ಉಮರನ ಒಸಗೆ – ೩೬

ಮೊನ್ನೆ ಸಂಜೆಯಲಿ ಮಧುವಾಟಿಕೆಯ ಬಾಗಿಲಲಿ ಗಂಧರ್‍ವನೊರ್‍ವನೆನ್ನೆಡೆಗೈದಿ ನಗುತೆ ತೋಳಿನಲಿ ತಳೆದಿರ್‍ದ ಪಾತ್ರೆಯನ್ನು ತೋರುತ್ತ ಕುಡಿಯೆಂದು ಬೆಸಸಿದನು; ಕುಡಿಯಲದು ಮಧುವು. *****

ಉಮರನ ಒಸಗೆ – ೩೫

ಅಸ್ತಿ ನಾಸ್ತಿಗಳೆಂಬ ತತ್ತ್ವಗಳ ಬಿತ್ತರಿಸಿ ಮೇಲು ಬೀಳುಗಳೆಂಬ ನಿಯಮಗಳ ತೋರ್‍ಪಾ ಕಲೆಯ ನಾಂ ಕಲಿತೊಡಂ, ತಳವನಾಂ ಮುಟ್ಟಿರ್‍ಪಾ ಕಲೆಯೊಂದದಾವುದೆನೆ-ಮಧು ದೈವ ಭಜನೆ. *****

ಉಮರನ ಒಸಗೆ – ೩೪

ಸಖನೆ, ನೀಂ ಬಹುದಿನದ ಪಿಂತೆನ್ನ ಮನೆಯೊಳಗೆ ಪೊಸ ಮದುವೆಯೌತಣಕೆ ಬಂದಿರ್‍ದೆಯಲ್ತೆ? ಒಣ ಬಂಜೆ ತರ್‍ಕ ವನಿತೆಯನಂದು ನಾಂ ತೊರೆದು ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ. *****

ಉಮರನ ಒಸಗೆ – ೩೧

ಹಾ! ತುಂಬು ಬಟ್ಟಲನು. ಕಾಲವದು ತಾಂ ನುಣ್ಚಿ ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ? ನಿನ್ನೆ ಸತ್ತಿಹುದಿನ್ನು, ನಾಳೆ ಹುಟ್ಟದೆಯಿಹುದು; ಇಂದು ಸೊಗವಿರಲವನ್ನು ನೆನೆದಳುವುದೇಕೆ? *****

ಉಮರನ ಒಸಗೆ – ೩೦

ಆಹ! ಅಂತಿರಬಹುದು. ಈ ಮಣ್ಣು ಹೊದ್ದಿಕೆಯೊ ಳೆನಿಬರೋ ಹುದುಗಿಹರು ನಮಗೆಡೆಯ ಬಿಟ್ಟು; ಅವರಂತೆ ನಾವಿಂದು ತಿರೆಯೌತಣವನುಂಡು, ಮರೆಯಾಗಿ ಬಳಿಕಿದನು ಕಿರಿಯರ್‍ಗೆ ಬಿಡುವಂ. *****