ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹೆಣ್ಣುಮಕ್ಕಳ ಮಾನ, ಮೊಗಲ...

ಸಂಧ್ಯಾರಾಗದ ಸಮಯದಲಿ ಪ್ರಶಾಂತಸಾಗರ ತೀರದಲಿ ಸೇರಿದರೂ ಪ್ರೇಮಿಗಳು. ದಿಗಂತಧಾಮವ ದೂಡಿದರು ಪತೀತಪಾವನ ಸಾರಿದರು ರಾಗದಲೀ ಪ್ರೇಮಿಗಳು. ನೀಲಾಗಗನವ ಸೇರಿದರು ಮುಗಿಲಾಮಯವನ್ನು ನೋಡಿದರು ಒಲುವಿನಲೀ ಪ್ರೇಮಿಗಳು. ಚಲುವಾಚುಕ್ಕಿಯ ನೋಡಿದರು ಗೆಲುವಾಮೊಗವನ...

ಪ್ರೀತಿಯ ಕಿಟಿ, ನಮ್ಮ ಇಡೀ ಬಿ. ಕ್ಲಾಸು ಥರಥರ ನಡುಗುತ್ತ ಇತ್ತು. ಅದಕ್ಕೆ ಕಾರಣ ಸದ್ಯದಲ್ಲಿಯೇ ಟೀಚರಗಳ ಮೀಟಿಂಗು ನಡೆಯಲಿದೆ ಎಂಬುದು. ಯಾರನ್ನು ಮುಂದಿನ ತರಗತಿಗೆ ತಳ್ಳುವುದು ಯಾರನ್ನು ಅಲ್ಲಿಯೇ ಇಟ್ಟುಕೊಳ್ಳುವುದು ಎಂಬುದರ ಕುರಿತು ಊಹಾಪೋಹಗಳು ...

ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ ಆಕಳ ಹಾಲ ಕರೆಯಲಿ| ಹರಿಯಾಗ ಕಾತೆದ್ದು ಮಸರ ಕಡೆಯಾಲಿ ೧ ಅಡ್ಡಡ್ಡ ಮಳೆಬಡದ, ದೊಡ್ಡ ದೊಡ್ಡ ಕೆರೆ ತುಂಬಿ ಗುಡ್ಡಗಳೆಲ್ಲ ಹೈನಾಗಿ || ಜೋ || ಗೌಡಽರ ಸೆಡ್ಡಿಯ ಮ್ಯಾಲೆ ಸಿರಿಬಂದ || ಜೋ || ೨ ಹಾಸ್ಹ್ಯಾಸಿ ಮಳೆಬಡದ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್...

ಮುಟ್ಟದಿರು ದೂರಸರಿ, ಎದೆಹೀನ ವಿಷಕನ್ನೆ ಮೋಹಿಸುವ ಮುಖರೂಪ ಜೇನ್‌-ಸವಿಯ ರಸಗೆನ್ನೆ ಸೆರಗು ಮರೆಯಾಗಿರಿಸಿ ಕರೆಯುತಿಹ ಕಣ್‌-ಸನ್ನೆ. ತುಂಬಿದೆದೆ, ನಳಿದೋಳು ಚೆಂದುಟಿಯ ರಸದ ಕೆನೆ ಒಗ್ಗೂಡಿ ನಿನ್ನಲ್ಲಿ ಚಲ್ವಿಕೆಯೆ ಮೈವೆತ್ತು ಚಣ ಚಣಕು ಚುಂಬಿಸಿದೆ ...

ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿ...

ಒಮ್ಮೆ, ಶಿಷ್ಯನೊಬ್ಬ ಗುರುಗಳಲ್ಲಿ ಬಂದು ಪೆಚ್ಚು ಮುಖ ಹಾಕಿಕೊಂಡು ಕುಳಿತ. ಶಿಷ್ಯನ ಮುಖವನ್ನು ನೋಡಿ ಅವನ ಮನದ ಕಲ್ಲೋಲವನ್ನು ಗಮನಿಸಿದ ಗುರುಗಳು- “ಶಿಷ್ಯಾ! ನಿನ್ನ ಕಾಡುತ್ತಿರುವ ವಿಷಯವೇನು?” ಎಂದರು. “ಗುರುಗಳೇ! ವನ ವನ ಸುತ್ತಾಡಿದೆ. ಕ...

ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ ಬಾರಿಸುವ ಜೇಗಟೆಯದನಿಗೆ ದೇವ! ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧ ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ ನಿಂದು ಉರಿಯುತಿಹ ನಂದಾದೀಪವು ಹರಿಸಲಾರದೆದೆಯಲಿಹ ಗ...

ಚಿಮ್ಮುತ ನಿರಿಯನು ಬನದಲಿ ಬಂದಳು ಬಿಂಕದ ಸಿಂಗಾರಿ; ಹೊಮ್ಮಿದ ಹಸುರಲಿ ಮೆರೆಯಿತು ಹಕ್ಕಿ ಕೊರಲಿನ ದನಿದೋರಿ. ಹೇಳೆಲೆ ಹಕ್ಕಿ, ಚೆಲುವನು ಸಿಕ್ಕಿ, ನನಗೆ ಮದುವೆಯೆಂದು? ಆಳಿಬ್ಬಿಬ್ಬರು ಕೇರಿಯ ಸುತ್ತಿ, ಹೆಗಲಲಿ ಹೊತ್ತಂದು! ಹಕ್ಕಿಯೇ ಹೇಳೈ, ಒಸಗೆಯ ...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...