ಒಲ್ಲದ ಕೊಡಿಗೆ

ಒಲ್ಲೆವಿದನಿನ್ನು ಹರಳಡಸಿದೀ ಹಿಡಿತುತ್ತೆ?
ಕೊರಳು ಕರುಳಂ ಬಗಿನ ಬುತ್ತಿ ತಾನಲ್ಲ?
ಕೊಡಿಗೆ ಎನಲೊಂದೆ-‘ಆಂಗ್ಲರೆ, ನಡಿರಿ ಈವತ್ತೆ!
ನೀವಿಲ್ಲಿಹನ್ನೆಗಂ ಬಿಡುಗಡೆಮಗಿಲ್ಲ!’

ಒಂದು ಕೆಯ್ಯಂದೀ ಉದಾರ (!) ಕೊಡಿಗೆಯ ಕೊಟ್ಟು
ತಾವಿನ್ನು ತೆರಳಲಿಹೆನೆಂದು ತೋರ್‍ವಂದು
ಮತ್ತೊಂದರಿಂದೆನ್ನ ಹಿಂದೆ ಜುಟ್ಟಿಗೆ ಜುಟ್ಟು
ಗಂಟಿಕ್ಕುವೀ ದ್ರೋಹ ಯಾರ್‍ಗೆ ಹೊಸತಿಂದು?

ಶಶಿಸೂರ್‍ಯರೆರಡೆ ಹೊರತೆಮ್ಮದೆಂದಾವೊಂದು
ನಮ್ಮ ದೇಶದೊಳಕಟ ನಮಗುಳಿದುದಿಲ್ಲ!
ದೋಚಿದೆಲ್ಲವ ಮರಳಿ ಬಾಚಲಾವಿರುವಂದು
ಹೊನ್ನೆಡೆಗೆ ಹಿತ್ತಾಳಿ? ಛಃ ನಮಗಿದೊಲ್ಲ!

ನಮ್ಮ ಕಾಲಲೆ ನಿತ್ತು ಕಾಲವಂ ಕಡೆವ,
ಬಿಡುಗಡೆಯ ಸೆಳೆವರಂ ದುಡಿವ! ಹೆದ್ದುಡಿವ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಕೀರುತಿ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…