ಬರೆದವರು: Thomas Hardy / Tess of the d’Urbervilles
ಬುಧವಾರ ಬೆಳಗಾಗುವುದರೊಳಗಾಗಿ ನಾಯಕನು ಎದ್ದು ಸ್ನಾನ ಶಿವಪೂಜೆಗಳನ್ನು ಮುಗಿಸಿದ್ದನು. ಅವನು ಉಪಾಹಾರ ಕಾಲದಲ್ಲಿ ಮಗ್ಗುಲಲ್ಲಿ ಮಲ್ಲಿಯಿದ್ದಾಳೆಯೇ ಎಂದು ತಿರುಗಿ ನೋಡಿದನು. ವಿಚಾ ರಿಸಿದನು. ‘ಇನ್ನೂ ಎದ್ದಿಲ್ಲ’ ಎಂದು ವರದಿಬಂತು. ‘ಹೋಗಿ ಕರೆದುಕೊಂಡು ಬಾ’ ಎಂದು ಅಪ್ಪಣೆಯಾಯಿತು. ಮಲ್ಲಿಯು ಎದ್ದು ಮೊಕ ತೊಳೆದುಕೊಂಡು ಜಪಕ್ಕೆ ನಾಯಕನು ತನ್ನ ತಟ್ಟೆಯಿಂದಲೇ ಒಂದು ದೋಸೆ, ಒಂದು ನಿಂಬೇಕಾಯಿಗಾತ್ರ ಬೆಣ್ಣೆ, ಒಂದು ಅಷ್ಟು ಚೆಟ್ನಿ ತೆಗೆದು . ಇದು ತಿಂದುಬಿಟ್ಟು ಹೋಗಿ ಮಲಗಿಕೊ ‘ ಎಂದು ಹೇಳಿ ಅವಳಿಗೆ ಕೊಟ್ಟನು. ತಾನೂ ದಿನಕ್ಕಿಂತ ಕೊಂಚ ಹೆಚ್ಚಾಗಿ ತಿಂದು, ಹೊರಟನು.
ನಿಯತಕಾಲಕ್ಕೆ ಪಾರ್ಟಿಯು ಬೇಟೆಗೆ ಹೊರಟಿತು. ಅನೆ ಕಟ್ಟುವ ಪೂಲ್ ಖಾನೆಯಿಂದ ಸುಮಾರು ಎರಡು ಮೂರು ಮೈಲಿ ಪಶ್ಚಿಮಕ್ಕೆ ಕಪಿಲಾ ನದಿಯ ಮಗ್ಗುಲಲ್ಲಿ ಒಂದು ತಗ್ಗು. ಬೆಟ್ಟ ನದಿಯ ಆಚೆ ಮೇಲಕ್ಕೆ ಎದ್ದಿದೆ. ಇತ್ತಕಡೆ ಕೊನ್ನಾರಿಗೆಡ್ಡೆ ಹೆಬ್ಬೆರಳುಗಾತ್ರ ಬೆಳೆಯುವ ಮರಳುಭೂಮಿ. ನದಿಯಲ್ಲಿ ಆಳುದ್ದ ನೀರು ಬಂದರೆ, ಅಲ್ಲಿ ಮಂಡಿಉದ್ದ ನೀರು ನಿಲ್ಲುವುದು. ಅದಕ್ಕೆ ಹಂದಿಯ ಕಣಿವೆ ಎಂದೇ ಹೆಸರಂತೆ ಹಿಂದೆ. ಅಲ್ಲಿಗೆ ಪಾರ್ಟಿಯು ಕುದುರೆಯಮೇಲೆ ಹೋಯಿತು.
ಇಪ್ಪತ್ತು ಇಪ್ಪತ್ತೈದು ಎಕರೆಯಗಲದ ಒಂದು ಬೀಡು ಅಥವಾ ಹುಲ್ಲು ಬೆಳೆದ ಹಾಳು. ಬೆಟ್ಟದ ಮೇಲಿಂದ ಅಲ್ಲಿಗೆ ಇಳಿಯ ಬೇಕು. ಬೆಟ್ಟದ ಮಗ್ಗುಲಿನ ಇಳಿಜಾರಿನಲ್ಲಿ ಒಂದೊಂದು ಭಾರಿಯ ಮರ. ಚೆನ್ನಾಗಿ ಗುತ್ತಿಕಟ್ಟಿಕೊಂಡು ಮರೆಯಾಗಿ ಕುಳಿತುಕೊಳ್ಳು ವುದಕ್ಕೆ ಅನುಕೂಲವಾಗಿದೆ. ಹಿಂದಿನ ದಿನವೇ ಅರಣ್ಯದ ಇಲಾಖೆ ಯವರು ಹೋಗಿ, ಅಲ್ಲಿ ಪಾರ್ಟಿಯನರು ಕುಳಿತುಕೊಳ್ಳುವುದಕ್ಕೆ ಬೇಕಾದ ಅಟ್ಟಗಳನ್ನು ಕಟ್ಟ ದಿಂಬು ಮೆತ್ತೆ ಎಲ್ಲಾ ಹಾಕಿ ಬಂದಿದಾರೆ. ಮುಂದೆ ಬೇಟೆಯ ಮೈದಾನದಲ್ಲೂ ಹುಲ್ಲುಗಿಲ್ಲು ಕಿತ್ತು ಕುದುರೆಯ ವೈಹಾಳಿಗೆ ಅನುಕೂಲ ಮಾಡಿದ್ದಾರೆ. ಎದುರಿಗೆ ಮೈದಾನದಲ್ಲಿ ದೂರದಲ್ಲಿ ಬೆಳೆದಿರುವ ಹುಲ್ಲಿನ ನಡುವೆ ಏನೋ ಓಡಾಡುತ್ತಿರುವಂತೆ ಕಾಣುತ್ತಿದೆ.
ಬೆಟ್ಟದ ಮೇಲಿನವರೆಗೂ ಕುಡುರೆಯಮೇಲೆ ಬಂದು ಪಾರ್ಟಯು ತಮ್ಮ ತಮ್ಮ ಆಸನಗಳಲ್ಲಿ ಕುಳಿತರು. ನಾಯಕನ ಆಳುಗಳು ಚರ್ಮದ ಬೂಟುಗಳನ್ನು ಧರಿಸಿ ತಮ್ಮ ಆಯುಧಗಳ ಜೊತೆಗೆ ನಾಯಕನ ಆಯುಧಗಳನ್ನು ತೆಗೆದುಕೊಂಡು ಬಂದರು. ನಾಯಕನ ರಾಣಿಯು ಆಗಲೇ ಬಂದು ಅಲ್ಲಿ ಹುಲ್ಲುಮೇಯುತ್ತಾ ನಿಂತಿತ್ತು.
ನಾಯಕನು ಕುದುರೆಯನ್ನು ಹತ್ತಿ, ತನ್ನ ಭಲ್ಲೆಯ ತೆಗೆದು ಕೊಂಡನು. ಮಗ್ಗುಲಲ್ಲಿ ಹಲಗೆಕತ್ತಿ ಒರೆಯಲ್ಲಿ ನೇತಾಡುತ್ತಿತ್ತು. ಅದರ ಮಗ್ಗುಲಲ್ಲಿಯೇ ಒಂದು ಭಾರಿಯ ಗುರಾಣಿ. ಹಿಂದುಗಡೆ ಜೀನಿನ ಮಗ್ಗುಲಲ್ಲಿ ಒಂದು ಚರ್ಮದ ಹಗ್ಗ. ನಡುವಿನಲ್ಲಿ ಬೆಲ್ಟ್ನ ಹಾಗೆ ಸುತ್ತಿಕೊಂಡಿರುವ ಪಟ್ಲಾಕತ್ತಿ. ತಲೆಯಮೇಲೆ ರುಮಾಲಿನ ಮೇಲಿನಿಂದ ಬಿಗಿದು ಕಟ್ಟಿಕೊಂಡಿರುವ ಕೇಶಿಮೆಯವಸ್ತ್ರ. ಕಾಲಿಗೆ ಫುಲ್ಬೂಟ್. ಕೈಗೆ ಚರ್ಮದ ಚೀಲ.
ಪಾರ್ಟಿಯವರೆಲ್ಲರೂ ಸುಖಾಸೀನರಾಗಿದ್ದಾರೆಂದು ಆದಮೇಲೆ ಒಂದು ಸಿಳ್ಳು ಕೇಳಿಸಿತು. ನಾಯಕನು ಹಿಂತಿರುಗಿ ನೋಡಿ ಮಹಾ ರಾಜರಿಗೆ ಕೈಯೆತ್ತಿ ಸಲಾಂಮಾಡಿ, ಕುದುರೆಯನ್ನು ಚಮಕಾಯ ಸಿದನು. ಕುದುರೆಯು ಮೈದಾನಕ್ಕೆ ಇಳಿಯಿತು. ಆಳೊಬ್ಬನು ಬಂದು ಏನೋ ಘುರ್ ಘುರ್ ಎಂದು ಸದ್ದು ಮಾಡಿದನು. ಎದುರು ಗಡೆ ಒಂದು ಭಾರಿಯ ಹಂದಿಯು ತಲೆಯೆತ್ತಿ ನೋಡಿತು. ಹಿಂದಿನಿಂದ ಒಬ್ಬ ಕುದುರೆಯವನು ಸರ್ ಎಂದು ಬಂದು ಅದನ್ನು ದೊಣ್ಣೆಯಿಂದ ತಿವಿದು ಮುಂದೆ ಓಡಿಹೋದನು. ಹಂದಿಯು ಘುರ್ ಘುರ್ ಎನ್ನುತ್ತಾ ಒಂದು ಸೆಕೆಂಡ್ ಅವನನ್ನು ನೋಡುತ್ತಿದ್ದು ಅವನನ್ನು ಅಟ್ಟಿಕೊಂಡು ಓಡಿತು. ಅವನು ಬೇಟೆಯ ಮೈದಾನಕ್ಕೆ ಬಂದು ಬೆಟ್ಟ ಹತ್ತಿ ಮರಗಳ ಗುತ್ತಿಯೊಂದರಲ್ಲಿ ಮರೆಯಾದನು.
ಹಂದಿಯು ಅವನನ್ನು ನೋಡುತ್ತ ನುಗ್ಗುತ್ತಿದೆ. ದಾರಿಯಲ್ಲಿ ನಾಯಕನು ಕುದುರೆಯ ಮೇಲೆ ಇದ್ದವನು ಮುಂದೆ ನುಗ್ಗಿ ಅದನ್ನು ಅಡ್ಡ ಹಾಯ್ದನು. ಹಂದಿಯು ಮೊದಲು ಹೋಗುತ್ತಿದ್ದ ದಾರಿ ಬಿಟ್ಟು ನಾಯಕನ ಕಡೆ ತಿರುಗಿತು. ಓಡಿದಂತೆ ಓಡುತ್ತಿದ್ದ ಕುದುರೆಯನ್ನು ತಟ್ಟನೆ ಹಿಂಗಾಲು ಮೇಲೆ ನಿಲ್ಲಿಸಿ ಕುದುರೆಯನ್ನು ತಿರುಗಿಸಿದನು. ಹಂದಿಯು ಮೊಕಾಮೊಕಿಯಾಗಿ ಬಂದಿದೆ. ಇನ್ನೊಂದೇ ಗಜ. ನುಗ್ಗುತ್ತಿರುವ ಹಂದಿ ನೇರವಾಗಿ ನುಗ್ಗಿದರೆ ಕುದುರೆಯ ಹಿಂಗಾಲುಗಳ ನಡುವೆಯೇ ನುಗ್ಗಬೇಕು.
ಅಷ್ಟರಲ್ಲಿ ‘ಜಯಶಂಕರ್’ ಎಂಬ ಧ್ವನಿ, ಕೂಗು, ಆರ್ಭಟ, ಮೊಳಗಿತು ಕಿಬ್ಬದಿ, ಕಿನಾರಿ, ನದಿ, ಬೆಟ್ಟ ಎಲ್ಲವೂ ಆ ಕೂಗಿಗೆ ಮರು ಕೂಗು ಕೊಟ್ಟವು. ಕುದುರೆಯ ಸವಾರನು ತನ್ನ ಭಲ್ಲೆಯದ ಕೆಳತುದಿಯಿಂದ ಹಂದಿಯನ್ನು ತಿವಿದನು. ಓಡುತ್ತಿದ್ದ ಹಂದಿ ಮಗ್ಗುಲಾಗಿ ಬಿತ್ತು. ಅದು ಮತ್ತೆ ಏಳುವುದರೊಳಗಾಗಿ. ಇನ್ನೊಂದು ಗುಡುಗಿನಂತಹ ‘ಜಯಶಂಕರ್’. ಅದರ ಪ್ರತಿ ಧ್ವನಿ ಮೊಳಗುವುದ ರೊಳಗಾಗಿ ನಾಯಕನು ಹಂದಿಯನ್ನು ಭಲ್ಲೆಯಿಂದ ಇರಿದಿದ್ದಾನೆ.
ಭಲ್ಲೆಯು ಹಂದಿಯ ಹೊಟ್ಟೆಯನ್ನು ತೂತು ಕೊರೆದುಕೊಂಡು ಹೋಗಿ ನೆಲದಲ್ಲಿ ಹೊತು ಕೊಂಡಿದೆ. ಹಂದಿಯು ಮೇಲಕ್ಕೆ ಏಳುವುದಕ್ಕೆ ಭಯಂಕರ ವಾದ ಪ್ರಯತ್ನ ಎರಡು ಸಲ ಮಾಡಿ, ಏಳಲಾರದೆ ತಲೆ ಕೆಳಕ್ಕೆ ಹಾಕಿತು.
ಮತ್ತೊಂದು ಅಷ್ಟೇ ಭಾರಿಯ ಹಂದಿ, ಆ ಮೈದಾನದ ಆಚಿನ ಹುಲ್ಲುಗಾವಲಿನ ಅಂಚಿನಲ್ಲಿ ಬಂದು ನಿಂತಿದೆ. ನೋಡಿದರೆ, “ಆಗಲಿ, ಆ ಹಂದಿಯ ಬೇಟೆ ಆದಮೇಲೆ ನುಗ್ಗೋಣ” ಎಂದುಕೊಂಡೇ ನಿಂತಿರುವಂತಿದೆ. ನಾಯಕನು ಅದನ್ನು ಕಂಚು ಕುದುರೆಯನ್ನು ಅತ್ತ ತಿರುಗಿಸಿದರು. ಹಂದಿಯು ಲಕ್ಷ್ಮವಿಲ್ಲದೆ ನಿಂತಿದೆ. ಕುದುರೆಯು ಬಳಿಯಲ್ಲಿಯೇ ಹಾದು ಹೋಯಿತು. ನಾಯಕನು ಅದು ಯಾವ ಮಾಯೆಯಲ್ಲಿ ಚರ್ಮದ ಹಗ್ಗ ಬಿಚ್ಚಿದನೋ, ಅದು ಯಾವ ಮಾಯೆಯಲ್ಲಿ ಅದನ್ನು ತಿರುಗಿಸಿದನೋ,–ಅಂತೂ ಏನೋ ತಿರುಗುತ್ತಿ ದ್ದುದು ಕಾಣಿಸುತ್ತಿತ್ತು – ಅದು ಯಾವ ಮಾಯೆಯಿಂದ ಅದನ್ನು ಪ್ರಯೋಗಿಸಿದನೋ ಯಾರಿಗೂ ತಿಳಿಯಲಿಲ್ಲ. ಅಂತೂ ಇನ್ನೊಂದು ಗಳಿಗೆಯೊಳಗಾಗಿ ಹಂದಿ ಪಾಶಕ್ಕೆ ಸಿಕ್ಕಿದೆ. ಅಷ್ಟೇ ಅಲ್ಲ. ಕುದುರೆಯು ಇನ್ನೂ ಎರಡು ಹೆಜ್ಜೆ ಮುಂದಿಡುವುದರೊಳಗಾಗಿ ಆ ಚರ್ಮದ ಹಗ್ಗದ ಎಳೆತಕ್ಕೆ ಸಿಕ್ಕಿ, ಒದ್ದಾಡುತ್ತ ಮೇಲಕ್ಕೆ ಹಾರಿ ಹಿಂಗಣ್ಣು ಹೊಡೆದ ಧೀರನಂತೆ ಹಾರಿ ನೆಲದ ಮೇಲೆ ಬಿದ್ದಿದೆ. ಅದು ಒದ್ದಾಡಿ ಕೊಂಡು ಮೇಲಕ್ಕೆ ಏಳುವುದೆರೊಳಗಾಗಿ ಕುದುರೆಯ ಮೇಲಿನ ಸವಾರ ಹಿಂತಿರುಗಿ ಬಂದು ತಾನು ಹಿಡಿದಿದ್ದ ಹಗ್ಗ ಅದರ ಮೇಲೆ ಎಸೆದು ಮುಂದಕ್ಕೋಡಿದ್ದಾನೆ. ಹಂದಿಯು ಯದ್ವಾತದ್ವಾ ರೇಗಿ ಕುದುರೆಯ ಕಡೆ ಓಡುತ್ತಿದೆ. ಒಂದು ನೂರು ಗಜ ಅದೂ ಕುದುರೆ ಯನ್ನು ಓಡಿಸಿಕೊಂಡು ಬಂದಿದೆ. ಆಗ ಕುದುರೆ ಮೇಲಕ್ಕೆ ನೆಗೆಯಿತು. ಹಂದಿ ಮುಂದಾಯಿತು. ಕುದುರೆ ಕೆಳಕ್ಕಿಳಿದು ಹಂದಿಯನ್ನು ಅಟ್ಟಿಸಿ ಕೊಂಡು ಓಡಿತು. ಕುದುರೆಯ ಮೇಲಿದ್ದ ಆಳು ಬಗ್ಗಿದನು. ಕುದುರೆಯೊ ನೆಲವನ್ನು ಮುಟ್ಟುವಂತೆ ಬೆನ್ನು ಬಗ್ಗಿಸಿತು. ಅದು ವ ಮಾಯೆಯಲ್ಲೊ ನಾಯಕನ ನಡುವಿನಲ್ಲಿದ್ದ ಪಟ್ಟಾ ಕತ್ತಿ ಈಚೆಗೆ ಬಂದಿತ್ತು: ಆ ಕೈ ಅದನ್ನು ಯಾವ ಮಾಯೆಯಲ್ಲಿ ಸೆಳೆದಿತ್ತೋ ಅದೇ ಮಾಯೆಯಲ್ಲಿ ಝಳಪಿಸಿ, ಅದೇ ಮಾಯೆಯಲ್ಲಿ ಹಂದಿಯನ್ನು ಹೊಡೆಯಿತು. ರೆಪ್ಪೆ ಮುಚ್ಚುವುದರೊಳಗಾಗಿ ಹಂದಿ ಎರಡು ಪಾಲಾಗಿತ್ತು. ಮುಂದಿನ ಪಾಲು ಕುದುರೆಯೊಡನೆ ಓಡಲು ಹಾರಿತು : ಹಿಂದಿನ ಪಾಲು ಧೊಪ್ಪನೆ ಬಿತ್ತು.
ಅಟ್ಟದಮೇಲೆ ಕುಳಿತಿದ್ದ ರಾಜಕುಮಾರನು ‘ ಫೈನ್, ಫೈನ್! ಎಕ್ಸೆಲೆಂಟ್’ ಎಂದು ಕೂಗಿಯೇ ಬಿಟ್ಟನು. ಮಹಾರಾಜರು ಎಲ್ಲಿ ಎದ್ದು ಬಿಡುವನೋ ಎಂದು ಅವನನ್ನು ತಡೆದು, ‘ಇನ್ನೂ ಒಂದು ಇದೆ’ ಎಂದರು. ಆತನೂ ‘ ಹೌದು! ಹಾದು ! ‘ ಎಂದು ಕುಳಿತನು.
ಆ ವೇಳೆಗೆ ನಾಯಕನು ಕುದುರೆಯಿಂದ ಇಳಿದಿದ್ದನು. ಅವನ ಜೊತೆಯಲ್ಲಿಯೇ ಹಲಗೆಕತ್ತಿ ಗುರಾಣಿಯೂ ಕುದುರೆಯಿಂದ ಇಳಿ ದಿದ್ದುವು. ಮೂರನೆಯ ಹಂದಿಯನ್ನು ಮೃತ್ಯುವೇ ಕರೆತಂದಿತು ಎಂಬಂತೆ ಆಗಿ, ಅದು ಗದ್ದಲವೇನು ನೋಡುವುದಕ್ಕೆಂದು ಬಂದು, ಇಬ್ಬರು ಸಜಾತೀಯರ ಮರಣದಿಂದ ರೇಗಿ ಅವರ ಸೇಡು ತೀರಿಸಿ ಕೊಳ್ಳುವುದಕ್ಕೆ ಬರುತ್ತಿರುವಂತೆ ರೋಷಾವೇಶದಿಂದ ನುಗ್ಗಿತು. ನಾಯ ಕನು ವಿಚಿತ್ರವಾಗಿ ಭಯಂಕರವಾಗಿ ಅಬ್ಬರಿಸುತ್ತಾ ಅದಕ್ಕೆದುರು ನುಗ್ಗಿದನು. ಆಗ ಅವನನ್ನು ನೋಡಿದರೆ, ಭಯಂಕರನಾದ ರಾಕ್ಷಸನೋ ಎಂಬಂತಿತ್ತು. ಆ ಕೂಗು, ಆ ಆಕಾರ, ಎರಡೂ ಅಮಾನುಷ! ಅವನು ಕಾಲಿಟ್ಟಕಡೆ ಭೂಮಿ ಜಗ್ಗುವಂತಿದೆ. ನೋಡುತ್ತಿದ್ದವರಿಗೆ ಭಯವಾಗುತ್ತಿದೆ.
ಹಂದಿಯು ಘುರ್ಘುರ್ ಎಂದು ಮೊರೆಯುತ್ತಾ ಮುನ್ನುಗ್ಲಿತು. ಮನುಷ್ಯನಲ್ಲ, ಒಂದು ಆನೆ ಎದುರಿಗೆ ಇದ್ದರೂ ರೋಷಭೀಷಣವಾದ ಆ ಹಂದಿಯ ನುಗ್ಗಾಟ ಕಂಡು ಕಿರಿಚಿಕೊಳ್ಳಬೇಕು. ಹಾಗಿರುವಾಗ ಮನುಷ್ಯನು ವೀರಭದ್ರನ ಹೆಜ್ಜೆ ಹಾಕಿಕೊಂಡು ಹಲಗೆ ಕತ್ತಿಯನ್ನೂ ಗುರಾಣಿಯನ್ನೂ ಝಳಪಿಸುತ್ತಾ ಸಿಂಹನಾದಮಾಡುತ್ತ ಮುಂದರಿಯಂ ತ್ತಿದಾನೆ. ಹಂದಿಯ ಸದ್ದು ಮನುಷ್ಯನ ಆರ್ಭಟದಲ್ಲಿ ಮುಚ್ಚಿ ಹೋಗಿದೆ. ಎದುರುಗಡೆಯ ಬೆಟ್ಟವೂ ಸಿಂಹನಾದ ಮಾಡುತ್ತಿದೆಯೋ ಎಂಬಂತೆ ಮಾರ್ದನಿ ಮೊಳಗುತ್ತಿದೆ. ಹಂದಿಯು ಬಂತು. ಮಾನವ ಅದನ್ನು ಎದುರಿಸಿದ. ಅದರಂತೆಯೇ ಬಗ್ಗಿ ಅದರ ಮುಸಡಿಯ ಕೆಳಗೆ ಗುರಾಣಿಯನ್ನು ಚುಚಿ ಮೇಲಕ್ಕೆತ್ತಿದ. ಅದರ ಮುಸಡಿ ಇರಲಿ, ಹಂದಿಯೇ ಮೇಲೆದ್ದು ಹಿಂಗಾಲಿನಮೇಲೆ ನಿಂತಿತು. ಮನುಷ್ಯ ಅತಿ ಮಾನವನಾಗಿ,ದೂರದಲ್ಲಿರುವವರ ಎದೆಯೂ ನಡುಗುನಂತೆ ಭಯಂಕರ ವಾಗಿ ಜಯಶಂಕರ್ ಎಂಡು ಕೂಗುತ್ತಾ ಹಂದಿಯನ್ನು ತಳ್ಳಿಕೊಂಡು ಹೊರಟ. ಹಂದಿ ಮೊದಲೇ ಓಡುತ್ತಿದ್ದುದು ಈಗ ಭೀಮಬಲದಿಂದ ತಳ್ಳಿಸಿಕೊಳ್ಳುತ್ತಾ ಏನು ನಿಂತೀತು? ಹಿಂದಕ್ಕೆ ಬಿತ್ತು.
ಮನುಷ್ಯನು ತನ್ನ ಮನುಷ್ಯತ್ವವನ್ನು ಬಿಟ್ಟು ಮೃಗಕ್ಕೂ ಮೀರಿದ ಅತಿಮಗವಾದನೋ ಎಂಬಂತೆ ಹಾರಿ ಜಯಶಂಕರ್ ಎಂದು ಅದರ ಹೊಟ್ಟೆಯನ್ನು ಮೆಟ್ಟಿ ಮುಂದಕ್ಕೆ ಹಾರಿ ಹೊರಟುಹೋದ. ಹಂದಿಯು ಪದಾಘಾತವನ್ನು ತಡೆಯಲಾರದೆ ಮಿಲಮಿಲನೆ ಒಂದು ಗಳಿಗೆ ಒದ್ದಾಡಿ ಮೇಲಕ್ಕೆ ಏಳುವುದಕ್ಕೆ ಹೋಯಿತು. ಮತ್ತೆ ಮಾನವಮೃಗವು ಬಂದು ಅದರ ಪಕ್ಕೆಯಲ್ಲಿ ಒದೆಯಿತು. ಅದು ಮತ್ತೆ ಬಿತ್ತು. ಮತ್ತೆ ಅದೇ ರಾಕ್ಷಸ ಪದಾಘಾತ. ಮತ್ತೆ ಅದನ್ನು ತಡೆಯಲಾರದ ಮೃಗದ ಒದ್ದಾಟ, ಮತ್ತೆ ಅದು ಸಾಹೆಸಮಾಡಿ ಎದ್ದಿದೆ. ನೋವಿನಿಂದ ಅಳ್ಳೆಗಳು ತಿದಿಗಳಂತೆ ಆಡುತ್ತಿವೆ. ಆದರೂ ಅದರ ಹಟ, ಎದ್ದು ಮತ್ತೆ ಎದುರಾಳಿಯಮೇಲೆ ನುಗ್ಗುತ್ತದೆ. ಆ ಎದುರಾಳಿ ಈ ಸಲ ಇನ್ನೂ ಭಯಂಕರವಾಗಿ ಕೂಗುತ್ತಾ, ಘುರಾಯಿಸಿಕೊಂಡು ಬರುತ್ತಿ ರುವ ಆ ಭಾರಿಯ ಹಂದಿಯನ್ನು ಗುರಾಣಿಯಿಂದ ಮುಸುಡಿಗೆ ತಿವಿದಿದ್ದಾನೆ. ಅದು ಅತ್ತಕಡೆ ಆ ತಿವಿತದಿಂದ ತಿರುಗಿದೆ. ಹಲಗೆ ಕತ್ತಿಯು ಜಯಶಂಕರ್ ಕೂಗಿನೊಡನೆ ಕೆಳಕ್ಕೆ ಇಳಿಯಿತು. ಹಂದಿಯ ಕತ್ತು ಹಾರಿಹೋಯಿತು, ಮುಂಡವು ಬಿಸಿರಕ್ತವು ಚಿಲ್ಲನೆ ಹಾರುತ್ತಿರಲು ಅಷು ದೂರ ಹೋಗಿ ಉರುಳಿತು…
ಮರಗಳಲ್ಲಿದ್ದವರು ತಾವು ಎಲ್ಲಿರುವೆವು ಏನು ಎಂಬ ಯೋಚನೆಯೇ ಇಲ್ಲದೆ ಕೈ ಚಪ್ಪಾಳೆಯಿಕ್ಕಿ ಕೂಗಿಬಿಟ್ಟರು. ನಾಯಕನು ಹೋಗಿ ಮೂರು ಹಂದಿಗಳಿಗೂ ಪ್ರತಿಯೋದ್ದರಿಗೆ ಮಾಡುವಂತೆ ಸಲಾಂ ಮಾಡಿ, ಅವುಗಳ ರಕ್ತದೊಳಕ್ಕೆ ಬೆರಳದ್ದಿ ರುಚಿನೋಡುವಂತೆ, ನಾಲಗೆಯ ಮೇಲಿಟ್ಟು, ಮುಂದೆ ಬಂದನು.
ರಾಕ್ಷಸನು ಮಾನವನಾಗಿದ್ದನು. ಉಗ್ರತೆಯು ಮಾಯವಾಗಿ ಶಾಂತತೆಯು ಮುಖದಲ್ಲಿ ಮೂಡಿ, ನಗುವು ತಾಂಡವವಾಡುತ್ತಿತ್ತು. ತನ್ನ ಕಿಸೆಯಿಂದ ಒಂದು ವಸ್ತ್ರವನ್ನು ತೆಗೆದು ಮೊಕವನ್ನೊರಸಿಕೊಂಡು, ಏನೂ ಆಗದಿರುವಾಗ ಸುಖವಾಗಿ ನಡೆಯುವಂತೆ, ನಡೆದುಕೊಂಡು ಕುದುರೆಯ ಬಳಿಗೆ ಬಂದನು. ಅವನನ್ನು ಕಂಡು ಕುದುರೆಯು ಪ್ರೀತಿ ಯಿಂದ ಕೆನೆಯುತ್ತಾ ಅವನ ಬಳಿಗೆ ತಾನೇ ಬಂದು ಮೂತಿಯನ್ನು ಅವನ ಮೂತಿಯಲ್ಲಿಟ್ಟು ಮೊಕಕ್ಕೆ ಮೊಕವನ್ನು ಒರೆಸಿತು.
ರಾಜಕುಮಾರನು ಅದನ್ನು ಕಂಡು, ‘ಅಬ್ಬಾ! ಕುದುರೆಗೆ ಮನುಷ್ಯನಮೇಲೆ ಇನ್ಪು ಪ್ರೀತಿ ಸಾಧ್ಯವೇ!’ ಎಂದನು. ಹಿಂತಿರುಗಿ ಹೆಂಡತಿಯಕಡೆ ನೋಡಿ, “ಮನುಷ್ಯರು ಇಷ್ಟು ಪ್ರೀತಿಸಬಲ್ಲರೆ ?’ ಎಂದನು. ಅದು ಕೇಳಿಸಲಿಲ್ಲ ಆಕೆಯೂ ಅದೇ ಭಾವನೆಯಿಂದ ಹಾಗೇ ಹೇಳಿಕೊಳ್ಳುತ್ತ ಕಣ್ಣಲ್ಲಿ ಬಂದ ನೀರನ್ನು ಒರೆಸಿಕೊಳ್ಳುವುದ ರಲ್ಲಿದ್ದಳು.
ಮಹಾರಾಜರಿಗೆ ಒಂದು ಗಳಿಗೆ ಅಭಿಮಾನದಿಂದ ಭಾವ ಸಮಾ ಧಿಯು ಬಂದಿತ್ತು. ರಾಜಕುಮಾರನು ರೆಸಿಡೆಂಟನನ್ನು ಕರೆದು “ಆತನಿ ಗೊಂದು ಟೈಟಲ್ ಕೊಡುತ್ತೀರಿ ತಾನೆ?” ಎಂದನು. ಆನಂದದಿಂದ ಮೈಮರೆತು ಇನ್ನೂ ಪೂರ್ಣವಾಗಿ ಪ್ರಜ್ಞೆಯಿಲ್ಲದ ರೆಸಿಡೆಂಟನು ‘ಅಪ್ಪಣೆ’ ಎಂದನು.
ಬೇಟೆ ಮುಗಿದನೇಲೆ ನಾಯಕನು ತಾನಾಗಿ ಮಾತನಾಡುವ ವರೆಗೂ ಯಾರೂ ಮಾತನಾಡಿಸಕೂಡದೆಂದು ಮೊದಲೇ ಗೊತ್ತಾಗಿತ್ತು. ಅದರಿಂದ ದೂರದಿಂದಲೇ ಎಲ್ಲರೂ ತಮ್ಮ ಸಂತೋಷನನ್ನು ಸೂಚಿಸಿ ಹೊರಟುಹೋದರು.
*****
ಮುಂದುವರೆಯುವುದು