ಕನ್ನಡಿಗಳು ಬೇಕು

ಬದುಕಿನುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಕನ್ನಡಿಗಳು ಬೇಕು! ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು ಎತ್ತರಗಳ ಅಳೆಯಲು ಬದಲಾದ ಕನಸುಗಳ ಗುರುತಿಸಲು ಕೈಗೆಟುಕುವುದೇ ಮುಗಿಲು? ತಿಳಿಯಲು ದಾರಿಗೆ ಹಿಡಿದಿದೆಯೇ ಗೆದ್ದಲು? ಇಲ್ಲವೇ ಗುರಿಯೆಂಬ ಪೂರ್ಣವಿರಾಮಕ್ಕೆ ಮಗ್ಗುಲು? ಸೋಲುಗಳ ಮೆಟ್ಟಿ...

ಸೂಜಿ ಹುಡುಕುವ ಅಜ್ಜಿ

ಕಳೆದು ಹೋಗಿಹ ಸಣ್ಣ ಕಣ್ಣಿನ ಸೂಜಿ ಹುಡುಕುತ್ತಿದ್ದಾಳೆ ಅರೆಗುರುಡಿನ ಅಜ್ಜಿ ಮೂಲೆ ಮೂಲೆ, ಸಂದಿ ಗೊಂದಿ ತಡವುತ್ತಾ, ಎಡವುತ್ತಾ ಅಸಂಬದ್ಧ ಗೊಣಗುತ್ತಾ ಅಪ್ರಚಲಿತ ಜಾನಪದ ಗೀತೆ ಗುನುಗುತ್ತಾ ಹರಿದ ಸೀರೆ ತುಂಡು ತೇಪೆಗೊಂದಿಷ್ಟು ಅರಿವೆ...

ಪ್ರಾಚೀನ

ಮಣ್ಣಿನ ಮಡಿಕೆ ಕುಡಿಕೆ ಕಲಾಯಿ ಇಲ್ಲದೇ ಅಟ್ಟಕ್ಕೇರಿದ ಹಿತ್ತಾಳೆ ತಾಮ್ರದ ಪಾತ್ರೆ ಮುತ್ತಜ್ಜ ಅಜ್ಜ ಅಪ್ಪ ಮತ್ತಿನ್ಯಾರೋ ಮಲಗೆದ್ದ ತೊಟ್ಟಿಲು ಉಯ್ಯಾಲೆ ಭೂತಾಕಾರದ ಮಂಚ ಮೂಲೆಯಲಿ ತೂಗುವ ಕಂದೀಲು, ಮುಖ ಕಾಣದ ಕನ್ನಡಿ ಪ್ರಾಚ್ಯ...

ನೀ ಬರಿಯ ನೀರಲ್ಲ!

ಹೇ ತಾಯಿ, ನೀ ಬರಿಯ ನೀರಲ್ಲ ನೀರೆಂಬ ಮಾಯೆ! ಹನಿಹನಿಯ ಬೊಗಸೆ ಬೊಗಸೆ ಹೀರಿದರೂ ಹಿಂಗಿತೇ ದಾಹ? ಮತ್ತೆ ಮತ್ತೆ ಬೇಕೆನಿಸುವ ತೀರದಾ ಮೋಹ! ಬರಿಯ ನೀರೆಂದು ಬೋಗುಣಿಯಲಿ ತುಂಬಿಸಿಡುವಾಗ ಥಟ್ಟನೆ ಘನೀಬವಿಸಿ ಮಂಜುಗಡ್ಡಯಾಗಿಬಿಡುವ...

ಬೋನ್ಸಾಯ್

ತಾಯಿ ನೆಲವ ಒಮ್ಮೆಯೂ ಸೋಕದೆ ಬಣ್ಣ ಬಣ್ಣದ ಬೋಗುಣಿಗಳಲ್ಲಿ ಬೆಳೆದು ಅಲ್ಲಲ್ಲ, ಷೋಕಿಗೆ ಶಿಸ್ತಿನಿಂದ ಬೆಳೆಸಲ್ಪಟ್ಟು ತಾಯಿಬೇರೂ ಕತ್ತರಿಸಿಕೊಂಡು ಅತ್ತಿತ್ತ ಎಲ್ಲೆಂದರಲ್ಲಿ ಕೊಂಬೆ ಚಾಚದೇ ಜೈಲಿನ ಖೈದಿಯಂತೆ ಇದ್ದೂ ತಿನ್ನಲಾಗದ ರೋಗಿಷ್ಟ ಶ್ರೀಮಂತನಂತೆ ಒಂದೇ...

ಕಣ್ಕಾಪು ಬಿಗಿದ ಕುದುರೆ

ಇಲ್ಲ ಅಕ್ಕಪಕ್ಕದ ಪರಿವೆ ಬೇಕಿಲ್ಲ ಕಣ್ಕಾಪಿನಾಚೆಯ ಗೊಡವೆ ಉದ್ದಾನು ಉದ್ದ ಕಣ್ಣು ಹಾಯ್ದಷ್ಟು ದೂರ ದಾರಿ ಮಲಗಿದೆ ಹೀಗೇ... ನೇರ ಏರುಪೇರಿಲ್ಲ. ಅಡೆತಡೆಗಳೂ ಇಲ್ಲ ಚೌಕಟ್ಟು ಮೀರಿ ನೋಡುವಂತಿಲ್ಲ ತನ್ನ ಪರಿಧಿಯೊಳಗೆ ಕಂಡದ್ದೇ ಸತ್ಯ...

ಗಾಳಿಪಟ

ಏರುವ ಎತ್ತರಕೆ ಬಾನೆ ಗುರಿ ಹಾರುವ ಬಯಕೆಗೆ ದಾರ ಮಿತಿ! ಭಾರ ಹೇರಿ ತೂಗುವ ನೂರೆಂಟು ಬಾಲಂಗೋಚಿಗಳು ನುಗ್ಗುವ ಉತ್ಸಾಹಕೆ ಎದುರಾಗುವ ಆಳೆತ್ತರ ಗೋಡೆಗಳು! ಗುರುತ್ವಾಕರ್ಷಣೆಯ ಎದೆಗೊದ್ದು ಅಟ್ಟಹಾಸದಿ ಮೇಲೇರಿ ಹಾರಿ ಮೆರೆವ ಬಯಕೆಗೆ...

ಸ್ಥಿತ್ಯಂತರ

ಸದಾ ಕಿಚಿಪಿಚಿಗುಡುವ ಗೊಂದಲದ ಗುಬ್ಬಿ ಗೂಡು ಕೇಳುವುದಿಲ್ಲ ಒಂದಾದರೂ ಸುಮಧುರ ಹಾಡು ಬಿಡುವಿಲ್ಲದೇ ತುಯ್ಯುವ ಒಂದು ವೀಣೆ ನಿರಂತರ ಕಾಡುವುದೇಕೋ ಕಾಣೆ! ಮಧ್ಯಂತರದಲಿ ನಿಂತ ನಾನು-ನನ್ನಂತವರು ದವಡೆಯ ಕೊನೆಯ ಹಲ್ಲುಗಳನ್ನು ಅರ್ಧವಷ್ಟೇ ಕಂಡವರು. ಹಳತು...

ಕನ್ನಡಿಯೂ ಹಾಡೂ ಮತ್ತು ಹುಡುಗಿಯೂ

ಕನ್ನಡಿಯನು ಪ್ರೀತಿಸುತ್ತಾ ಪ್ರೀತಿಸುತ್ತಲೇ ಕನ್ನಡಿಯೇ ಆದ ಹುಡುಗಿ, ಹಾಡಲಾಗಲಿಲ್ಲ ಎದೆಯಾಳದ ಎಲ್ಲ ಎಲ್ಲಾ ಹಾಡುಗಳನ್ನು! ಬರಿಯ ಪ್ರತಿಫಲಿಸುವ ಕನ್ನಡಿಗೆ ಎಲ್ಲಾ ಅವ್ಯಕ್ತಗಳೂ ದಕ್ಕುವುದಾದರೂ ಹೇಗೆ? ನಿನ್ನೆಗಳಲ್ಲಿ ಮನ ತುಂಬಿ ಹಾಡಲಾಗದ ಹುಡುಗಿ ಇಂದು ತನ್ನ...
ಚಿದಂಬರ ರಹಸ್ಯ

ಚಿದಂಬರ ರಹಸ್ಯ

ಪ್ರಿಯ ಸಖಿ, ತಮಿಳುನಾಡಿನ ಚಿದಂಬರಂನ ನಟರಾಜನ ದೇವಸ್ಥಾನ ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ೯ನೇ ಶತಮಾನದಲ್ಲಿ ಚೋಳರಿಂದ ಕಟ್ಟಲ್ಪಟ್ಟ ಈ ದೇವಾಲಯ ೪೦ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ದೇವರು ಅಥವಾ...