ಯಶೋಧೆ ಕಂದ ರಾಧೆ ಗೋವಿಂದ
ತೋರು ನಿನ್ನ ದಿವ್ಯರೂಪ
ನನ್ನ ಬಾಳಿನಲಿ ನೀನೊಮ್ಮೆ ಬಂದು
ಕಳೆಯೋ ಎನ್ನ ಕರ್‍ಮಗಳ ಪಾಪ
ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ
ನನ್ನ ನಿಜ ಸ್ವರೂಪ ಕಳೆದಿರುವೆ
ಇಂದಿನ ಬಾಳು ವಿಶ್ವಾಸ ವಿಲ್ಲದಿದ್ದರೂ
ನಾಳಿನ ಕನಸುಗಳ ಅಳೆದಿರುವೆ
ನನ್ನ ಅಂತಃಕರಳು ಕರಗಿದೆ ದೇವ
ಕಂಗಳ ನೀರು ಧಾರೆಯಾಗಿವೆ
ಆದರೆ ನಿನ್ನ ಸಾಮಿಪ್ಯವಿಲ್ಲದಿರೆ
ನನ್ನ ಭಾವಗಳು ನೀರಸವಾಗಿವೆ
ನಿನ್ನ ಲೀಲೆಗೆ ಕೊನೆ ಎಲ್ಲಿ ಕೃಷ್ಣ
ಪಾರ್‍ಥ ಸಾರಥಿ ನೀನಾದೆ ರಂಗ
ಗೀತೆಯಿಂದ ಜಗವ ಬೆಳಗಿದೆ
ಮಾಣಿಕ್ಯ ವಿಠಲನಾಗಲಿ ಜನಾಂಗ
*****