ಹನಿಗವನ ಕೃಷ್ಣಾರ್ಪಣ ಗೋವಿಂದ ಪೈ October 7, 2024March 30, 2024 ನಿನ್ನೊಳೆನ್ನಯ ಭಕ್ತಿ, ಅವಳೊಳನುರಕ್ತಿ- ತೋರದನುರಕ್ತಿ, ಭಕ್ತಿಯನೆಂತು ಕಾಂಬೆ? ನನ್ನ ಕೃಷ್ಣೆಗೊ, ನನ್ನ ಕೃಷ್ಣನಿಗೊ, ವ್ಯಕ್ತಿ ದ್ವಯಗಳದ್ವಯಕೊ, ಕೃಷ್ಣಾರ್ಪಣಮಿದೆಂಬೆ. ***** Read More
ಅನುವಾದ ಉಮರ್ ಖಯ್ಯಾಮ್ ಗೋವಿಂದ ಪೈ September 30, 2024September 30, 2024 This lyre of an elder language hath me stirred To tempt thy thrill, O equivocal bird! Whatever note in this is true, 'tis thine, And,... Read More
ಕವಿತೆ ಎಲ್ಲಿ? ಗೋವಿಂದ ಪೈ September 23, 2024March 30, 2024 ತನ್ನೊಲಶೇಷ ಜೀವಿಗಳನೋವುತ ನೋಯಿಸದಿರ್ಪರಾವಗಂ, ಧರ್ಮಸಮಸ್ತದೊಳ್ ಸದೃಶನೀಶ್ವರನೆಂದರಿದಿರ್ಪರಾವಗಂ, ತಾಯಿಳೆಗಾಗಿ ಬಾಳ್ತಳೆದು ಬಾಳ್ಗಳೆದುಂ ಬದುಕಿರ್ಪರಾವಗಂ- ಬೆಳ್ಳಿಯ ಬೆಟ್ಟಮಿಂಗಡಲವೆಲ್ಲಿವರೆಲ್ಲಿಹರಲ್ಲಿಯಲ್ಲಡೆ? ೪ ***** Read More
ಕವಿತೆ ಉಂಟು ಗೋವಿಂದ ಪೈ September 16, 2024March 30, 2024 'ಎಲ್ಲಿಹವೊ, ಕಾಲ, ನೀನೆಲ್ಲಿಗವನವಿತೆ? ಇಂತಿಳೆಯ ಬದುಕಿನೇತರ ಸರ್ವಗವತೆ? ನಿನಗೆಟಕದೆಮಗುಳಿವುದೇನಾನುಮುಂಟೆ?'- 'ಉಂಟು, ಕವಿಗೊಳಕವಿಯಿನೊಗೆತಂದ ಕವಿತೆ' ೪ ***** Read More
ಕವಿತೆ ಕವಿ ಮತ್ತು ವಿಮರ್ಶಕ ಗೋವಿಂದ ಪೈ September 9, 2024March 30, 2024 ಬಿತ್ತರಿಸದೆ ತಾಂ ಕಾವ್ಯವ ಗೊತ್ತರಿಯಲಳವೆ ಕವಿಯೆದೆಯಂ? ಕವಿಯೆದೆಯಂ| ಗೆತ್ತಿರದ ವಿಮರ್ಶಕನೇಂ? ಹೆತ್ತರಿಯದ ಬಂಜೆ ಸೂಲಗಿತ್ತಿಯೆ ಜಗದಿ? ||೧|| ಬೆಳಗುವೂಲರ್ಥದಿಂದ ನುಡಿ, ಕಾಣಿಕೆಯಿಂ ಬೆಳೆವಂತೆ ಲೋಚನಂ, ತಳುವುವೊಲಿಂಚರಂ ಸ್ಫುರಣದಿಂ, ನದಿ ತಕ್ಕನಿಹಂತೆ ದಂಡೆಯಿಂ; ಬೆಳಗಿ ಮನಕ್ಕೆ,... Read More
ಕವಿತೆ ಜಯ ಜಯಾ! ಗೋವಿಂದ ಪೈ September 2, 2024March 30, 2024 ರಾಗ ನವರಸಕನ್ನಡ ರೂಪಕತಾಳ ('ನಿನುವಿನಾ ನಾಮದೇಂದು' ಎಂಬ ತ್ಯಾಗರಾಜ ಕೃತಿಯಂತೆ) ಜಯಜಯಾ ನಮ್ಮೊಡೆಯಾ! ಜಗದೊಡೆಯಾ ಜಯಜಯಾ! ||ಪಲ್ಲ|| ಜಯಜಯ ಭಾರತದಜೊಡೆಯಾ! ಬಡವರೊಡೆಯ ಜಯಜಯಾ! ||ಅನು|| ಏನು ಚೆಲುವೊ ದೇವ ನಿನ್ನೀ ಭಾರತಮೂರ್ತಿ! ತೆರೆಯ ಗೆಜ್ಜೆ,... Read More
ಕವಿತೆ ಬರ್ದಿಲ ಗೋವಿಂದ ಪೈ August 26, 2024March 30, 2024 ಅಂದಿನ ಹೂಗಳಿಲ್ಲ, ನಲಿವಕ್ಕಿಗಳಿಲ್ಲ, ಕೊಳಂಗಳಿಲ್ಲ, ತಂ ೧ಗಾನಗಳಿಲ್ಲ- ಧಾರಿಣಿ ತನತ್ತುರೆ ಗೆತ್ತಣಮಿಲ್ಲವಿಂದಿಗೆ! ಕಬ್ಬದೊಳಾದೊಡಂದಿಗೊಗೆತಂದೊಲೆ ನಿಂದಿಹವಿಂದಿಗೆಂದಿಗುಂ - ಬರ್ದಿನ ವಾರ್ಧಿಯಿಂದೊಸರ್ದಮರ್ದೆನೆ ಕಬ್ಬಮದೊಂದೆ ಬರ್ದಿಲಂ. ೪ ಯಾವೆನಿತೆಲ್ಲ ರಾಜ್ಯವಳಿವೋದುದೊ? ಮಂದಿಯೆ ಕುಂದಿ ಮಾದುದೊ? ವೀರರ ಕೀರ್ತಿ ನೆತ್ತರೊಳಗಾಳ್ದುದೊ?... Read More
ಕವಿತೆ ಜೀವನದೀ ಮಧುಮಾಸಂ ಗೋವಿಂದ ಪೈ August 19, 2024March 30, 2024 ಜೀವನದೀ ಮಧುಮಾಸಂ ಬತ್ತುತ ಬಂತು, ಮನಸಿನ ಮಧುರವಿಕಾಸಂ ನನೆಯೊಳೆ ಸಂತು; ಮುಸುರಿದ ಮಕರಂದಪಾನ ಮೊದವದೆದೆಯ ಭ್ರಮರಗಾನ ಮೆಚ್ಚರಲೆಂತು? ೭ ಮನೆಗೆಯ್ದಕ್ಕರೆಯ ಪಿಕಂ ಪಾರಿದುದೆಲ್ಲಿ? ಗೂಡುಗೊಂಡ ಹಿಂಡು ಶುಕಂ ಕಾಣಿಸವಿಲ್ಲಿ! ಅಳಲ ಕಣಜವಿನ್ನು ಸಾಗೆ, ಹಗಲುದ್ದಕೆ... Read More
ಕವಿತೆ ಬಲ್ಲುದೆ ಲತೆ ಫಲಂ ತನ್ನ ಗೋವಿಂದ ಪೈ August 12, 2024March 30, 2024 ಬಲ್ಲುದೆ ಲತೆ ಫಲಂ ತನ್ನ ಸಿಹಿಯೊ ಕಹಿಯೊ ಎಂಬುದನ್ನ? ಒಗೆದಂತೊದಗಿಸಲು ಬನ್ನ ಮೇನೊ? ಬಳ್ಳಿಯಾ ೪ ಹಲವೊ ಕೆಲವೊ ಸವಿದು ಹಣ್ಣ, ಸಿಹಿಯಾದಡೆ ಕೊಳುವುದುಣ್ಣ ಕಹಿಯಾದಡೆ ಕಳೆವುದಣ್ಣ ಲತೆಯ ತಳ್ಳಿಯಾ ೮ ಪ್ರಕೃತಿವಶಮೆ ಫಲಿಸ... Read More
ಕವಿತೆ ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ? ಗೋವಿಂದ ಪೈ August 5, 2024March 30, 2024 ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?- ಬೇಡಿದುದ ಕೊಡೆ, ಬೇಡದುದನಾಯ್ದು ಕೊಡುವೆ! ಆರದುದನಾಪೆನೆಂದೇಕೆ ತಡಬಡುವೆ? ಕೇಳುವೊಡನೀವೆನೆಂದೇಕ ಬೇಡಿಸುವೆ? ೪ ಆದೊಡಂ ಕೇಳೆನಗೆ ನಿನ್ನಿಂದು ಬೇಡ- ಅವಳನೆನ್ನಿಂದೊಯಿದ ಇಂದೆನಗೆ ಬೇಕೆ? ಇನ್ನವಳ ಕಾಣಿಸದ ನಾಳೆಯಕಟೇಕೆ? ಅವಳಿದ್ದ ನಿನ್ನೆ ಸಾಕೆನಗದಂ... Read More