ಸಿಹಿಸುದ್ದಿ

ಸಿಹಿಸುದ್ದಿ

ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು. ಕಲ್ಯಾಣಿಯನ್ನು ನೋಡಿ ಮುಗುಳು ನಕ್ಕರು. "ಏನ್ರಿ...
ಶಂಕರಯ್ಯನ ಸಂಸಾರ

ಶಂಕರಯ್ಯನ ಸಂಸಾರ

ತಮ್ಮ ಆಫೀಸಿನಲ್ಲಿ ಎಲ್ಲರೂ ಸೇರಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡಬೇಕೆಂದು ಆಚರಣೆಗೆ ತಂದವನು ಶಂಕರಯ್ಯ. ಆ ದಿನ ಲಕ್ಷ್ಮಿ ಪೂಜೆ, ಪ್ರಸಾದ ವಿನಿಯೋಗ ಇದೆಲ್ಲ ತನ್ನಿಂದಲೇ ಆಗಬೇಕು, ಲಕ್ಷ್ಮಿಯ ಮೇಲೆ ಅಂತಹ ಭಕ್ತಿ. ಬೇಸರಪಟ್ಟ...
ಬೈಸಿಕಲ್ಲು

ಬೈಸಿಕಲ್ಲು

ಅವನ ಬೈಸಿಕಲ್ಲಿಗೆ ಎಷ್ಟು ವರ್ಷವಾಗಿರಬಹುದೆಂದು ಅವನಿಗೂ ಸರಿಯಾಗಿ ಹೇಳಲು ಸಾಧ್ಯವಿರಲಿಲ್ಲ. ಅದಕ್ಕೆ ಪೈಂಟು ಇಲ್ಲದೆ ಅದೆಷ್ಟೋ ವರ್ಷಗಳು ಕಳೆದಿದ್ದವು. ಅದಕ್ಕೆ ಬೆಲ್ಲು ಇರಲಿಲ್ಲ. ಅದರ ಎಲ್ಲಾ ಭಾಗಗಳೂ ಹೊರಡಿಸುವ ಶಬ್ದದಿಂದಾಗಿ ಬೇರೆ ಬೆಲ್ಲಿನ ಅಗತ್ಯವಿರಲಿಲ್ಲ....
ಕಾದು ಕುಳಿತ ಪೆಣತಿನಿಗಳು

ಕಾದು ಕುಳಿತ ಪೆಣತಿನಿಗಳು

ಸುಮೋಗಾಡಿ ಮನೆ ಬಿಡುವಾಗ ಬೆಳಗಿನ ಯಾಮದ ಚುಮುಚುಮು ಚಳಿ ಇನ್ನೂ ಬಿಟ್ಟಿರಲಿಲ್ಲ. ವಿಹಾರ ಹೊರಟಿದ್ದ ನಮಗೆ ಚಳಿಯ ಅನುಭವದ ಸಂಭವವೇ ಇರಲಿಲ್ಲ. ಅಷ್ಟೊಂದು ಉಮೇದಿನಲ್ಲಿದ್ದೆವು. ರಸ್ತೆಯ ಎರಡೂ ಕಡೆಗಳಲ್ಲಿ ಹಸಿರಿನಿಂದ ತೊನೆಯುವ ಹೆಮ್ಮರಗಳನ್ನು ಹಿಂದೆ...
ಸುಡುಗಾಡು ಸಿದ್ದನ ಪ್ರಸಂಗ

ಸುಡುಗಾಡು ಸಿದ್ದನ ಪ್ರಸಂಗ

ಹೂವಿನ ಹಾರಗಳ ಗಮಗಮ ಊದುಕಡ್ಡಿಯ ಘಾಟು ಬೆಂಕಿಯಲ್ಲಿ ಉರಿದ ಕಟ್ಟಿಗೆಗಳ ಕಮರು ವಾಸನೆ ಸುಟ್ಟ ಹೆಣಗಳ ಕಮಟು ವಾಸನೆ ಬೂದಿಯ ಹಸಿಬಿಸಿ ವಾಸನೆ ಚೆಲ್ಲಾಡಿದ ತೆಂಗಿನಕಾಯಿ ನೀರಿನ ಮುಗ್ಗಲು ವಾಸನೆ ಸುಂಯ್ಯನೆ ಬೀಸುವ ಗಾಳಿ...
ಎಲ್ಲಿ ಹೋದನ್ರೀ ನಮ್ಮ ಹುಡುಗ?

ಎಲ್ಲಿ ಹೋದನ್ರೀ ನಮ್ಮ ಹುಡುಗ?

ಉಂಡು ಆಡುತ್ತಿದ್ದ ಮಗ, ಗೌರಮ್ಮನ ಮುದ್ದು ಮಗ, ಶಾಂತಪ್ಪನ ಕಿರೇಮಗ ಏಕಾ‌ಏಕಿ ಪರಾರಿ, ಎಲ್ಲಿ ಹೋದನ್ರೀ ನಮ್ಮ ಹುಡುಗ? ಎಲ್ಲಿ ಹೋದನ್ರೀ ನಮ್ಮ ಹುಡುಗ? ಇದೇ ಪ್ರಶ್ನೆ; ಇದೇ ಸಂಕಟ; ಇದೇ ಗೋಳು. ಶಾಂತವೀರಪ್ಪನಿಗೆ...
ನಿಂತವರು

ನಿಂತವರು

ಇಸರಪ್ಪನನ್ನು ಅಯ್ಯಾ ಅವರು ಬರಹೇಳಿದ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ, ಅವರಿಂದ ಮತ್ತೊಬ್ಬರಿಗೆ ಹೀಗೆ ಆ ಪುಟ್ಟ ಊರಲ್ಲಿ ಬಹಳ ಬೇಗ ಎಲ್ಲರಿಗೂ ತಿಳಿದು ಹೋಯಿತು. ನಾಲ್ಕು ದಿನಾ ರಜಾ ಹಾಕಿ ಊರಿಗೆ ಹೋಗಿ ಆಗ...
ಕರಾಮತ್ತು

ಕರಾಮತ್ತು

ಮೇಟಗಳ್ಳಿ ಬಸ್ ನಿಲುಗಡೆಯಲ್ಲಿ ನಿಂತ ನಗರ ಸಾರಿಗೆ ವಾಹನವನ್ನು ಏರಿದೆ. ಜನದಟ್ಟಣೆ ಇರದೆ ಪೀಠಗಳು ಬಿಕೋ ಎನ್ನುತ್ತಿದ್ದವು. ಊರಿಗೆ ಪ್ರಯಾಣಿಸಲು ಜಾಗ ಕಾಯ್ದಿರಿಸಲೋಸುಗ ಕೇಂದ್ರ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಚೀಟಿ ಪಡೆದು ಮೂರು ಪೀಠಗಳ ಆಸನದಲ್ಲಿ...
ಆಫೀಸಿನಲ್ಲೊಂದು ದಿನ

ಆಫೀಸಿನಲ್ಲೊಂದು ದಿನ

ಇಂದು ಕಛೇರಿಗೆ ಹಾಜರಾಗುವ ಮೊದಲ ದಿನ, ಈವತ್ತಿನಿಂದ ಸರ್ಕಾರಿ ನೌಕರನಾಗುವ ಸೌಭಾಗ್ಯ. ಇನ್ನು ೫೮ ವರ್ಷಗಳವರೆಗೆ ನಿಶ್ಚಿಂತೆ. ಅಂದರೆ ಚಿಂತೆಗಳೇ ಇಲ್ಲವೆಂದಲ್ಲ. ವಯಸ್ಸಾದ ಅಮ್ಮ - ಅಪ್ಪ, ಬೆಳೆದು ನಿಂತ ತಂಗಿಯರು ಬೇರೆ. ಅಮ್ಮ...
ಧನ್ವಂತರಿ

ಧನ್ವಂತರಿ

ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ ಗೆಳೆಯ ಬಸವರಾಜ್ ಬಿರಾದರ್‌ನ ಲಗ್ನಕ್ಕಾಗಿ ಕೆಂಭಾವಿಗೆ...