ಅಂದಿನ ಹೂಗಳಿಲ್ಲ, ನಲಿವಕ್ಕಿಗಳಿಲ್ಲ, ಕೊಳಂಗಳಿಲ್ಲ, ತಂ
೧ಗಾನಗಳಿಲ್ಲ- ಧಾರಿಣಿ ತನತ್ತುರೆ ಗೆತ್ತಣಮಿಲ್ಲವಿಂದಿಗೆ!
ಕಬ್ಬದೊಳಾದೊಡಂದಿಗೊಗೆತಂದೊಲೆ ನಿಂದಿಹವಿಂದಿಗೆಂದಿಗುಂ –
ಬರ್ದಿನ ವಾರ್ಧಿಯಿಂದೊಸರ್ದಮರ್ದೆನೆ ಕಬ್ಬಮದೊಂದೆ ಬರ್ದಿಲಂ. ೪
ಯಾವೆನಿತೆಲ್ಲ ರಾಜ್ಯವಳಿವೋದುದೊ? ಮಂದಿಯೆ ಕುಂದಿ ಮಾದುದೊ?
ವೀರರ ಕೀರ್ತಿ ನೆತ್ತರೊಳಗಾಳ್ದುದೊ? ಮೂವಿಡಿ ಬೂದಿ ತೂಳ್ದುದೊ?
ತಾನಿದು ತನ್ನದೆಂದವರು ಸಂದರೆ? ಎಂಬವರಿನ್ನು ಕಾಂಬರೆ?-
ಬಂದೊಲೆ ಪೋಪರೆಲ್ಲ; ಬಲುಗಬ್ಬಿಗನೊಬ್ಬನೆ ಬಾಳ್ವ ಬರ್ದಿಲಂ. ೮
ಉಷೆಗೆರವಿತ್ತ ಮುಂಬೆಳಕು ಸಂಜೆಗೆ ನೇಸರನಯ್ದುವಂತೆ ಶ್ರೀ
ರಘುವರನಯ್ದೆ, ಕೊಂಚೆಯೆಣೆಯಾಣ್ಗೆ ಹಲುಂಬಿದನುಷ್ಟುಭಶ್ರುವಿಂ
ದಿಳೆಗಿಳಿತಂದ ಪಾಲ್ಗಡಲೊಳಾತನ ಬರ್ದಿಲ ಕಾದ ಬರ್ದಿಲಂ
ಕವಿಯೆನಲಾರ್ತರುಂಟೆ ಕವಿಯಲ್ಲದೆ ಕೊಳ್ಕೊಡಲಿಂತು ಬರ್ದಿಲಂ? ೧೨
ಕಬ್ಬದೊಳಿಂತು ಕಬ್ಬಿಗನ ಬರ್ದಿಲನೀಕ್ಷಿಸಿ, ವಿಶ್ವಕಾವ್ಯಮಂ
ದಂದಿಗೆ ಸೋಸುವೀ ನೆವದೊಳಾದನೆ ಕಾಲನನಿತ್ತೆ ಬರ್ದಿಲಂ?
*****
೧ ಕಾನ = ನೋಟ