ಇಜ್ಜೋಡು

ನನ್ನಾಕೆಯಂತಾಕೆ ಲೋಕಕೆ ಒಬ್ಬಾಕೆ ಅವಳಿಗೆ ಅವಳೆ ಹೋಲಿಕೆ. ಓದಿಯೂ ಓದದ ದೂರದವಳಲ್ಲದ ಇವಳ ಮಾಡಿಕೊಂಡು ಬಂದೆ ಇವಳ ಜೋಡಿ ಸಂಸಾರ ನನಗೆ ಕತ್ತಿ ಮೇಲೆ ಸಾಮು ಮಾಡಿದಂಗಾಗುತಿಹುದು. ಮೇಲೆ, ನೋಡೋಕೆ ಇವಳು ಮೆತ್ತನ್ನಾಕೆ ಒಳಗೆ...

ಹೇಗೆ ದಂಡಿಸಿದ್ದಾರೆ ನೋಡಿ…

ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತಿದೆ ಮರದಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ. ಕೊಚ್ಚಿ ಹಾಕಿಹರು ಅದನು ಕೂಡು ರಸ್ತೆಯಲಿ ವಿಷಕೆ...

ಎದುರಾಳಿಯಾಗರು

ಉಕ್ಕಿ ಹೊರ ಬರಲು ಯತ್ನಿಸುವ ಕಣ್ಣೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ, ನಿಟ್ಟುಸಿರುಗಳ ನುಂಗಿ, ಹಸಿರಿನುಸಿರಿಗೆ ಹಂಬಲಿಸಿ, ಹಳದಿ ಕಾಯಿಲೆ ಓಡಿಸಿದ ಜೀವ ಸೂತ್ರ ಸ್ವತಂತ್ರ. ಮುಚ್ಚಿರುವ ಮುಸುಕಿನ ಅಡಿಯಲಿ ಹಿಡಿದಿಟ್ಟ ಬಿಗಿಯುಸಿರು ಸ್ವತಂತ್ರ ಕೋಗಿಲೆಯ...

ನಮ್ಮಭಾಗ್ಯ

ಓ ನನ್ನ ಸೌಭಾಗ್ಯ! ಇಲ್ಲಿಹುದು ನೋಡು ನಮ್ಮ ನಿಜ ಭಾಗ್ಯ ನೋಡು! ಆಡು ಹಾಡು ನೀನು ನೀನೇ ಆಗು. ಆಗಸವ ತುಂಬಿವೆ ಮದದಾನೆ ಹಿಂಡಂತೆ ಗಾಂಭೀರ್‍ಯ, ಚೆಲುವಿನ ಬಿಳಿ ಮೋಡ ದಂಡು. ಬೆಳಗುತಿಹವು ಸುಮಂಗಲಿಯ...

ಏನದು ಪ್ರೇಮ?

ಏನದು ಪ್ರೇಮ... ಅಪೂರ್ವವಾದ ವಸ್ತುವೆ ಅಪರಿಮಿತವಾದ ಚೈತನ್ಯವೆ ಅಸದೃಶ ಅನುಭೂತಿಯೆ? ಏನದು ಪ್ರೇಮ... ಜಾಜ್ವಲ್ಯಮಾನ ಬೆಳಕೆ ಪರಮ ಪರಿಮಳದ ಹೂವೆ? ಪ್ರೇಮಕ್ಕೆ ಸಪ್ತವರ್ಣವಂತೆ ಮಕರಂದಕಿಂತಲೂ ಸಿಹಿಯಂತೆ ನಿಜವೇನು? ಪ್ರೇಮಕ್ಕೆ ನಕ್ಷತ್ರ ಖಚಿತ ಕಣ್ಣಂತೆ ಮುತ್ತು...

ಅಸ್ತಿತ್ವ

ನನ್ನ ಮನೆಯ ಒಡತಿ ನೀನು, ನನ್ನ ಮಕ್ಕಳ ತಾಯಿ ನೀನು, ಮೌನವಾಗಿ ತಲೆ ತಗ್ಗಿಸಿ ಎಲ್ಲರ ಸೇವೆ ಮಾಡುವ ನಿನಗೆ ಸ್ವರ್ಗ ಲೋಕದಲ್ಲಿ ಸ್ಥಾನ ಭದ್ರ ಮರಿಯಮ್, ಖತೀಜಾ ಹಾಗೂ ಬೀವಿ ಫಾತೀಮಾರಂತೆ ನಾವು...

ಅವಲಂಬನ

ನೋಡಿ ಕೊಂಡು ಬರಲಿ ಯಾರಿಗಾದರು ಸಹಜವಲ್ಲವೆ ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ. ಹೊತ್ತು ತರಲಿ ನೆನಪಿನ ಬುತ್ತಿಯನು ನೆನಪು ಉತ್ತೇಜನಕಾರಿಯಲ್ಲವೆ! ನಾವಾದರೆ ಎಲ್ಲೆಲ್ಲೋ ತಿರುಗಿ ಬರುವೆವು ಅವಳಿನ್ನೆಲ್ಲಿಗೆ ಹೋಗಿ ಬರಬೇಕು...

ಏನಾಗುವೆ?

ಇಷ್ಟ ದೇವತೆಯೆಂದು ಅಷ್ಟ ಸ್ತೋತ್ರವ ಹಾಡಿ ಧನ-ಕನಕ ಅರ್ಪಿಸಿ ಪೂಜಿಸಿದವರೆ... ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳ ಹಾಜರಿ ಪ್ರಮಾಣಿಸಿದವರೇ... 'ತಾಯಿಗಿಂತ ದೇವರಿಲ್ಲ... ಜನನಿ ತಾನೆ ಮೊದಲ ಗುರುವು' ಕಂಠಪಾಠ ಒಪ್ಪಿಸಿ ಉದ್ದಂಡ ನಮಸ್ಕರಿಸಿ...

ನದಿ

"ಎಲ್ಲಿಂದ ಬರುತಿಯೆ? ನೀರನ್ನು ತರುತಿಯೆ? ಒಳ್ಳೇದಾಗಿರುತೀಯೆ, ನೀನು? ಎಲ್ಲಿಗೆ ಹೋಗುವೆ? ನೀರನ್ನು ಸಾಗುವೆ? ಕಡೆಗೆ ಏನಾಗುವ, ನೀನು?" "ಬೆಟ್ಟದಾ ಹೊಡೆಯಲ್ಲಿ ಹುಟ್ಟಿದ ಹನಿಯಾಗಿ; ತೊಟ್ಟಾದೆ ತಟುಕಾದೆ, ನಾನು. ಬೆಟ್ಟಾದೆ, ಬೆರಳಾದೆ, ತೋಳಾದ, ತೊಡೆಯಾದೆ, ಪುಟ್ಟ...

ಕನಸು ವಾಸ್ತವ

ಕಡೆದು ನಿಲ್ಲಿಸಲಿಲ್ಲ ನಾನು ಗಾಳಿ ಗೋಪುರದ ಗೋಡೆ, ಕಂಬಗಳ ನೆಲ ಮುಗಿಲ ಗಾಳಿಯಲ್ಲಿ ಕಟ್ಟಲಿಲ್ಲ ನಾನು ತಾಜಮಹಲುಗಳ.. ಕನಸಿನ ಬುತ್ತಿ ಬಿಚ್ಚಲಿಲ್ಲ. ಸಾಮ್ರಾಜ್ಯಗಳ ನಾನು ಉರುಳಿಸಲಿಲ್ಲ. ಮತ್ತೆ ಎತ್ತರಕೆ ನಿಲ್ಲಿಸಲಿಲ್ಲ. ಮಹಲುಗಳ ಮಜಲುಗಳ ರಾಜರುಗಳ...