ಚಿಂತೆ ಜಾರಲಿ

ಚಿಂತೆ ಜಾರಲಿ ಚಿತೆಯು ಹೋಗಲಿ ಒಲವು ಮಾತ್ರವೇ ಉಳಿಯಲಿ ಸುಖದ ಸಾಗರ ಶಿವನ ಮಿಲನಕೆ ಪ್ರೀತಿ ಮಾತ್ರವೆ ಬೆಳೆಯಲಿ ಪ್ರಭುವಿಗೆಲ್ಲವ ಕೊಟ್ಟ ಮೇಲಕೆ ಒಳಗೆ ಚಿಂತೆಯು ಯಾತಕೆ ಪ್ರೀತಿ ತಂದೆಗೆ ಸಕಲ ಅರ್‍ಪಿಸಿ ಮತ್ತೆ...

ಮನಸು-ಮೆಯ್ಯಿ

ಕಣಜ ಕಾಳು ಎಳ್ಡೂ ಕೂಡ್ದಾಗ್ ಅಲ್ವ ಆಕೋದ್ ಬರ್‍ತಿ? ಮನಸು ಮೆಯ್ಯಿ ಎಳ್ಡೂ ಸೇರ್‍ಕೊಂಡ್ರ್ ಆಗ್ಲೇ ಪ್ರೀತಿ ಪೂರ್‍ತಿ! ೧ ಮನಸು ಮೆಯ್ಯಿ ಮುತ್ಕೊಟ್ಟಂಗಿತ್! ಸೌಂದ್ರ ಆರ್‍ದ ಮಾರ್‍ತಿ! ಒಂದಿದ್ರ್ ಇನ್ನೊಂದ್ ಇಲ್ದೌರಂದ್ರೆ- ಬಂಡಿ...

ಕಂಬನಿ

ಅಲ್ಲೋಲಕಲ್ಲೋಲವಾದ ಸಾಗರದಲ್ಲು ನಾನು ಸಾಗರಬಿದ್ದು ಸಾಗಬಲ್ಲೆ. ಹಾಳು ಹಂಪೆಯ ಮಣ್ಣಿನಂಥ ಕಣ್‌ಗಳ ಕಂಡು, ನನ್ನ ಚೈತನ್ಯವೂ ನಿಂತ ಕಲ್ಲೆ! ಸಿಡಿಲ ಸೈರಿಸುವೆ, ಕಂಬನಿಯ ಸೈರಿಸಲಾರೆ, ನಂಜುಂಡ ಶಿವ ನುಂಗದಂಥ ನಂಜು; ಭವಭವಾಂತರದಲ್ಲಿ ತೊಳಲಾಡಿಸುತ್ತಿರುವ ಆ...

ಕೋಜವಾದೊಡಂ ಮೊಹರೊತ್ತಿ ತಾಜವೆನಲಿದೇನಾತುರವೋ?

ನಿರ್‍ಜೀವ ಜಗದೊಳಗಿಂದೆಲ್ಲರಾ ಶಕ್ತಿ ಯುಕ್ತಿಯಾಸಕ್ತಿ ಗೌಜಿ ಗದ್ದಲವೆಲ್ಲ ವಸನ ವಸತಿ ವ್ಯಸನದೊಳತಿ ಉಜ್ಜೀವನದ ಹಣ್ಣು ಹಾಲನ್ನಕಪ್ಪ ದುಡಿಮೆಯೊಳಿಲ್ಲ ಮತಿ ಮೋಜಿನಾ ನಗರ ಬದುಕಿನೊಳೆಲ್ಲ ಜೀವಜಗಭಾವ ಹತಿ ತಾಜ ಸಾವಯವವೆನುತಚ್ಚೊತ್ತಿದರೊಪ್ಪಿ ಸವಿಯುವಾಸಕ್ತಿ - ವಿಜ್ಞಾನೇಶ್ವರಾ *****

ಬಳ್ಳೋಳ್ಳಿ

ಕನಕಾ ಬಾದುರ ಬೆಂಗಳೂರು ಮನಕ ಮೆಚ್ಚಿದ ಬಳ್ಳೊಳ್ಳಿ ಹತ್ತಾನೆ ಹರದಿ ಸೊಪ್ಪಿಗ್ ವಗ್ರಣಿಯಾದ ಬಳ್ಳೊಳ್ಳಿ ಹೌದಲೇ ಬಳ್ಳೊಳ್ಳೀ ಸಾಂಬರಲೇ ಬಳ್ಳೊಳ್ಳಿ || ೧ || ಕನಕಾ ಬಾದುರ ಬೆಂಗಳೂರು ಮನಕ ಮೆಚ್ಚಿದ ಬಳ್ಳೊಳ್ಳಿ ಹಗ್ಗದಂತಾ...

ಮುನ್ನಡೆಸು ಬಾ

ಗುಲಾಬಿ ಹೂ ಅರಳಲು ಬೆಳಗಿಗಾಗಿ ಕಾತರಿಸುತಿತ್ತು ನಿನ್ನ ದರುಶನಕ್ಕಾಗಿ ಕೃಷ್ಣ ನನ್ನ ಮನಚಡಿಪಡಿಸುತಿತ್ತು ದೂರದಿ ಮೃಗ ಜಲವ ಕಂಡು ಬಾಯಾರಿ ನಾ ನೋಡಿದೆ ನಿನ್ನ ಮರೆತು ಐಹಿಕ ಸುಖವೇ ಆತ್ಮಾನಂದವೆಂದು ನಂಬಿದೆ ಕಾಮಿನ ಕಾಂಚನಗಳ...

ಎಲ್ಲಾ ಚಂದದ ಕನಸುಗಳೂ

ಎಲ್ಲಾ ಚಂದದ ಕನಸುಗಳೂ ಮಾಗಿಯಲೇ ಯಾಕೆ ಬರುತಾವೆ ಬಂದೆಮ್ಮ ನಿದ್ದೆಯ ಕೆಡಿಸುತ್ತಾವೆ ಹೊರಗೋ ತುಂತುರು ಹೇರಳ ಮಂಜು ಹಗಲೋ ಇರುಳೋ ತಿಳಿಯೋದೆ ಇಲ್ಲ ನಿದ್ದೆಯು ಒಂದೇ ಎಚ್ಚರವು ಒಂದೇ ಎನಿಸುವುದೇ ಕುಳಿರ್‍ಗಾಳಿಯಲಿ ಹೊದ್ದಿಕೆ ಎರಡ್ಮೂರಿದ್ದರು...

ಅವರು

ಇಲ್ಲಿ ಅವನು ಅಲ್ಲಿ ಅವಳು ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು. ಅದರ ಲಲ್ಲೆಯಲ್ಲಿ ನಲವಿ- ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು. ಬಿಸಿಲ ಹೊಳಪನೊಳಗೆ ಚೆಲ್ಲಿ ನೋಟದಿಂದ ಆಸೆಸರಳನವಳಿಗೆಸೆಯುತ ನಡೆವನೊಬ್ಬ ಗುಡಿಯ ಕಡೆಗೆ, ಮನದ ಗೂಡ, ನೆನಪುದುಂಬಿಯೇಳೆ,...

ಕಳೆದು ಹೋದವರು

ಐ.ಟಿ., ಬಿ.ಟಿ. ಕಂಪನಿಗಳು ನಗರದ ಜನಜಂಗುಳಿ ಝಗಝಗಿಸುವ ದೀಪಾಲಂಕಾರ ಕಣ್ಣು ಕುಕ್ಕುವ ಬೆಳಕು ತಲೆಸುತ್ತುವ ಎತ್ತರದ ಬಂಗಲೆಗಳು. ಗಿಜಿಗುಡುವ ಜನಜಂಗುಳಿಯ ಮಧ್ಯೆ ಏಕಾಂಗಿಯಾಗಿದೆ ಒಂಟಿ ಬದುಕು ಮನುಜ ಮನುಜರ ಮದ್ಯ ತುಂಬಲಾಗದ ಆಳ ಕಂದಕ...