Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ ಮುಂಜಾನೆ, ೫ ಜುಲೈ , ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ ಮುಂಜಾನೆ, ೫ ಜುಲೈ , ೧೯೪೨

ಪ್ರೀತಿಯ ಕಿಟಿ,

ಕಳೆದ ಶುಕ್ರವಾರವಷ್ಟೇ ನಮ್ಮ ಪರೀಕ್ಷೆಯ ಫಲಿತಾಂಶ ಯಹೂದಿ ಥೇಟರ್‌ನಲ್ಲಿ ಪ್ರಕಟವಾಗಿದ್ದವು. ನಾನು ಹೆಚ್ಚಿನ ಭರವಸೆಯನ್ನೇನೂ ಹೊಂದಿರಲಿಲ್ಲ. ನನ್ನ ಪ್ರಗತಿಯ ವರದಿ ಅಂತಹ ಕೆಟ್ಟದಾಗಿರಲಿಲ್ಲ. ನನಗೆ ಸಾಕು ಅನ್ನುವಷ್ಟು ಒಂದು ಅಂಕ, ಬೀಜಗಣಿತಕ್ಕೆ ಐದು ಅಂಕಗಳನ್ನು, ಎರಡರಲ್ಲಿ ಆರು ಮತ್ತು ಉಳಿದವುಗಳೆಲ್ಲಿ ಏಳು ಮತ್ತು ಎಂಟು ಅಂಕಗಳನ್ನು ಪಡೆದಿದ್ದೆ. ಇದು ಮನೆಯವರನ್ನು ಸಂತೋಷಗೊಳಿಸಿದ್ದವು. ಅದರೊಂದಿಗೆ ನನ್ನ ಹೆತ್ತವರು ಅಂಕಗಳ ವಿಚಾರದಲ್ಲಿ ಉಳಿದವರಿಗಿಂತ ಕೊಂಚ ಭಿನ್ನ. ನಾನು ಚೆನ್ನಾಗಿ, ಖುಷಿಯಿಂದ ಇದ್ದು ನನ್ನ ಪ್ರಯತ್ನ ತೀರಾ ಕಳಪೆಯಾಗದ ಹೊರತು ನನ್ನ ಪ್ರಗತಿ ಚೆನ್ನಾಗಿರಲಿ ಅಥವಾ ಕೆಟ್ಟದಾಗಿರಲಿ ನನ್ನ ಪೋಷಕರು ಅಷ್ಟೇನೂ ಚಿಂತಿಸುತ್ತಿರಲಿಲ್ಲ. ಉಳಿದದ್ದು ತಾನಾಗಿಯೇ ಬರುವುದು. ಆದರೆ ನಾನು ಇದಕ್ಕೆ ತದ್ವಿರುದ್ಧ. ನನಗೆ ನಾನು ಕೆಟ್ಟ ವಿದ್ಯಾರ್ಥಿಯಾಗಿರಲು ಇಷ್ಟವಿಲ್ಲ. ನಾನು ಮಾಂಟೆಸ್ಸರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿಯೇ ನಿಜಕ್ಕೂ ಇರಬೇಕಿತ್ತು. ಆದರೆ ನನ್ನನ್ನು ಯಹೂದಿ ಶಾಲೆಗೆ ಸೇರಿಸಲಾಯಿತು. ಎಲ್ಲ ಯಹೂದಿ ಮಕ್ಕಳು ಯಹೂದಿ ಶಾಲೆಗಳಿಗೆ ಮಾತ್ರ ಹೋಗಬೇಕಾಗಿತ್ತು. ಆಗ ಹೆಡ್‌ಮಾಸ್ಟರ್ ನನ್ನನ್ನು ಮತ್ತು ಲೀಸ್‌ಳನ್ನು ಸರಿಯಾಗಿ ಮನವೊಲಿಸಿ ಶಾಲೆಗೆ ತೆಗೆದುಕೊಂಡರು. ಅವರಿಗೆ ನಮ್ಮ ಮೇಲೆ ನಂಬಿಕೆ ಇತ್ತು. ಆ ನಂಬಿಕೆ ಹುಸಿಗೊಳಿಸಲು ಅವರು ತಲೆ ತಗ್ಗಿಸುವಂತೆ ಮಾಡಲು ನಾನು ಬಯಸುವುದಿಲ್ಲ. ನನ್ನಕ್ಕ ಮಾರ್‍ಗೊಟ್‌ಳ ರಿಪೋರ್ಟ ಬಂದಿತ್ತು. ಆಕೆ ಎಂದಿನಂತೆ ಬ್ರಿಲಿಯಂಟ್. ಶಾಲೆಯಲ್ಲಿ ಡಿಷ್ಟಿಂಕ್ಷನ್ ಪದ್ಧತಿ ಇದ್ದರೆ ಆಕೆ ಡಿಷ್ಟಿಂಕ್ಷನ್ ಪಡೆದುಕೊಂಡೇ ಮುಂದೆ ಹೋಗುವಳು. ಆಕೆ ಬಹು ಬುದ್ಧಿವಂತೆ. ಬ್ಯೂಸಿನೆಸ್ ಕೆಲಸಗಳು ಏನೂ ಇಲ್ಲ ಎಂದು ತಿಳಿದ ಮೇಲೇಯೇ ಡ್ಯಾಡಿ ಬಹಳ ತಡವಾಗಿಯಾದರೂ ಮನೆಗೆ ಬಂದಿದ್ದರು. ಕೆಲಸಗಳು ಮಿತಿ ಮೀರಿವೆ ಎಂದುಕೊಳ್ಳಲು ಅವರಿಗೆ ತುಂಬಾ ಕೆಲಸಗಳು ಕೊಳೆಯುತ್ತಾ ಬಿದ್ದಿರಬೇಕು. ಕೂಫಸ್ ಟ್ರೇವಿಸ್‌ನ ನೋಡಿಕೊಂಡರೆ, ಕ್ರೇಲರ ಕೋಲೆನ್ ಆಂಡ್ ಕೋ. ಸಂಸ್ಥೆ ನೋಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಮ್ಮ ಚಿಕ್ಕ ಜಮೀನನ ಸುತ್ತ ನಾವೆಲ್ಲ ಜೊತೆಯಾಗಿ ತಿರುಗಾಡುತ್ತಿದ್ದಾಗ ಡ್ಯಾಡಿ ನಾವು ಗುಪ್ತವಾಸಕ್ಕೆ ಹೋಗುತ್ತಿರುವ ಬಗ್ಗೆ ಹೇಳಿದರು. ಈ ಜಗತ್ತು ಹೀಗೇಕೆ? ಎಂದು ನಾನು ಕೇಳಿದೆ. ಅದಾಗಲೇ ಡ್ಯಾಡಿ ಆ ಕುರಿತು ಮಾತನಾಡತೊಡಗಿದರು. ಹೌದು ಆನ್ ಈಗ ವರ್ಷದ ಮೇಲಾಯ್ತು ನಾವು ಬೇರೆಯವರ ಬಟ್ಟೆ, ಊಟ, ಮನೆ ಸರಂಜಾಮುಗಳ ತೆಗೆದುಕೊಳ್ಳುತ್ತಿದ್ದೇವೆ ಎಂಬುದು ನಿನಗೆ ಗೊತ್ತಲ್ಲ. ನಮ್ಮ ಸ್ವತ್ತನ್ನು ಜರ್ಮನ್ನರು ವಶಪಡಿಸಿಕೊಳ್ಳುವುದು ನಮಗಿಷ್ಟವಿಲ್ಲ. ಆದರೆ ಅವರ ಕಪಿಮುಷ್ಟಿಗೆ ಬಲಿಯಾಗಲು ನಮಗೆ ಸಾಧ್ಯವಿಲ್ಲ. ಅದಕ್ಕಾಗಿ ನಮ್ಮ ಸ್ವನಿರ್ಧಾರದಿಂದ ನಾವು ಗುಪ್ತವಾಗಿ ಬದುಕೋಣ. ಅವರು ಬಂದು ನಮ್ಮನ್ನು ಹುಡುಕುವವರೆಗೆ ಕಾಯುವುದು ಬೇಡ.

ನಾನು ವ್ಯಾಕುಲಳಾಗಿದ್ದೆ, “ಆದರೆ ಡ್ಯಾಡಿ ಅದೆಲ್ಲ ಎಂದು ಆಗುವುದು?” ಎಂದೆ. ಆತ ಬಹಳ ಸಿರಿಯಸ್ಸಾಗಿ ನುಡಿದರು. “ನೀನು ಆ ಬಗ್ಗೆ ಚಿಂತಿಸದಿರು. ನಾವೆಲ್ಲ ಸಿದ್ಧತೆ ಮಾಡುವೆವು. ನಿನ್ನ ಎಳೆಯ ಬದುಕನ್ನು ಸಾಧ್ಯವಾದಷ್ಟು ನಿರಾತಂಕವನ್ನಾಗಿ ಮಾಡಿಕೋ.”

“ಅಷ್ಟೇ ಆಗಿತ್ತು. ಓ. ದೇವರೇ, ಈ ಎಲ್ಲ ಸಂಕಟದ ಸಂಗತಿಗಳು ದೂರವೇ ಇರಲಿ.” ಪ್ರಾರ್ಥಿಸಿದೆ.

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...