ಗಾಳಿಪಟ

ಏರುವ ಎತ್ತರಕೆ ಬಾನೆ ಗುರಿ
ಹಾರುವ ಬಯಕೆಗೆ ದಾರ ಮಿತಿ!

ಭಾರ ಹೇರಿ ತೂಗುವ
ನೂರೆಂಟು ಬಾಲಂಗೋಚಿಗಳು
ನುಗ್ಗುವ ಉತ್ಸಾಹಕೆ
ಎದುರಾಗುವ ಆಳೆತ್ತರ ಗೋಡೆಗಳು!

ಗುರುತ್ವಾಕರ್ಷಣೆಯ ಎದೆಗೊದ್ದು
ಅಟ್ಟಹಾಸದಿ ಮೇಲೇರಿ ಹಾರಿ
ಮೆರೆವ ಬಯಕೆಗೆ
ಅಡ್ಡಿ ಸೂತ್ರಧಾರಿ
ಕೆಲಸಕ್ಕೆ ಬಾರದ ವ್ಯರ್ಥ
ಪ್ರಯತ್ನಗಳು ಯಾವ ಕೆಲಸಕ್ಕೆ?
ಮೈ ಮರೆತರೆ ಮೊಟ್ಟುವ, ಮೆಟ್ಟುವ
ನಾಜೂಕು ನೂಲು
ಎಲ್ಲೆ ಮೀರುವ ಬಯಕೆಯ ಸೋಲು
ಸೂತ್ರ ಕಿತ್ತೊಗೆದು
ವಿಸ್ತಾರ ದಿಗಂತ ತಬ್ಬುವ ತುಡಿತ
ಮನಃಪಟಲದಲಿ ರೆಕ್ಕೆ ಕಳಚಿ
ಬೋಡಾದ ಮಳೆಹುಳು
ನೆಲವನಪ್ಪಿ ವಿಲವಿಲನೆ
ಒದ್ದಾಡುವ ಚಿತ್ರ

ಮಿತಿಮೀರುವ
ಮಿತಿಮೀರಲಾಗದ
ತುಮುಲಗಳ ಗೊಂದಲ
ಏನೊಂದೂ ನಿರ್ಧರಿಸಲಾಗದೇ
ಮನ ಚಂಚಲ
ಪುಟಿದೇಳುವ ಉತ್ಸಾಹ
ಕೆಳದಬ್ಬಿ ತುಳಿವ ರಾಕ್ಷಸೀ
ಕ್ರೌರ್ಯದ ಮಧ್ಯೆ
ಅಡ್ಡಗಾಲಿಡುವ ಲಕ್ಷ್ಮಣರೇಖೆ
ದ್ವಂದ್ವದಲಿ ಸಿಕ್ಕು ಸದಾ ತ್ರಿಶಂಕು ಸ್ವರ್ಗ!

ಏರುವ ಎತ್ತರಕೆ ಬಾನೆ ಗುರಿ
ಹಾರುವ ಬಯಕೆಗೆ ದಾರ ಮಿತಿ!
*****

ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸರ್ವನಾಮಪ್ರಿಯ
Next post ಕನಸುವ ಹಕ್ಕಿ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…