ಓ! ತಾಯಿ, ಮಾತಾಯಿ ಮೇಲೆತ್ತು ಮುಖವನ್ನು ದೈನ್ಯ ದೃಷ್ಟಿಯಕಂಗಳನು ಮಿಟುಕಿಸೌ! ಕವಿಯ ಕಣ್ತೆರೆದು ನೊಡಿಲ್ಲಿ; ಆವ ಶತಮಾನಗಳ ಲಾಭ ಹಾನಿಯ ಲೆಕ್ಕವನು ಗುಣಿಸಿ ತಣಿಯುತಿಹೆ! ಶಿರಬಾಗಿದಾರಿಗೌ? ಅಚಲಳಾದುದಕೇನು- ಕಾರಣಂ? ಮೊಗದೊಳೇಕೀ ಚಿಂತೆ? ಸಂಸಾರ ನಿಸ್ಸಾರ ಮೆಂಬೆಯಾ ಮುತ್ತಜ್ಜಿ? ಅಲ್ಲದೊಡೆ- ಮೊಮ್ಮಗನ ಮದುವೆಯಾಗಿ...

ಒಬ್ಬಾನೊಬ್ಬನು ಚಿತ್ರರಥನೆಂಬ ರಾಜನು ಇದ್ದನು. ಆತನು ಒಂದು ಸರೋವರವನ್ನು ಕಟ್ಟಿಸಿ ಅಲ್ಲಿ ತಾವರೆಗಳನ್ನು ಬೆಳೆಸಿ ಅದಕ್ಕೆ ಪದ್ಮವನ ಎಂದು ಹೆಸರಿಟ್ಟನು. ಅಲ್ಲಿಗೆ ಯಾರಾದರೂ ಹೋಗಿ ಅದನ್ನು ಕೆಡಿಸಿಯಾರು ಎಂದು ಕಾವಲಿಟ್ಟನು. ಅಲ್ಲಿ ಚಿನ್ನದ ಹಂಸಗಳು ...

ಸುಗ್ಗಿಯೆಂದಿಗೆ ಸುಗ್ಗಿಯೆಂದಿಗೆ ಮಾಗಿ ಕವಿದೀ ಚಿತ್ತಕೆ? ಎಂದು ಕೊನೆ, ಹಾ! ಎಂದಿಗೋ ಕೊನೆ ಬಗೆಯ ದುಗುಡದ ಮೊತ್ತಕೆ? ಸೃಷ್ಟಿಯೆಲ್ಲಕು ತೆರೆಯ ಹಾಕಿದ ತೆರದೊಳಿಬ್ಬನಿ ಕವಿದಿದೆ ಅದನು ಕರಗಿಸಿ ಅತ್ತ ಸರಿಸುವ ರವಿಗೆ ಮನ ಹಾತೊರೆದಿದೆ! ಇದ್ದ ಒಂದೆರಡಾ...

ನೋಯಿಸದಿರು ಮನವ- ಮನವೇ! ಕೋಯಿಸದಿರು ಮನವ ನೊಂದರು ಬೆಂದರು ಯಾರೇನೆ೦ದರು ನೋಯಿಸದಿರು ಮನವ ಮನಮಲ್ಲಿಗೆ ಹೂವು; ಮನವೇ! ಮನ ಮಲ್ಲಿಗೆ ಹೂವು ದೂರದಿ ಕಂಡು ಪರಿಮಳ ಉಂಡು ತಣಿದು ತೃಪ್ತಿ ಹೊಂದು ಮನವೇ ತಣಿದು ತೃಪ್ತಿ ಹೊಂದು ತಾಳಿಕೊಂಡು ಬಾಳು; ಮನವೇ! ತ...

(ಅಳ್ವಾರರ ಬಗೆಯನ್ನು ಭಗವಂತನು ತುಂಬಿ ನಿಂತುದನ್ನು ಕುರಿತ ಹಾಡು) (ಸಿರಿಬಾಯಿ ನುಡಿಯ ಒಂದನೇ ನೂರಿನ ಹತ್ತನೇ ಹಾಡು) ೧ ಅರಿಶಿರಗಳನು ತರಿವ ಮಾಶಂಖ ಚಕ್ರಗಳ ಧರಿಸಿದವನು ಸಿರಿಯ ಚೆಲುನೀಳಡಿಯನೇಳು ಲೋಕಗಳಾದರಿಸುವಂತೆ ತರಳನಿಂಥವನಿಲ್ಲವೆನುವ ವಾಮನನಾಗ...

೧ ‘ಜಯ ಜಗದಂಬೆ ಭಯವಿಲ್ಲೆಂಬೆ ಹಂಬಲ ತುಂಬೆ ನಂಬಿದೆನಂಬೆ ಅನ್ಯರ ನಂಬೆ’ ಎಂದೆನ್ನುವ ಹಸುಳಾ ಬಾಲಾ! ಇಂದೇ ಕುಡಿ ತಾಯಿಯ ಹಾಲ! ೨ ತಾಯಿಯಾಗಿ ತಾ ಕಾಯಲಿ! ಮಗು ತನ್ನಾ! ಅಕ್ಕನಾಗಿ ಬಲು ಅಕ್ಕರಿಸಲಿ! ಚಿನ್ನಾ! ತಂಗಿಯಾಗಿ ನೆರೆ ತಂಗಿಸಲೈ ...

ಸುಳ್ಳು ಹೇಳುವದೊಂದು ಕಲೆ ಬಹಳ ಪುರಾತನವಾದುದು. ಪುರಾತನ ವಸ್ತುಗಳಲ್ಲಿ ಅಭಿಮಾನಪಡುವ ನಾವು ಈ ಕಲೆಯ ವಿಷಯವಾಗಿಯೂ ಅಭಿಮಾನಪಡಬೇಕು!   * * * * ಈ ಕಲೆಯು ಜಗತ್ತಿನಲ್ಲಿ ಅದೃಶ್ಯವಾಗಿಲ್ಲ; ಇದು ನಮ್ಮ ಸುದೈವ. ಇನ್ನೂ ಈ ಕಲೆಯಲ್ಲಿ ಪರಿಣತರಾದವರು ಜಗತ...

ಕಡಲತೀರದಲಿ ಕಪ್ಪೆಯು ಕುಳಿತು ಅಂದಿತು ಮನುಜನು ಮಾಡಿದ ಒಳಿತು ತೋಡಿದ ಬಾವಿಯ ನನಗೆಂದು! ಯಾತಕೊಯೇನೋ ಇಂತಹ ದೊಡ್ಡ ಕಡಲನು ಮಾಡಿದ ದೇವರು ಹೆಡ್ಡ ಇರಲಿ. ಹೋಗುವೆನು ನಾ ಮಿಂದು ಅಷ್ಟರಲ್ಲಿಯೇ ತೆರೆಗಳು ಬಂದು ಹೋದವು ಕಪ್ಪೆಯ ತೊಳಕೊಂಡು *****...

೧ ಮೂಡಣ ದಿಶೆಯಲಿ ಪಡುವಣ ದಿಶೆಯಲಿ ಮೂಡುವ ಅಡಗುವ ರವಿ ಹೊಂಬಣ್ಣವ ಭರದಲಿ, ಹರುಷದಿ ಹೊಗಳುತಲಿರುತಿರೆ ಕವಿಜನರು; ಚಿನ್ನೆಯೆ ನಿನ್ನಯ ಕನ್ನಡಿ ಹೊಳಪಿನ ಕನ್ನೆಯ ಮೇಲಣ ಕೆಂಬಣ್ಣವ ನಾ ಹೊಗಳುತ ನಿಂತಿಹೆ ಓಡುತೆ ಬಾ! ಬಾ! ಹಾರುತೆ ಬಾ! ಬಾ! ೨ ಸರದಲಿಶೋಭ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...