ಸಮಯವಿದೆಯೆ ಪಪ್ಪಾ?

೧ ಸಮಯವಿದೆಯೆ ಪಪ್ಪಾ? ಆಚ ಗುಡ್ಡದಾಚೆ ಇದ ನದಿ ಆಹಾ! ಎಷ್ಟು ಚಂದ ಅದರ ತುದಿ ಅಬ್ಬಾ... ಎಷ್ಟು ದೊಡ್ಡ ಸುಳಿ ಹೇಗೋ ಪಾರಾದೆ ನುಸುಳಿ ಸರ್ರೆಂದು ಜಾರುವುದು ನುಣ್ಣನೆಯ ಹಾವು ಎದೆಯೆತ್ತರಕೂ ಹಾರುವುದು...

ತಂಗಿ ಹುಟ್ಟಿದಳು

ಸಂಭ್ರಮವಿಲ್ಲ, ಸಡಗರವಿಲ್ಲ ಮನೆಯೊಳಗೆ ಸೂತಕದ ವಾತಾವರಣ ಆಶೆಯಂತೆಯೆ ಬತ್ತಿ ಹೋಗಿದೆ ಎದೆ ಹಾಲು ಹಡೆದವ್ವ ಕೊರಗುವಳು ಜೋಲಿ ಏರಿಸಲು ಮೊಳೆಯೆ ಸಿಗಲೊಲ್ಲದು ಅಪ್ಪ ಗೊಣಗುವನು ಪೇಟೆಯಲ್ಲಿ ಮಿಠಾಯಿ ಇದ್ದಕ್ಕಿದ್ದ ಹಾಗೆಯೆ ತುಟ್ಟಿಯಾಗಿದೆ ಚಂದ ಮಾಡಿ...