Home / ಕವನ / ಕವಿತೆ / ಮಲ್ಲಯ್ಯ

ಮಲ್ಲಯ್ಯ

ವರವೂತವೆಂಬೂದು ಅರವತ್ತು ಗಾವೂದ
ಬರಲಾರೆನಯ್ಯ ಬಹುದೂರ | ನಿನ ಮುಡುವ
ಬರುವವರ ಕೂಡ ಕಳುಹೇನೊ || ೧

ಹರೆಯಾಗ ಏಳುತಲಿ, ಹರನಿನ್ನ ನೆನೆದೇನ
ಪಾತಾಳಗಂಗ್ಯಾಗ ಜಳಕವ | ಮಾಡುವಂಥ
ಮಲ್ಲಿಕಾರ್ಜುನನ ನೆನೆದೇನ || ೨

ಸಂಗಯ್ಯನಿರುವೂದು ಸಾಲ ಹುಣಸಿಯ ಮರ
ಸಂಗಯ್ಯನ ತಮ್ಮ ಗಿರಿಮಲ್ಲ | ಇರವೂದು
ತಿಂಗಳದ ದಾರಿ ವರವೂತ || ೩

ಪರವುತಗ್ಹೋಗಬೇಕಂತ, ವರಸಿ ತಯಾರ ಮಾಡಿ
ಬೆರಿಸ್ಯಾಳ ಬ್ಯಾಳಿ ನೆನಗಡಲಿ | ಪರವುತದ
ವರಸಿಗ್ಹಂಚಾಳ ಪನಿವಾರ || ೪

ಪಲ್ಲಕ್ಕಿ ಕೊಟ್ಟರ ಮಲ್ಲಯ್ಯ ಒಲ್ಲೆಂದ
ಮಲ್ಲನೆಂಬೂವ ಮರಿಗುದರಿ | ಕೊಟ್ಟರ
ಮೆಲ್ಲಕ ಮಟವ ನಿಳಿದಾನ || ೫

ಪರವೂತ ಗಿರಿಮ್ಯಾಲೆ ವಂಚಾಳ ಮರಹುಟ್ಟಿ
ಪಾತಳಕ ಬೇರ ಇಳಿದಾವ | ಆ ಬೇರು
ಬೋರಮಗ ನೆರಳ ಗವಿದಾವ || ೬

ಪರವೂತ ಗಿರಿಮ್ಯಾಲೆ ಅರಿದೊಂದು ಕಂಡೇನೊ
ಕರಿಯಗಂಡ್ಯಾಳಿ ಮುಂದ್ಹೂಡಿ | ಬಿತ್ಯಾರ
ಮಲ್ಲಯ್ಯ ಮುಡಿವ ದವನವ || ೭

ಪುಂಡ ಪರವುತಮಲ್ಲ ಗಂಡಮಗನ ಕೊಡು
ಚೆಂಡೂವಿನಂತ ಸೊಸೆದೇರಿಗೆ | ಕೊಟ್ಟಾರ
ಪುಂಡ ನಿನ ಗಿರಿಗೆ ಬರುವೆನು || ೮

ಚಿಂತೆ ಬಿಡಿಸೊ ನನ್ನ ಕಾಂತಿವರವುತಮಲ್ಲ
ಚಿಂತ್ಹೋಗಿ ನನಗ ಸೌಭಾಗ್ಯ | ಕೊಟ್ಟಾರ
ಕಂಬಿಗೆ ಮುತ್ತ ಬಿಗಿಸೇನೊ || ೯

ಮಲ್ಲಯ್ಯಗ್ಹೋದವರು ನಿಲ್ಲದಲಿ ಬಾರರ
ಅಲ್ಲಿ ರಾಚೋಟಿ ಶರಬಾಗ || ಹೋದವರು
ಪಲ್ಲೇವ ಬಿತ್ತಿ ಬೆಳೆದಾರ || ೧೦

ಕಂಬಿಯ ಹೊತ್ತಣ್ಣ ಇಂಬಾಗಿ ಹಾಯಣ್ಣ
ಕಂಬಿ ಕಂಬಿಗೆ ಕದಲ್ಯಾವ || ನಮನಿಮಗ
ಡಂಬಿ ತಾಗ್ಯಾವೊ ಗಿರಿಯಾಗೊ || ೧೧

ಕಂಬಿಯ ಹೊತ್ತಣ್ಣ ಕಂಬ ಕಾವಡಿ ಜೋಕೆ
ಅನಗಾಲ ಹಾದಿ ಅವಜೋಕೆ || ಕಂಬ್ಯಯ್ಯ
ಗಿರಿಯಿಳಿಯುಮುಂದ ಜೀವ್‌ಜೋಕೆ || ೧೨

ಕಂಬಿ ಹೊತ್ತಣ್ಣನ ತಂಗೇನು ಉಟ್ಟಾಳ
ಲಿಂಬಿ ಪಪ್ಪಳ ಜರತಾರೋ || ಉಟಗೊಂಡು
ಕಂಬಿಗಾರುತಿ ಬೆಳಗ್ಯಾಳೊ || ೧೩
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...