ನನ್ನೊಳಗೊಬ್ಬ ಸೈತಾನ ಯಾವಾಗಲೂ ಇರುತಾನ ನಾನೆಚ್ಚರಿರಲಿ ನಿದ್ರಿಸುತಿರಲಿ ತನ್ನಿಚ್ಛೆಯಂತೆ ಕುಣಿಸುತಾನ ಕುಣಿಸುತಾನ ದಣಿಸುತಾನ ಮನಸೋ‌ಇಚ್ಛೆ ಮಣಿಸುತಲು ಇರುತಾನ ಎಲ್ಲರನು ಬಯ್ಯುತಾನ ಬಡಿಯಲು ಕೈಯೆತ್ತುತಾನ ಕೊಂದು ಕೂಗುತಾನ ಯಾವಾಗಲೂ ಏನೊ ಒಂದು ಸಂಚ...

ಪಡುವ ಮಲೆಯ ಕಣಿವೆಯಾಚೆ ಹೊತ್ತು ಹಾರಿಹೋಗುತಿತ್ತು, ಮೂಡ ಮಲೆಯ ಹಲ್ಲೆ ಹತ್ತಿ ಇರುಳ ದಾಳಿ ನುಗ್ಗುತಿತ್ತು; ಬಿದ್ದ ಹೊನ್ನ ಕೊಳ್ಳೆ ಹೊಡೆದು ಕಳ್ಳಸಂಜೆಯೋಡುತಿತ್ತು, ತಲೆಯ ಬಾಗಿ ಪುರದ ದೀಪ ಜೀವದೊಂದಿಗಿದ್ದಿತು. ಪಾನಭೂಮಿಯಲ್ಲಿ ಮತ್ತ- ಜನದ ಮಾತಿನಲ...

ಗಂಡ: ನೂಲಲ್ಯಾಕ ಚೆನ್ನೀ! ನೂಲಲ್ಯಾಕ ಚೆನ್ನೀ! ಹೆಂಡತಿ: ರಾಟಲಿಲ್ಲೋ ಜಾಣಾ! ರಾಟಲಿಲ್ಲೋ ಜಾಣಾ! ಕತೆಗಾರ: ಮನಿಯಾನ ಬಂಡೀ ಮುರಿಸಿ ಮನಿಯಾನ ಬಂಡೀ ಮುರಿಸಿ ರಾಟೀ ಮಾಡಿಸಿ ಕೊಟ್ಟಾ ರಾಟೀ ಮಾಡಿಸಿ ಕೊಟ್ಟಾ ಗಂಡ: ನೂಲಲ್ಯಾಕ ಚೆನ್ನೀ! ನೂಲಲ್ಯಾಕ ಚೆನ್ನೀ...

‘ಬೇಸಗೆಯ ಬೇಸರಂ ಬೀಸು ೧ಕಾದಿಗೆಯೇ! ಮೊಗ್ಗರಿಸಿ ಮೊರೆ ಮುಗಿಲೆ! ಮಿನುಗು ಮೊನೆಮಿಂಚೇ!- ಮೇಣಿಂತು ಮಳೆಯ ಮುಂಬನಿ ಮಣಿದು ಹೊಂಚೆ ನಿನ್ನ, ನೀನದನೊಲ್ಲದೆಲ್ಲಿ ಚಾದಗೆಯೇ೨? ೪ ನಿನ್ನ ತನುವೆಂತು? ದನಿಯೆಂತು? ಮನೆಯೆಂತು? ದೆಸೆಡೆಸೆಯ ಸೋಸಿ ನಾ ಸ...

ಬಾರಣ್ಣ ನೀ ನೋಡು ಕರ್ನಾಟಕಾ ನಾಡು ದೇವಿ ಚಾಮುಂಡಿಯ ಗುಡಿ ನೋಡು; ನೋಡುತ್ತ ಕುಣಿಯುತ ನಲಿದಾಡು ಇನ್ನೆಲ್ಲು ಕಾಣದ ಮುಂದೆಲ್ಲು ನೋಡದ ಸೌಂದರ್ಯವಿಲ್ಲಿ ನೋಡು ಬಾರೊ; ಎದೆಬಿಚ್ಚಿ ರಾಗ ಹಾಡು ಬಾರೊ ಮುಗಿಲುದ್ದ ಗೋಪುರ ಮೈಲುದ್ದ ದೇಗುಲ ಕಣ್ಣಾರೆ ಕಂಡು ...

ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ ಕಾಡುದಾರಿಗಳೆಲ್ಲ ಒಣಗಿವೆ; ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು ಶಾಂತ ಆಗಸವನ್ನು ಪ್ರತಿಫಲಿಸಿದೆ; ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ ಐವತ್ತೊಂಬತ್ತು ಹಂಸ ತೇಲಿವೆ. ನಾನು ಮೊದಲೆಣಿಕೆ ಮಾಡಿದ್ದು ನ...

(೧) ಇದೊ! ನನ್ನ ಸ್ಮತಿಪಧದಿ ಎಸದನೀ ನಾಯಕನ ಹಾಳುಹಂಪೆಯಲಿರುವ ಮೂಲಗುಂಪೆಯನೊಂದ ಶೋಧಿಸುತ ನಡೆದಿರಲು ಹಾಳು ದೇಗುಲವೊಂದ ಕಂಡೆ ಜನರಗಿಯುತಿಹುದನು ಅವರ ಕಾಯಕವ- ನೀಕ್ಷಿಸುತ ನಿಂತಿರಲು ಗುಡಿಯ ಕಲ್ಲಂಬದಡಿ- ಗಿರುವ ಗುಹೆಯೊಂದರಲಿ ಓರ್‍ವ ವ್ಯಕ್ತಿಯ ಕಂಡ...

ಹೊಸತೆ ಇರಲಿ, ಹಳತೆ ಇರಲಿ, ಒಳಿತು ಯಾವುದೊ, ಬಾಳ್ಗೆ ಬರಲಿ! ಮೂಡಲೇನು, ಪಡುವಲೇನು? ಬೆಳಕ ಬದುಕಿಗೆ ಹೂಡಿ ತರಲಿ ! ಹಳ್ಳ-ತಿಟ್ಟು ಸರಿಯಲಿ- ಒಳ್ಳೆ ದಾರಿ ಸಮೆಯಲಿ! ೧ ಸೃಷ್ಟಿ ದೇವಿ ಕೊಟ್ಟ ಪಯಿರ ಒಟ್ಟು ಗೂಡುತಲೆಲ್ಲರೊಕ್ಕಲಿ! ಕೊಟ್ಟುಕೊಂಡು ಎಲ್ಲರ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...