ಓ! ತಾಯಿ, ಮಾತಾಯಿ ಮೇಲೆತ್ತು ಮುಖವನ್ನು ದೈನ್ಯ ದೃಷ್ಟಿಯಕಂಗಳನು ಮಿಟುಕಿಸೌ! ಕವಿಯ ಕಣ್ತೆರೆದು ನೊಡಿಲ್ಲಿ; ಆವ ಶತಮಾನಗಳ ಲಾಭ ಹಾನಿಯ ಲೆಕ್ಕವನು ಗುಣಿಸಿ ತಣಿಯುತಿಹೆ! ಶಿರಬಾಗಿದಾರಿಗೌ? ಅಚಲಳಾದುದಕೇನು- ಕಾರಣಂ? ಮೊಗದೊಳೇಕೀ ಚಿಂತೆ? ಸಂಸಾರ ನಿಸ್ಸಾರ ಮೆಂಬೆಯಾ ಮುತ್ತಜ್ಜಿ? ಅಲ್ಲದೊಡೆ- ಮೊಮ್ಮಗನ ಮದುವೆಯಾಗಿ...

೧ ನೋಡಬೇಡ ನೋಡಬೇಡ ನೋಡಬೇಡವೇ ಇಂತು ನನ್ನನು! ತೋಡಬೇಡ ತೋಡಬೇಡ ತೋಡಬೇಡವೇ, ಕಣ್ಣಿನಲ್ಲೆ, ತೋಡಬೇಡ ನನ್ನ ಎದೆಯನು! ಸಾವಿರಾರು ಅರ್ಥಗಳನು ಕಟ್ಟಿ ನಿನ್ನ ನೋಟಕಾನು ಮಿಲ ಮಿಲ ಮಿಲ ನರಳುವಂತೆ ಆಡಬೇಡವೇ ಆಡಬೇಡ ಆಡಬೇಡ ಆಡಬೇಡವೇ ಕಣ್ಣಿನಲ್ಲೆ, ಆಡಬೇಡ ನ...

ನನ್ನ ಕನ್ನಡವೆಂತು ಬಾಳಿ ಬದುಕೀತು! ಉನ್ನತದ ಶಿಖರವನ್ನೇರಿ ಮೆರೆದೀತು! ನುಡಿಯೊಂದೆ ನಾಡೊಂದೆ ಜನವೆಲ್ಲ ಒಂದೆ ನಡೆಯೊ೦ದೆ ಗುಡಿಯೊಂದೆ ಮನದಾಳ ಒಂದೆ ಗುರಿಯೊಂದೆ ಸಿರಿಯೊಂದೆ ಸೌಭಾಗ್ಯ ಒಂದೆ ಅರಿವೊಂದೆ ಇರುವೊಂದೆ ಜೀವಿತವದೊಂದೆ ನೆಲವೊಂದೆ ಕುಲವೊಂದೆ...

ಬುವಿಗಾಯಿತು ಬೆಳುದಿಂಗಳ ಸೇತುವೆ ಇಗೊ ಬನ್ನಿ ; ನಂದನವನ ಕುಸುಮಂಗಳ, ಕೆಳದಿಯರೇ, ತನ್ನಿ. ದೈನಂದಿನದಿಳೆಯಾರ‍್ತಿಯ ಪೂಜೆಗೆ ಆಸತ್ತು ಬೇಸತ್ತಿಹ ಮಾದೇವನ ನಲಿಸುವ ಈ ಹೊತ್ತು. ಬಾನ್‌ಬಟ್ಟೆಯೊಳಡಿಗೆಜ್ಜೆಯ ನೇವುರ ಝಣರೆನಲಿ, ಹಾಸಿಗೆಯೊಳು ಹಸುಮಕ್ಕಳು ...

೧ ಉಮ್ಮಳಿಸಿದೆ ಮಗು! ಕಾಯುವ ತಾಯಿಯ ಕೈಯ ನೀಡುವಿರಾ ನನ್ನಯ ರಯ್ಯ ಗೆಳೆಯರಿರಾ! ೨ ಇಮ್ಮಡಿ ಮುಮ್ಮಡಿ ನಾಲ್ಮಡಿ ನೂರ್ಮಡಿ ತಳಮಳಗೊಳುತಿಹುದು ಈ ಮಗು ಕಳವಳಗೊಳುತಿಹುದು! ೩ ನಿಮ್ಮಯ ನೆಮ್ಮದಿ-ಮಡಿಲಲಿ ಮಡಗಿಸಿ ಮಲಗಿಸಿಕೊಳ್ಳುವುದು ಗೆಳೆಯರೆ ತೂಲಗಿಸಿ ತ...

ಬೇಸಿಗೆ ಬಂದ ಹಾಗೆಲ್ಲ ಜನರು ತಂಗಾಳಿಯ ಸಲುವಾಗಿ ಬಾಯಿ ತೆಗೆದುಕೊಂಡು ಕೂಡುವರು, ಬಿಸಿಲು ಬಲಿತಂತೆ ಮನೆಯೊಳಗಿಂದ ಹೊರಗೆ ಬಂದು ಬಂಕದಲ್ಲಿ ಕುಳಿತುಕೊಳ್ಳುವರು. ಹೊರಗೆ ಕುಳಿತವರು ಸಮೀಪದ ಗಿಡಕ್ಕೆ ಹೋಗುವರು. ಶ್ರೀಮಂತರು ಮಹಾಬಳೇಶ್ವರ, ಉಟಕಮಾಂಡ ಸಿಮ...

ಏನುಬೇಡಲಿ ಬಂದು ಭಾರತಿಯೆ ನಿನ್ನ | ಮಾನವಂತಿಯೆ ಜನನಿ ಸಲಹು ನೀನೆನ್ನ ||ಪಲ್ಲ|| ಬಂಗಾರ ಬೇಡುವೆನೆ ಬಳಿದೆಲ್ಲ ಪೋಗಿಹುದು | ಶೃಂಗಾರ ಬೇಡುವೆನೆ ಶಿವನ ಮನೆಯು || ಮಂಗನಂತಿಹ ಮನವು ಇಂಗಿತವನರಿಯದಲೆ | ಅಂಗಹೀನನ ತೆರದಿ ತಿರುಗುವದಕಂಡು ||೧|| ಅನ್ನವ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ...

೧ ನಶ್ವರವು ಜಗದಲ್ಲಿ ನರನ ಬಾಳದರಿಂದ ಇರುವಲ್ಪದಿನಗಳಲಿ ವ್ಯಥೆ-ಚೆ೦ತೆಯೇಕೆ? ಮತ್ಯುವೊ೦ದತಿಸತ್ಯವಾಗಿರಲು ನಾವಿಂದು ಸುಖ ಹೀರಬೇಕು; ನಾಳೆಯನೆಣಿಸಬೇಕೇ? ೨ ಸತ್ತ ಮೇಲೇನೆಂದು ತಿಳಿದವರು ಯಾರಿಲ್ಲ. ಎಷ್ಟೊ ಜನ ಹೋಗಿಹರು, ಬಂದವರ ಕಾಣೆ. ಸೊಗವಡುವುದೇ ನ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...