Home / ಕವನ / ಕವಿತೆ / ಜೀವನ ಯಾತ್ರೆಯು

ಜೀವನ ಯಾತ್ರೆಯು

ಜಗವುತಾನಿದು ರಂಗಭೂಮಿಯು ನರನು ಅದರೊಳು ವಿವಿಧ ಪಾತ್ರವ |
ವಹಿಸಿ ತನ್ನಯ ಕಾರ್ಯವೆಸಗುತೆ ಮರಳಿ ಪೋಗುವನು || ೧ ||

ಮೊದಲು ತಾನವ ಶಿಶುವು ರೂಪವಧರಿಸಿ ತನ್ನಯ ಕೇಳಿಯಿಂದಲಿ |
ತಣಿಪತನ್ನಯ ಜನನಿ ಜನಕರಮನವ ತಾನಾಗ || ೨ ||

ವರುಷವಾರೇಳುಗಳು ಗತಿಸಲು ಶಾಲೆಯೋದುವ ಬಾಲನೆನಿಸುತೆ |
ಸರುವಕಾಲದಿ ತುಂಟನೆನಿಪನು ಶಾಲೆಯೊಳು ಮನೆಯೊಳಗೆ || ೩ ||

ಓದುಮುಗಿಯಲು ಜಗದಿ ತನ್ನಯಸಮಾನಪಂಡಿತನಾವನೆನ್ನುತೆ |
ಮೇದು ಮೆರೆವಾಗೂಳಿಯಂದದಿ ಕೊಬ್ಬಿಮೆರೆಯುವನೂ || ೪ ||

ಸಂದಪ್ರಾಯದಿಕಾಲನಿಡೆ ತಾಸುಂದರಾಂಗಿಯ ಸಂಗಬಯುಸುತೆ |
ತಂದು ವೊಬ್ಬಳಮಾಳ್ಪತನ್ನಯ ಮನೆಯ ವೊಡತಕಿಯನೂ || ೫ ||

ಗಂಡ ಹೆಂಡಿರ ಸಂಗಫಲದಿಂ ಸುಂದರಾಂಗನು ಸುತನು ಜನಿಸಲು|
ತಂದೆತನವನು ಪಡೆದು ಜಗದೊಳು ಸಂದುಮೆರೆಯುವನೂ || ೬ ||

ಸಂದಪ್ರಾಯವು ಗತಿಸಲಾಗ ಮುಪ್ಪುತಾ ತಲೆದೋರುತಿರೆ ತಾ |
ಹೊಂದಿ ಸುಖದುಃಖಗಳ ಅನುಭವಹಿರಿಯನೆನಿಸುವನು || ೭ ||

ಮಂದಿ ಮಕ್ಕಳ ನಡುವೆ ತಿರುಗುತೆ ಚಂದವಾಗಿಹ ಬುದ್ಧಿ ಪೇಳ್ವನು |
ಕುಂದುವನು ಮನದೊಳಗೆ ಹಿಂದಿನಪ್ರಾಯನೆಯುತಲಿ || ೮ ||

ಮುಪ್ಪುಬರಲವ ಬೆದರಿನಂದದಿ ರಕ್ತಮಾಂಸಾದಿಗಳ ವಿರಹಿತ |
ಕಪ್ಪುಬಡೆದ ಚಿಪ್ಪು ಮುದ್ರೆಯ ಮುಖದಿ ತೋರುವನೂ || ೯ ||

ಕಿವುಡು ಕಿವಿಯಿಂ ಕುರುಡುಕಣ್ಣಿಂಬಚ್ಚಬಾಯಿಂ ಬೋಳುತಲೆಯಿಂ |
ನಡುವುಬಾಗಿಲಿ ಕಲಿಯ ಕಾಲದ ಹನುಮನೆಂತವದೋರುವಂ || ೧೦ ||

ಆದೊಡಂ ತಾನ್ಹರಿಯ ಸ್ಮರಿಸದೆ ಸತಿಸುತರ ದುಡ್ಡಿನ ಸ್ಮರಣೆಗೈಯುತೆ |
ಕಾದುಕೊಂಡಿದ ಮರಣ ಮರೆಯುತೆ ಮೌಖ್ಯದಲಿ ಮುಳಗುವನು || ೧೧ ||

ಪ್ರಾಣವಕ್ಕಿಯು ಹಾರಲವ ತಾ ಶೂನ್ಯನಾಗುತೆ ಪಂಚಭೂತದಿ |
ಕೂಡಿ ಮಣ್ಣೊಳು ಮಣ್ಣುಆಗುತಲಳಿದು ಹೋಗುವನೂ || ೧೨ ||
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...