದ. ನೊಣದ ಹಣವನ್ನು ಸೀದಾ ಸ್ವರ್ಗಕ್ಕೆ ಕಳಿಸಬೇಕೆಂದು ನಿರ್ಧರಿಸಿ ಸತ್ತ ನೊಣವನ್ನು ಒಂದು ಲಕೋಟೆಯಲ್ಲಿ ಹಾಕಿ ಮೇಲೆ ಸ್ವರ್ಗದಲ್ಲಿರುವ ದೇವರಿಗೆ ಎಂದು ವಿಳಾಸ ಬರೆದು ಟಪಾಲಿನಲ್ಲಿ ಹಾಕುವ ಮುನ್ನ ದೇವರ ಕೈಗೆ ಸೇರದಿದ್ದಲ್ಲಿ ವಾಪಸ್ಸು ಕಳಿಸುವ ತನ್ನ ವಿಳಾಸವನ್ನು ಬರೆದು ಹಾಕಿದನು. ಲಕೋಟೆ ಕೆಲವು ದಿನದ ಮೇಲೆ ಇವನ ಕೈಗೆ ಬಂದಿತು. ಟಪಾಲು ಪೆಟ್ಟಿಯಲ್ಲಿ ಸತ್ತ ನೊಣದ ನಾರುವ ದೇಹಕ್ಕೆ ಅಂಟಿಕೊಂಡು ಒಂದು ಇರುವೆ ಕೂಡ ಲಕೊಟೆ ತೆರೆದಾಗ ಹೊರಬಂದಿತು. ಮುದುಕ ಅತ್ಯಂತ ಹರ್ಷದಿಂದ ತನ್ನ ಸ್ನೇಹಿತ ಮುದುಕನನ್ನು ಕರೆದು ಸತ್ತ ನೊಣ ಸ್ವರ್ಗದಿಂದ ಪುನರ್ ಜನ್ಮ ಪಡೆದು ಇರುವೆಯಾಗಿ ಹಿಂತಿರುಗಿದೆ ಎಂದು ಘೋಷಿಸಿದ. ಮುದುಕನ ಸ್ನೇಹಿತ ಮುದುಕನ ಬೆನ್ನು ತಟ್ಟಿ “ಭಯಪಡಬೇಡ ನೀನು ಸತ್ತ ಮೇಲೆ ನಿನ್ನ ದೇಹವನ್ನು ಸ್ವರ್ಗಕ್ಕೆ ಚೀಲದಲ್ಲಿ ಕಟ್ಟೆ ಕಳಿಸುತ್ತೇನೆ. ನೀನು ಸ್ವರ್ಗದಿಂದ ವಾಪಸ್ಸು ಮತ್ತೆ ಜನ್ಮ ಪಡೆದು ನನ್ನ ಸ್ನೇಹಿತನಾಗಿ ಬಾ” ಎಂದ. ಮುದುಕನಿಗೆ ತನ್ನ ಅರಿವು ಮೂಡಿ ತನ್ನ ಬಗ್ಗೆ ತನಗೇ ನಾಚಿಕೆಯಾಯಿತು.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...