“ಉಪ್ಪಿಗಿಂತ ರುಚಿಯಿಲ್ಲ. ತಾಯಿಗಿಂತ ಬಂಧುವಿಲ್ಲ” ಎಂಬ ಗಾದೆ ಮಾತೇ ಇದೆ. ಉಪ್ಪಿನ ಋಣ ತೀರದು. ಯಾರ ಬಳಿ ಉಪ್ಪು ಸಾಲವಾಗಿ ಪಡೆಯಬಾರದು. ರಾತ್ರಿ ಸಮಯ ಉಪ್ಪು ಮನೆಗೆ ತರಬಾರದು. ಉಪ್ಪು, ಅಡಿಗೆ ಎಣ್ಣೆ, ಬೆಲ್ಲ ಒಂದೇ ಸಾರಿ ತರಬಾರದು ಶುಭ ಸೂಚನೆಗಳಲ್ಲ!
ಮನೆಯಲ್ಲಿ ಉಪ್ಪು ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು. ಯಾವುದಕ್ಕೆ ಬಡತನವಿದ್ದರೂ ಉಪ್ಪಿಗೆ ಕೊರತೆಯಿರದಂತೆ ನೋಡಿಕೊಳ್ಳಬೇಕು.
ರಾತ್ರಿ ಹೊತ್ತು- ಶುಭ ಸಮಾರಂಭಗಳಲ್ಲಿ ಉಪ್ಪನ್ನು ಸಕ್ಕರೆಯೆಂದು ಕರೆಯಬೇಕು. ಮನೆಯಲ್ಲಿ ಸಕ್ಕರೆಯಿಲ್ಲದಿದ್ದರೆ ಹಾನಿಯಿಲ್ಲ. ಆದರೆ ಉಪ್ಪು ಇಲ್ಲದಿದ್ದರೆ, ಏನು ತಿಂದರೂ ನಾಲಿಗೆಗೆ ರುಚಿ ಹತ್ತದು.
ಕಡಿಮೆ ರಕ್ತದೊತ್ತಡ ಇರುವವರು ಮೂರು ಹೊತ್ತು ಆಹಾರದಲ್ಲಿ ಉಪ್ಪು ಅಧಿಕವಿರುವಂತೆ ನೋಡಿಕೊಂಡು ಸೇವಿಸುವುದು ಒಳಿತು.
ಉಪ್ಪು ನೀರು- ಉಪ್ಪು ಅಧಿಕವಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ನಿದ್ದೆ ಬರುವುದು.
ಸಣ್ಣ ಕರುಳು ದೊಡ್ಡ ಕರುಳಿನಲ್ಲಿರುವ ಗ್ಯಾಸ್‌ನ್ನು ಉಪ್ಪು ಶಮನಗೊಳಿಸುವುದು. ಉಪ್ಪು ಎಲುಬುಗಳನ್ನು ಬಲಿಷ್ಠಗೊಳಿಸುವುದು.
ಜೀರ್‍ಣಕ್ರಿಯೆಗೆ ಉಪ್ಪು ಬೇಕೇ ಬೇಕು.
ಬುದ್ಧಿಶಕ್ತಿಯನ್ನು ವೃದ್ಧಿಗೊಳಿಸಲು ಉಪ್ಪು ಬೇಕೇಬೇಕು. ಸಕ್ಕರೆ ಖಾಯಿಲೆಯಿರುವವರಿಗೆ ಇನ್ಸುಲಿನ್ ಉತ್ಪತ್ತಿಯಾಗಲು ಉಪ್ಪುಬೇಕೇ ಬೇಕು.
ಕಾಲ್ಸಿಯಂ ಪ್ರೋಟೀನ್ ಕಡಿಮೆ ಇರುವವರೆಲ್ಲ ಉಪ್ಪು ತುಸು ಹೆಚ್ಚು ಸೇವಿಸಬೇಕು.
ಉಪ್ಪು ಉಪ್ಪು… ಉಪ್ಪಿಲ್ಲದೆ ನೆನಪಿನ ಶಕ್ತಿ ಕೂಡಾ ಕಡಿಮೆಯಾಗುವುದು. ಉಪ್ಪೇ ಅಧಿಕ ರಕ್ತದೊತ್ತಡಕ್ಕೆ ಕಾರಣೀಭೂತವಾಗಿ ಕಾಡುವುದೆಂಬುದನ್ನು ನೆನಪಿಸುತ್ತಾ ಉಪ್ಪಿನ ಋಣವನ್ನು ಇಲ್ಲಿಗೆ ತೀರಿಸುತ್ತಿದ್ದೇನೆ.
*****