ನನ್ನ ಕಾದಲಳಿವಳು ನಿತ್ಯವಿಹಳೆನ್ನ ಸೂರ್‍ಯ ಅವಳನ್ನು ಸುತ್ತುತಿಹ, ನುತಿಸುತಿಹ ಪೃಥ್ವಿ ನಾನು! ನನ್ನ ಮನದನ್ನೆ ಕಲ್ಪದ್ರುಮದ ದಿವ್ಯ ಕುಸುಮ, ದೇವನಿಂದವಳನ್ನು ವಡದ ನೇಹಿಗ ನಾನು! ನಲ್ಲೆಯಿವಳೆನ್ನ ಕಣ್ಮನವ ತುಂಬಿರುವ ಬೆಳಕು, ಅವಳ ಕಾಂತಿಯನಿಳೆಗೆ ಬ...

ಮಳೆಯ ನಾಡಿಗೆ ಚಳಿಯ ನಾಡಿಗೆ ಹಸಿರ ಕಾಡಿಗೆ ಬಂದೆನೆ ಹೂವು ಹೂವಿಗೆ ದುಂಬಿ ದುಂಬಿಗೆ ಮುತ್ತು ಕೊಡುವುದ ಕಂಡೆನೆ ಚಿತ್ರ ಚಲುವಿಯ ಕಂಡೆನೆ || ನೀಲ ಗಗನದಿ ಮೇಘ ಮಯೂರಿ ಕುಣಿವ ರಾಸವ ಸವಿದೆನೆ ಒಣಗಿ ಹೋದಾ ಕಣ್ಣ ಹೊಂಡದಿ ಬಣ್ಣ ತುಂಬಿಸಿ ನಲಿದೆನೆ ಕಣ್ಣ...

ಸಾಲು ಸಾಲು ಅತ್ಯಾಚಾರಗಳ ಸುದ್ದಿ ದಿನವೂ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಹೊತ್ತಿನಲ್ಲಿ ಕನ್ನಡದ ಎರಡು ಕತೆಗಳು ಅತ್ಯಾಚಾರವನ್ನು ಕುರಿತು ಚಿತ್ರಿಸಿದ್ದು ನೆನಪಾಗುತ್ತಲಿದೆ. ಚಿತ್ತಾಲರ ‘ಆಬೊಲಿನಾ’ ಹಾಗು ಪೂರ್ಣಚಂದ್ರ ತೇಜಸ್...

‘ಸುಲಿದಿದ್ ಬಾಳೇ ಅಣ್ ಇದ್ದಂಗೆ ತಲೆ ಮೇಗೌನೆ ಚಂದ್ರ!’ ‘ಮುಡಿಸೋಕ್ ಮಡಗಿದ್ ಮಲ್ಗೆ ದಂಡೆ ಇದ್ದಂಗೌನೆ ಚಂದ್ರ!’ ೧ ’ರತ್ನನ್ಗ್ ಅದನೆ ತಿನ್ನೀಸ್ತಿದ್ದೆ ಕೈಗಾರ್ ಎಟಕಿಸ್ತಿದ್ರೆ!’ ‘ನಂಜೀಗ್ ಅದನೆ ಮುಡಿಸ್ತಾನಿದ್ದೆ ಕೈಗಾರ್‌ ಎಟಕಿಸ್ತಿದ್ರೆ!’ ೨ *...

ಕಣ್ಣ ಕಾಣ್ಕೆಯ ಮೀರಿ, ಕಣ್ಣ ಕಟ್ಟಿದ ರೂಹೆ! ಬಣ್ಣನೆಯ ಬಣ್ಣಕೂ ಸಿಗದೆ ನೀನು; ಹುಟ್ಟುಕಟ್ಟನು ಹರಿದು, ಹಾರುತಿರುವೀ ಊಹೆ, ಬರೆಯಲಿಕೆ ನಿನ್ನನ್ನೆ ಹವಣಿಸುವದೇನು? ಲಹರಿಗೂ ತರಲ, ನೀ ನೆರಳಿಗೂ ವಿರಲ, ಸುಳಿ- ಯೆಲರಿಗೂ ಚಂಚಲನು ಇರುವೆಯಂತೆ- ಬರುವಾಗ ...

ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು “ಸತ್ಯದ ವಿಳಾಸ ನಿಮಗೆ ಗೊತ್ತೇ?” ಎಂದ. “ನನಗೆ ಹಲವು ವಿಳಾಸಗಳು ಗೊತ್ತು, ಅದನ್ನು ಬೇಕಾದರೆ ಹೇಳುತ್ತೇನೆ. ಅದನ್ನು ಹಿಡಿದು ನೀ ಸತ್ಯವನ್ನು ಹುಡುಕು” ಎಂದರು ಗುರುಗಳು. “ಹೇಳ...

ಶಾಲೆಯೊಳೋದಿ ತೆಗೆವುನ್ನತದಂಕಗಳೇ? ನಲಿದುಲಿವಂತೆ ರಸಿಕರನೆಳೆವ ಕಲೆಯೇ? ಒಲ್ಲೆನೆನುವವರನೊಪ್ಪಿಸುವಕ್ಷರ ಗ್ರಂಥಂಗಳೇ? ಮೆಲ್ಲನಪ್ಪುದಕೆ ಆವೇಗವನೀವ ಯಂತ್ರಾಯುಧಂಗಳೇ? ಶೀಲ ಸೌಖ್ಯವದು ಸೃಷ್ಟಿಯೊಡಗೂಡಿ ಉಂಬಕಲೆಯು – ವಿಜ್ಞಾನೇಶ್ವರಾ *****...

ಚಂದ್ರ ಮೊಕಿ ಮಲ್ಲಿಗೇ ಉದ್ರೇನಮ್ಮ ಅಂಗಳಕೇ ಚದ್ರ್ಯವರು ಚಂಡಾಡೀ ಬರುವಗೇ || ಮಲ್ಲುಗೆ ಉದ್ರೆ ನನ ಸಾಲೀ ಸೆರಗೀಗೆ ***** ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕ...

ಬರೆದವರು: Thomas Hardy / Tess of the d’Urbervilles ಬುಧವಾರ ಬೆಳಗಾಗುವುದರೊಳಗಾಗಿ ನಾಯಕನು ಎದ್ದು ಸ್ನಾನ ಶಿವಪೂಜೆಗಳನ್ನು ಮುಗಿಸಿದ್ದನು. ಅವನು ಉಪಾಹಾರ ಕಾಲದಲ್ಲಿ ಮಗ್ಗುಲಲ್ಲಿ ಮಲ್ಲಿಯಿದ್ದಾಳೆಯೇ ಎಂದು ತಿರುಗಿ ನೋಡಿದನು. ವಿಚಾ...

ಯಶೋಧೆ ಕಂದ ರಾಧೆ ಗೋವಿಂದ ತೋರು ನಿನ್ನ ದಿವ್ಯರೂಪ ನನ್ನ ಬಾಳಿನಲಿ ನೀನೊಮ್ಮೆ ಬಂದು ಕಳೆಯೋ ಎನ್ನ ಕರ್‍ಮಗಳ ಪಾಪ ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ ನನ್ನ ನಿಜ ಸ್ವರೂಪ ಕಳೆದಿರುವೆ ಇಂದಿನ ಬಾಳು ವಿಶ್ವಾಸ ವಿಲ್ಲದಿದ್ದರೂ ನಾಳಿನ ಕನಸುಗಳ ಅಳೆದಿ...

1...3839404142...110

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....