
ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ ಅವ ಮಾತ್ರ ಮಾತಾಡುವುದಿಲ್ಲ ಭಿತ್ತಿಮುಖಿ ತೀರ ಮೌನಿ ಮಾತು ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ ಅರ್ಥಗರ್ಭಿತ ಮೌನಕಣಿವೆಯ ಅಗಾಧತೆ ...
ಮರದೊಳೆಂತೋ ಅಂತೆ ತುಂಬೊಲುಮೆ ಸಂತನೆಡೆ ನಿಶ್ಶಂಕೆಯೊಳು ನೆರೆವ ಹಕ್ಕಿಗಳ ತೆರದಿ ನಿಸ್ತಬ್ಧನೆನ್ನೆಡೆಗೆ ಬಹ ಭೀರುಭಾವಗಳ ಕೆಳೆಯ ನೋನೋಡೆಂದು ಸರಸ ಕೌತುಕದಿ ನುಡಿಬೆರಳ ನೇವರಿಕೆಗಳವಡುವ ಹಲಕೆಲವ- ನಾದರಿಸಿ ತೋರುತಿಹೆ ವೃತ್ತ ವೃತ್ತದೊಳು ಜೀವ ಜೀವದ ನ...
ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು ನಮ್ಮ ನಾಡಿನವರಲ್ಲ ಬಿಡು ಭಂಟನೆ ಇಂದು ಜುಲೈ ಐದು, ಎರಡುಸಾವಿರದ ಹದಿನೈದು ಬದುಕಿದ್ದರೆ ಕಾಸರ್ಬಾನು, ಅವಳ ಮಗುವಿಗೆ ಈಗ ಹದಿಮೂರರ ಹರೆಯ ಮೂಡುತ್ತಿತ್ತು. ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದ...
ಸಾಕು ತಾಯಿ, ಹಾಲು ನಿನ್ನ ಎದೆಯ ಹಾಲು ಬೇಡ ಇನ್ನು ರಕ್ತ ನಿನ್ನ ಒಡಲ ರಕ್ತ ನನ್ನ ತಪ್ಪು ನೂರು ನಿನ್ನ ಕೋಪಕಶಕ್ತ ಬಗೆದೆ ನಿನ್ನ ಒಡಲ ಗಣಿಯ ಹೆಸರಿನಲ್ಲಿ ಜೊತೆಗೆ ಕುಡಿದೆ ರಕ್ತ ತೈಲ ರೂಪದಲ್ಲಿ ನಿನ್ನ ಕರುಳ ಸವರಿ ಮಾಡಿದೆ ನಾ ಹೆದ್ದಾರಿ ಇಂಥ ಪಾಪ ...
ಪಂಚಗುರುಗಳು ಮಿಂಚಿ ಬಂದರು ಜ್ಯೋತಿ ಜಂಗಮವಾದರು ಪಂಚತತ್ವಕೆ ಪಂಚಪೀಠಕೆ ಪ೦ಚ ಧ್ವಜವನ್ನು ಹಿಡಿದರು ಶಾಂತಿ ಪ್ರೀತಿ ತ್ಯಾಗ ನೀತಿ ಮನುಜ ಸಂಸ್ಕೃತಿ ಮೆರೆದರು ದಾಳಿ ಇಟ್ಟಾ ಹಾಳು ಗೂಳಿಯ ಕಾಳ ಕತ್ತಲೆ ಕಳೆದರು ಆದಿಜ್ಯೋತಿರ್ಲಿಂಗ ಪೀಠದ ಅಮರ ಮಂತ್ರವ ಕ...
ಕಾದಿಹಳು ಭೂದೇವಿ, ನೀವು ಬಾರಿರಾ! ದಿವ್ಯ ತೀರ್ಥ ತಾರಿರಾ! ಬಿಸುಸುಯಿಲ ಬೇಗೆ ಹೊಮ್ಮಿ ಆಗಸವ ತಟ್ಟಿ ತಿವಿಯೆ ಹರಣವನೆ ಕೊರಳಲಿರಿಸಿ ಕರುಣೆಯನು ಕೇಳುತಿಹಳು ಕ್ಷಣ ಕ್ಷಣವು ನಿಮ್ಮ ನೆನಸು ಆನುದಿನವು ನಿಮ್ಮ ಕನಸು ಮರದುದಿಗೆ ಕಣ್ಣನಿರಿಸಿ ನೋಡುವಳು ಕ್...
ಆಕಾಶದಲ್ಲಿ ಧ್ವನಿ-ದೂರದಿಂದ ಕೃಷ್ಣ ಕೃಷ್ಣ ಜಯ ಕೃಷ್ಣ ಮುರಾರೇ ವಿತೃಷ್ಣನಾದೆನು ನಾ ಬಾಯಾರೆ ದ್ವಾರಕೆ ಬಾಗಿಲ ತೆರೆಯದೊ ಬಾರೆ ಉತ್ತರೆಯಿಂದುತ್ತರವನು ತಾರೆ. ಕೃಷ್ಣ ಕೃಷ್ಣ ಜಯ ಜಯ ತ್ರಿಪುರಾರೇ ಶರಪಂಜರದಲಿಯೊರಗರಲಾರೆ ಕೃಷ್ಣ ಕೃಷ್ಣ ಜಯ ಜಯ ಕೃಷ್ಣ ...













