ಬಿತ್ತರಿಸದೆ ತಾಂ ಕಾವ್ಯವ
ಗೊತ್ತರಿಯಲಳವೆ ಕವಿಯೆದೆಯಂ? ಕವಿಯೆದೆಯಂ|
ಗೆತ್ತಿರದ ವಿಮರ್ಶಕನೇಂ?
ಹೆತ್ತರಿಯದ ಬಂಜೆ ಸೂಲಗಿತ್ತಿಯೆ ಜಗದಿ? ||೧||
ಬೆಳಗುವೂಲರ್ಥದಿಂದ ನುಡಿ, ಕಾಣಿಕೆಯಿಂ ಬೆಳೆವಂತೆ ಲೋಚನಂ,
ತಳುವುವೊಲಿಂಚರಂ ಸ್ಫುರಣದಿಂ, ನದಿ ತಕ್ಕನಿಹಂತೆ ದಂಡೆಯಿಂ;
ಬೆಳಗಿ ಮನಕ್ಕೆ, ಕಂಗೆ ಬೆಳೆವುತ್ತ, ನೆನೆಂಬೊಲದಲ್ಲಿ ತಳ್ವಿ, ತ
ಕ್ಕಳಿಯದೆ ನಿಲ್ಲು ಕಬ್ಬಿಗನ ಮಾತು ವಿಮರ್ಶಕನಿತ್ತ ದೇಸಿಯಿಂ ||೨||
*****