ಮೂರ್‍ಖರಾಗದೇ ಉಳಿವೆವೇ ?

ಮೂರ್‍ಖರಾಗದೇ ಉಳಿವೆವೇ ?

ಪ್ರಿಯ ಸಖಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಲೇಖಕ ಯು. ಆರ್. ಅನಂತಮೂರ್‍ತಿಯವರು ಸಂವಾದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಮ್ಮ ದೇಶದ ದುರಂತವೆಂದರೆ ಜನರಿಗೆ ಮೊದಲು ದೂರದರ್‍ಶನವನ್ನು ನೀಡಿದ್ದು! ಮೊದಲು ನಾವು ಜನರಿಗೆ ವೈಚಾರಿಕ ಪ್ರಜ್ಞೆಯನ್ನು, ವಿವೇಚನೆಯನ್ನು...

ಬೈರಾಗಿಯ ಜಡೆ

೧ ಹೊತ್ತು ಕಂತುವ ಮೊದಲೇ ನಿನಗೆ ಜಡೆ ಹೆಣೆದು ಮುಗಿಸಲೇಬೇಕೆಂಬುದಿವರ ಉಗ್ರ ಆದೇಶ. ನೀನೋ ಅಂಡಲೆವ ಬೈರಾಗಿ! ನಿಂತಲ್ಲಿ ನಿಲ್ಲುವವನಲ್ಲ ಕೂತಲ್ಲಿ ಕೂರುವವನಲ್ಲ ಕ್ಷಣಕ್ಕೊಮ್ಮೆ ಧಿಗ್ಗನೆದ್ದು ಗರಗರ ದಿಕ್ಕು ತಪ್ಪಿ ತಿರುಗುವ ವಾಚಾಳಿ ಪಾದದವನು!...

ಕಸವೂ ನಕ್ಷತ್ರವೂ

೧ ಬಯಲಿನಲಿ ಕೂತು ಆಕಾಶಕ್ಕೆ ಕಣ್ಣು. ಬೆಳ್ಳಂಬೆಳಗೇ ತಾರೆಗಳ ಹುಡುಕಿ ಕಿತ್ತು ಪೋಣಿಸಿ ಮಾಲೆ ಮಾಡುತ್ತ ಮಡಿಲು ತುಂಬಿಕೊಳುವುದರಲೇ ಮಗ್ನ ಈ ಬಯಲ ಬುದ್ಧ. ೨ ಗುಡಿಸಿದ ರಾಶಿ ಬೀದಿ ಕಸ ತನ್ನ ಪುಟ್ಟ...

ವಾಸ್ತು ಗಿಡ

೧ ಅವರ ಬಂಗಲೆಯ ಹಜಾರದ ನೀರ ಬೋಗುಣಿಯಲಿ ನೆಟ್ಟ ಅಲ್ಲಲ್ಲ... ಇಟ್ಟ ಅದು ವಾಸ್ತು ಗಿಡವಂತೆ. ನಿಂತಿದೆ ತಾನೇ, ದಯನೀಯವಾಗಿ. ಅದರ ಮೊಗದ ತುಂಬಾ ದುಗುಡ ಈಗಲೋ ಆಗಲೋ ಕಟ್ಟೆ ಒಡೆವಂತೆ. ದಿಕ್ಕೆಟ್ಟು ನಿಂತ...

ಆ ಕನ್ನಡಿ ಬೇಕೆಂದರೆ……

೧ ನನಗಾಗಿ ನನ್ನದೇ ಒಂದು ಕನ್ನಡಿ ಬೇಕೆಂಬ ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ ಕನ್ನಡಿಯೇ ಇಲ್ಲವೆಂದಲ್ಲ ಊರ ತುಂಬಾ ಕನ್ನಡಿ ನೆಟ್ಟಿದ್ದಾರೆ ಅವರಿಗಿಷ್ಟದ ಪಾದರಸ ಇವರಿಗಿಷ್ಟದ ಮಾಪಕ ಅವರಿಗೆ ಬೇಕೆನಿಸಿದಷ್ಟು ಹೊತ್ತು ಕಾಯಿಸಿ ಎರಕ...

ಮಹಾ ಪರಿನಿರ್ವಾಣ

೧ ಕಾಂಡವೇ ಶಿಲೀಕೃತಗೊಂಡು ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ ಕೆತ್ತಿದ ಬುದ್ಧನಿಗೆ ಅವಳಡುಗೆ ಮನೆಯೀಗ ತಪೋವನ. ನೀಳ ಕಣ್ಣು ಮುಚ್ಚಿ ಧ್ಯಾನಕ್ಕೆ ಕೂತ ಅವನೊಂದಿಗೆ ಅವಳ ನಿತ್ಯ ಕಸುಬಿನಲ್ಲೇ ಮೌನ ಜುಗಲ್‌ಬಂದಿ. ೨ ಸೊಪ್ಪು ಸೋಸುತ್ತಾ...

ಹೂವಿಗೆ ಹೂವೇ ಸಾಕ್ಷಿ

ಇದ್ದಕ್ಕಿದ್ದಂತೆ ರಾತ್ರಿಯೆಲ್ಲಾ ಧೋ ಎಂದು ಸುರಿದ ಮಳೆಗೆ ಬೆಳಗಿಗೇ ಅರಳಿ ನಿಂತಿದೆ ಈ ಮಳೆ ಲಿಲ್ಲಿ ಹೂವು! ಮೊಗ್ಗಿಲ್ಲ, ಮೊಗ್ಗಿನ ಸುಳಿವಿರಲಿಲ್ಲ ಗಿಡದ ಗರ್ಭದ ಯಾವ ಮೂಲೆಯಲ್ಲಡಗಿತ್ತು ಈ ಹೂವಿನ ಮಿಂಚು? ಮಳೆಗೂ, ಈ...

ನಿಮೀಲನ

ಮುಟ್ಟುವುದೆಂದರೆ ಮುಟ್ಟದಿರುವುದು ಮುಟ್ಟದಿರುವುದೆಂದರೂ ಮುಟ್ಟುವುದು ಕಣ್ಣಾಗಿ ಕಾದು ಕೂತ ಮೈಮರೆವಿನ ಎಚ್ಚರದಲಿ ಎವೆಗಳೊಂದಾಗುವ ಚಡಪಡಿಕೆ ಮುಟ್ಟಿತಾಗುವ ಮೈಮರೆವು. ಒಂದಾಗಿಯೂ ಬೇರಾದ ಎರಡಾಗಿಯೂ ಒಂದಾದ ಕಣ್ಣೆವೆ ಮೈ ಮರೆವಿನಲ್ಲೂ ಮೊಗ್ಗುಗಳರಳಿ ಪಸರಿಸಿದ ಗಂಧ ಒಳಗೇ ಒಳಗಾಗುವ...

ಕಡಲಿನಾಳದ ನದಿ

೧ ಜೀಯಾ ಹೀಗೆ ನಿನ್ನ ಮುಂದೆ ಒಳಗಿನದೆಲ್ಲ ಸುರಿದು ಖಾಲಿಯಾಗಿ ನಿಂತುದು ಅದೆಷ್ಟನೆಯ ಸಲವೋ ಲೆಕ್ಕವಿಟ್ಟಿರಬಹುದು ನೀನು. ಮತ್ತೆ ಮತ್ತೆ ನನ್ನ ತುಂಬುವವನು ಕರುಣಾಳು ನೀನೇ ತಾನೇ? ಅಬ್ಬರದ ಶರಧಿಯಲಿ ಅಲೆವ ಮೀನು ನಾನು...

ಕ್ಷಮೆ ಇರಲಿ ನನಗೆ

ಘಾತಕ್ಕೊಳಗಾಗಿ ಪತರುಗುಟ್ಟುತ್ತಿದ್ದ ನನ್ನ ನಿರಾಕಾರ ಮಾನಕ್ಕೆ ಸೊಕ್ಕೆಂಬುದು ನೀವಿಟ್ಟ ಹೆಸರು. ಎತ್ತೆತ್ತಲಿಂದಲೂ ನೀವೆಷ್ಟೇ ಬೆಂಕಿ ಇಟ್ಟರೂ ‘ಅದು’ ದಹಿಸಿ ಹೋಗದ್ದಕ್ಕೆ ಕ್ಷಮೆ ಇರಲಿ ನನಗೆ. ಗವ್ವೆನುವ ಕತ್ತಲ ಗವಿಯೊಳಗೆ ನನಗೆಂದೇ ಹಚ್ಚಿಟ್ಟ ಆ ದೀಪಕ್ಕೆದುರಾದ...