ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹೆಣ್ಣುಮಕ್ಕಳ ಮಾನ, ಮೊಗಲ...

೧ ಮೂಡಣ ಬಾನಿನ ಕರೆ ನಗಲು, ಕತ್ತಲೆ ಮೊತ್ತವೆ ಪರಿದುಗಲು, ಉಷೆರಮೆ ನಿಶೆರಮೆಯನು ಜಯಿಸಿ ಮುಂದಕೆ ಬಂದಳು ಛವಿ ಹರಿಸಿ! ೨ ಕತ್ತಲೆ ಕಡಲಲಿ ತಿರೆ ಮುಳುಗಿ. ನಿಶ್ಚೇಷ್ಟಿತವಾಗಿರಲುಡುಗಿ, ಬೆಳಕಿನ ತಿಕಿಳಿವನು ಕರುಣಿಸುತ ಎಬ್ಬಿಸುತಿರುವಳು ನಸುನಗುತ! ೩ ...

ಜೀವಜ್ಯೋತಿ ಮಿನುಗುತಿತ್ತು ರಾಗದೊಲುಮೆ ತೋರಿ, ಭಾವಬಹಳ ಬೀರುತಿತ್ತು ಮೆರೆಗನೊರೆಯ ಹಾಡಿ; ಮನದ ಮುದವ ತೋರುತಿತ್ತು ಧ್ಯೇಯ ದೂರ ಸೇರಿ, ಮಾಯರಂಗನೇರಿ ಬಂದು ಎದೆಯ ಹರುಷ ಹೂಡಿ; ಕಣ್ಣ ನೋಟ ಚನ್ನ ಚಲುವ ಈಟಿ ಮೀಟಿ ನೋಡಿ, ರಂಗಮುಗಿಲ ಬಿಂಬವೇರಿ ಜತೆಯ ಸ...

ಪ್ರೀತಿಯ ಕಿಟಿ, ನೇರವಾಗಿಯೇ ಹೇಳುವೆ. ಇದು ಬಹು ನಿರಾಳದ ಕ್ಷಣಗಳು. ಮಮ್ಮಿ ಡ್ಯಾಡಿ ಹೊರಹೋಗಿದ್ದಾರೆ. ಮಾರ್‍ಗೊಟ್ ತನ್ನ ಕೆಲವು ಸ್ನೇಹಿತರೊಂದಿಗೆ ಪಿಂಗಪಾಂಗ್ ಆಡಲು ಹೋಗಿದ್ದಾಳೆ. ನಾನು ನನ್ನಷ್ಟಕ್ಕೆ ಪಿಂಗಪಾಂಗ್ ಆಡುತ್ತಲೇ ಇರುತ್ತೇನೆ. ಪಿಂಗಪಾ...

ಒಂದು ದಂಡೆಗೆ ಸಿಸಿಲಿಯ ದೀಪಮಾಲೆ, ಇನ್ನೊಂದು ದಂಡೆಗೆ ಇಟಲಿಯ ದೀಪಾವಳಿ; ಒ೦ದು ದಂಡೆಗೆ ಹರಿತಶಿಲಾಪ್ರಕಾಶಸ್ತ೦ಭ, ಇನ್ನೊಂದು ದಂಡೆಗೆ ಮಿಂಚಿನ ಮಂಗಳಾರತಿ; ಬೆಳಕು ಬಂದು ಕಡಲ-ಹಕ್ಕಿಗೆ ತೋರಣ ಕಟ್ಟಿತಿಲ್ಲಿ, ಅನಂತರೂಪಗಳ ಧರಿಸಿತಿಲ್ಲಿ! ದಿನ್ನೆಯಿಂದ...

ಗುರ್ಚಿ ಗುರ್ಚಿ ಎಲ್ಯಾಡಿ ಬಂದಿ ಹಳ್ಳ ಕೊಳ್ಳ ತಿರುಗ್ಯಾಡಿ ಬಂದೆ. ಕಾರಮಳೆಯೆ ಕಪ್ಪತಮಳೆಯೆ ಸುರುಮಳೆಯೆ ಸುರಿಮಳೆಯೆ. ಸುರಿಮಳೆಯಾದರ ಒಕ್ಕಲಿಗ ಒಕ್ಕಲಿಗ ಒಕ್ಕಲಿಗಣ್ಣ ಬಿತ್ತೊ ಹೊನ್ನ ಸುತ್ತ ಸುರಿಯಿತು ಸುರಿಮಳೆಯೊ ಸುರಿಮಳೆಯೊ. ಹಸರ ಬೆಳೆಯು ಭೂತಾಯ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನ...

ತಾಯಿ ಮಂಗಲ ತೋಳ ತೊಟ್ಟಿಲ ತೂಗಿ ಲಾಲಿ ಹಾಡಿ; ಮಗುವೆ ಅಳದಿರು ಹಾಲು ಹೊಳೆಯಿದೆ ಎಂದೆ ಮುದ್ದು ನೀಡಿ. ನಿನ್ನ ‘ದರ್ಶನ’ ನನ್ನ ಬಾಳಿಗೆ ದಿವ್ಯ ದೀಪ ಕಿರಣ; ಜೀವ ಜೀವದಿ ಹರಿದು ಬಂದಿದೆ ಇದಕೆ ಇಲ್ಲ ಮರಣ. ಸೂರ್ಯ ಚಂದಿರ ಬಯಲು ಬಾಂದಳ ಸಾ...

ಲವಲವಿಕೆಯಲಿ ಮಿಂಚಿ ಮುಚ್ಚಾಟವಾಡುತಿಹ ಬಹು ರೂಪಿಯೇ | ಅಮೃತದಿರವೇ ನನ್ನ ಮರೆವಿಲ್ಲದರಿವಿನಲಿ ಇಹೆ ಸೀಪಿಯೇ || ನೆಕ್ಕಿದೆನ್ನನು ನಿನ್ನ ವಿದ್ಯುತ್‌ ಕಟಾಕ್ಷದಲಿ ಅಗ್ನಿರುಚಿಯೇ | ನಿನ್ನ ಕುಲುಮೆಯ ಕಾವು ಇಲ್ಲ ಇಲ್ಲದ ಠಾವು ನಿತ್ಯ ಶುಚಿಯೇ || ಕ್ಷಣ...

ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರ...

೧ ನೋಡಿಲ್ಲಿ ಕನ್ನಡದ ಸಾಹಿತ್ಯದುದ್ಯಾನ ಸೊಂಪಾಗಿ ಬೆಳೆದಿಹುದು ಹತ್ತಾರು ಶತಮಾನ! ಕವಿಕೃಷೀವಲರಿಲ್ಲಿ ಬೆಳೆದಿಹರು ಬಹುಕಾಲ ಕಾವ್ಯತರುಗಣ ಕವನಲತೆ ಕುಂಜಗಳ ಜಾಲ ಕನ್ನಡದ ನುಡಿ ಧೀರರಾಜರಾಶ್ರಯದಲ್ಲಿ ಉನ್ನತಿಯ ಪಡೆದಿಹುದು ಉದ್ಯಾನ ಜಗದಲ್ಲಿ! ಕಳೆಹುಟ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...