ಮಹಾಕವಿ ಕುಮಾರವ್ಯಾಸನಿಗೆ

ಶ್ರೀಮದಮಲ ವಚಃಪರಿಧಿಯಾ ದೀ ಮಹಾಕೃತಿಯಿಂದೊಲವು ಮಿಗೆ ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ| ಕೌಮುದಿಯೊಲೀ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧|| ಮೊದಲ ಮಗನಾ ಶುಕನು ಭಾಗವ...

ಸಫಲ

'ನಮ್ಮ ಸೊಡರನುರಿಸುವಿರೇಂ ಮಿಣುಕಲಿಂತು ಬರಿಯೆ? ಪರರ ಬೆಳಕನಳುಪುವಿರೇಂ? ಸುಡದೆ ನಿಮ್ಮ ಗರಿಯೆ?'- ಜಂಕಿಸಿತಿಂತುಡು ಸಂಕುಳ ಹೊಂಚುವ ಮಿಂಚುಹುಳಂಗಳ ಬೇಸಗೆ ಕೊನೆವರಿಯೆ. ೭ 'ಕುರುಡಾದಿರೆ ಬೆಳಕಿನಿಂದ? ನಿಮ್ಮ ಬೆಳಕಿದಲ್ಲ; ನಿಮಗೆತ್ತಣಿನತ್ತಣಿಂದ ನಮಗಿದು ಬಂತಲ್ಲ? ಹಿರಿದು ಕಿರಿದು...

ಹೆಂಗಸು

'ನಾರಿ ನಾನೆಂದಕಟ ರೂಪಗೋಸಾಯಿ೧ ನನಗೀಯನೆನುವನೇಂ ದರ್ಶನದ ಭಾಗ್ಯಂ? ಹೆಮ್ಮೊಗನ ನೋಡದೇನವನ ವೈರಾಗ್ಯಂ? ಏತರೀ ವ್ರತವೊ!' - ಎಂದಳು ಮಿರಾಬಾಯಿ ೪ 'ಇವನಾದೊಡಂ ಗಂಡೆ? ಗೋಕುಲದೊಳೆಲ್ಲ ಹೆಂಗಸಲ್ಲದೆ ಗಂಡಸಿಲ್ಲಿ ಬರಸಲ್ಲ! ಅರಿಯಲಿವನಿಲ್ಲಿಹುದನಟ್ಟದಿರಳಲ್ಲ ಬೃಂದಾವನದ ದೇವಿ! ಇವನದೇಂ...

ಬೇಕು-ಬೇಡ

ಬೇಕೆಂಬುವ ಬಡತನವ ನ್ನೇಕೆ ಕರೆದುಕೊಳುವೆ? ಬೇಡದೆ ಬಹ ಬಲುಧನವ ನ್ನೇಕಕಟಾ ಕಳೆವೆ? ಹಗಲ ಕುಮುದದಿಂದುಭಿಕ್ಷೆ, ಶಿಶಿರಾಂತದ ಸುಮೋಪೇಕ್ಷೆ ನೆರೆಯಲೆಂದುಮಳವೆ? ೭ ಬೇಕೆನೆ ನೀನೊಮ್ಮೆ ಬಳಿಕ ಬೇಕೆನುವೆಲ್ಲವಂ- ಬೇಡುವುದಿನ್ನೇಕೆ ತುಳುಕ ಲಂಬುಧಿ ಸಲಿಲವಂ? ಬೇಡುವಂತೆ ಬಡವನಾದೆ-...

ಕನ್ನಡಿಗರ ತಾಯಿ

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ! ನಮ್ಮ ತಪ್ಪನೆನಿತೊ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ; ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲನೆಮ್ಮೆವು- ತನು ಕನ್ನಡ, ಮನ...

ಪಾಲುಮಾರಿಕೆ

ಯಾವಳೊಬ್ಬ ಹಾಲುಗಿತ್ತಿ ಹಾಲ ಕೊಡವ ತಲೆಯೊಳೆತ್ತಿ ಹೊಳೆಯಾಚೆಗೆ ಕಡೆಯಲೊತ್ತಿ ಕಡಕೆ ಬಂದಳು ೪ ತಡವಿನಿಸಿರೆ ಕಡವ ತೆರೆಯೆ, ಕೊಡವನಿಳಿಸಿ ನೀರನೆರೆಯೆ, ಹಾಲಿನರಕೆ ನೆರೆದು ನೊರೆಯೆ ತುಂಬಿತಾ ಕೊಡಂ ೮ ಅವಸರದಿಂ ದೋಣಿ ಹತ್ತಿ ಕುಳಿತಳಾಕೆ...

ಪಂಢರಪುರದಲ್ಲಿ

ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ ಯಾವ ಭಾಗ್ಯದಿಂದಿಲ್ಲಿಗೆ ಬಂದೆ? ನಿನ್ನ ಕಂಡು ಧನ್ಯನಾದೆ ತಂದೆ! ಇನ್ನಾದಡಮೆನಿಸೆನ್ನೆದೆಯಿಂದೆ- ಜಯ ಜಯ ಪಂಢರಿನಾಥ ವಿಠೋಬಾ! ||೧|| ತುಕಾರಾಮ ನಾಮದೇವರಿಲ್ಲಿ ಕುಣಿದ ರಂಗಸಿಲೆಯಿಂ ೧ಸೆಲೆವಲ್ಲಿ ನಿನ್ನ ನಾಮಮೆದೆಯೊತ್ತುವೆನಲ್ಲಿ- ಜಯ ಜಯ...

ಕೊಳುಗುಳದ ಮನವಿ

[Theodor Korner ಎ೦ಬ ಜರ್ಮನ್‌ ಕವಿಯ `Gebet wahrend der Schlacht’ (Prayer during the battle) ಎಂಬ ಕವಿತೆಯಿಂದ ಪ್ರೇರಿತವಾದುದು] ಕರೆವೆ ನಾ ನಿನ್ನನೊಡೆಯಾ! ನಿನ್ನ ಹೆಸರಂ ಕೊಂಡು ನಿಂದೆನಿದೊ ಸಿಡಿಗುಂಡು ನೂರ್ಮೆ...

ಕ್ವ?

ಮರಣತ ಪರಮೆನ್ನ ಜಿಜ್ಞಾಸೆಯೊಡೆಯಾ- ಹುಟ್ಟ ಹೊರವಟ್ಟು ಬಾಳ್ವೆಯ ಮುಟ್ಟೆ ಕಡೆಯಾ, ಮುಂತಡೆವರೇ ಕಡದಿ ಕತ್ತಲೆಯ ತಡಿಯಾ? ೩ ಆವಂಬಿಗಂ ಬರುವ ಪರಿಸೆಯಂ ಕಾಯ್ವಂ? ಎಂತೆಲ್ಲಿಗೆನ್ನೆಗಂ ತೊರೆಯಾಚೆ ಹಾಯ್ವಂ? ಅಲ್ಲಿಂದ ಮುಂದವರನಾರೆಲ್ಲಿಗೊಯ್ವಂ? ೬ ಕಡವಿಹವೆ ಮುಂದಿದೇನೊಂದೆ...

ಬಾಲೆ ನಿನ್ನಯ ತಮ್ಮನೆಲ್ಲಿ?

 I `ಬಾಲೆ ನಿನ್ನಯ ತಮ್ಮನೆಲ್ಲಿ?' ಎಂದವಳನಾಂ ಕೇಳುವಲ್ಲಿ, ತಲೆಯನಾನಿಸಿ ಹೆಗಲಿನಲ್ಲಿ `ಮನೆಯೊಳಲ್ಲವೆ?' ಎಂದಳು. ೪ ಆದೊಡಿಂದವನೇಕೆ, ಬಾಲೆ, ನಿನ್ನೊಡನೆ ಪೋಗಿಲ್ಲ ಸಾಲೆ ಗೆನಲು ನುಡಿದಳು - ಹನಿವ ಹಾಲೆ? ಮಲರೆಲರೆ? ಮೆಲ್ಲುಲಿಗಳೆ? ೮ 'ತಿಂಗಳೊಂದಕೆ...