ಉಕ್ಕಿ ಹೊರ ಬರಲು
ಯತ್ನಿಸುವ ಕಣ್ಣೀರಿಗೆ
ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ,
ನಿಟ್ಟುಸಿರುಗಳ ನುಂಗಿ,
ಹಸಿರಿನುಸಿರಿಗೆ ಹಂಬಲಿಸಿ,
ಹಳದಿ ಕಾಯಿಲೆ ಓಡಿಸಿದ
ಜೀವ ಸೂತ್ರ ಸ್ವತಂತ್ರ.
ಮುಚ್ಚಿರುವ ಮುಸುಕಿನ
ಅಡಿಯಲಿ ಹಿಡಿದಿಟ್ಟ
ಬಿಗಿಯುಸಿರು ಸ್ವತಂತ್ರ
ಕೋಗಿಲೆಯ ಧ್ವನಿಗೆ,
ಹೃದಯದ ಹಾಡಿಗೆ,
ಗಾಳಿಗೆ ವಾಲಾಡಿದ
ಎಲೆಗಳ ಸಂಗೀತಕ್ಕೆ
ತಲೆದೂಗಿದ ಮನಸ್ಸು,
ಸ್ವಾತಂತ್ರ್ಯದ ವಿಜಯಮಾಲೆ
ಕೊರಳಲ್ಲಿ ಧರಿಸಿತ್ತು.
ಸೂರ್ಯನ ಪ್ರಖರತೆ
ಚ೦ದ್ರನ ಶಾಂತತೆ
ಎಂದಿಗೂ ಈಗ
ಎದುರಾಳಿಯಾಗರು.
ಚುಕ್ಕೆ, ಸೂರ್ಯಚಂದ್ರಮರು
ಕತ್ತಲೆಯ ರಾತ್ರಿಯಲಿ
ನಡೆಯುವ ಹಿಂಸೆಯನು
ಎಂದಿಗೂ ಸಹಿಸರು.
*****
Related Post
ಸಣ್ಣ ಕತೆ
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಕತೆಗಾಗಿ ಜತೆ
ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…
-
ಒಂಟಿ ತೆಪ್ಪ
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…